ಕಣ್ಣೂರ್ (ಕೇರಳ): ನಕ್ಸಲರು ಮತ್ತು ಜಿಹಾದಿಗಳ ಸಹವಾಸಕ್ಕೆ ಬಿದ್ದ ಈ ಹಿಂದೂ ಯುವತಿ ಅವರೊಟ್ಟಿಗೆ ಬದುಕು ರೂಪಿಸಿಕೊಳ್ಳಲು ತನ್ನ ತಂದೆ-ತಾಯಿ, ಸಂಬಂಧಿಕರು ಸೇರಿದಂತೆ ಎಲ್ಲರೊಂದಿಗೂ ಸಂಪರ್ಕ ಕಡಿದುಕೊಂಡಿದ್ದಳು. ಮಗಳನ್ನು ವಾಪಸ್ ಕರೆತರಲು ಆಕೆಯ ತಂದೆ-ತಾಯಿ ಎಷ್ಟೇ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಕೋರ್ಟ್‌ನಲ್ಲೂ ಅವಳು, ‘‘ನನಗೆ ಕುಟುಂಬಸ್ಥರ ಜತೆ ಹೋಗಲು ಇಷ್ಟವಿಲ್ಲ, ಸ್ನೇಹಿತರೊಂದಿಗೆ ಇರುತ್ತೇನೆ’’ ಎಂದು ಖಂಡತುಂಡವಾಗಿ ಹೇಳಿದ್ದಳು. ಅಷ್ಟರಮಟ್ಟಿಗೆ ಬದಲಾಗಿದ್ದ ಆ ಯುವತಿ ನಿನ್ನೆ (ಮೇ 15) ಗೋವಾದಿಂದ ತನ್ನ ತಾಯಿಗೆ ಕರೆ ಮಾಡಿ, ‘‘ಅಮ್ಮಾ, ನಾನು ಮನೆಗೆ ವಾಪಸ್ ಬರುತ್ತೇನೆ. ದಯವಿಟ್ಟು ಕರೆದುಕೊಂಡು ಹೋಗಿ’’ ಎಂದು ಕಣ್ಣೀರಿಟ್ಟಿದ್ದಳು. ಇವರು ಅವಳಿದ್ದಲ್ಲಿಗೆ ಹೋಗಿ ತಲುಪುವ ಹೊತ್ತಿಗೆ, ಅಂದರೆ ಶನಿವಾರ (ಮೇ 16), ಶವವಾಗಿದ್ದಳು!
ಇದನ್ನೂ ಓದಿರಿ ತಲೆ ಮರೆಸಿಕೊಂಡಿದ್ದ ಕುಖ್ಯಾತ ರೌಡಿ ಉಗುಳಿ ಸಿಕ್ಕಿಬಿದ್ದ!
ಹೀಗೆ ದುರಂತ ಅಂತ್ಯ ಕಂಡ ಯುವತಿಯ ಹೆಸರು ಅಂಜನಾ ಹರೀಶ್ ಅಲಿಯಾಸ್ ಚಿನ್ನು ಜುಲ್ಫಿಕರ್. ಕೇರಳದ ಹಿಂದು ಸಂಪ್ರದಾಯಸ್ಥ ಕುಟುಂಬವೊಂದರ ಹುಟ್ಟಿದ ಅಂಜನಾಗೆ ಸಾಹಿತ್ಯದಲ್ಲಿ ಅತೀವ ಆಸಕ್ತಿ. ಕಣ್ಣೂರಿನ ತಲಸ್ಸೇರಿಯ ಸರ್ಕಾರಿ ಬ್ರೆನ್ನನ್ ಕಾಲೇಜಿನಲ್ಲಿ ಮಲಯಾಳಂ ಸಾಹಿತ್ಯದ ಪದವಿ ವಿದ್ಯಾರ್ಥಿನಿಯಾಗಿದ್ದ ಈಕೆ, ಸಾಹಿತ್ಯ ಉತ್ಸವಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಳು.
ಈ ನಡುವೆ ನಗರ ನಕ್ಸಲರು ಮತ್ತು ಜಿಹಾದಿಗಳ ಸಂಪರ್ಕ ಆಕೆಗೆ ಬಂತು. ಅವರ ವಿಚಾರಧಾರೆಗಳನ್ನು ಅಪ್ಪಿಕೊಂಡಳು. ಹಿಂದೆ ಕೇರಳದಲ್ಲಿ ಆಯೋಜಿಸಿದ್ದ ಕಿಸ್ ಆಫ್ ಲವ್ ಎಂಬ ವಿವಾದಾತ್ಮಕ ಅಭಿಯಾನದಲ್ಲೂ ಪಾಲ್ಗೊಂಡಿದ್ದಳು. ಮಗಳು ದಾರಿ ತಪ್ಪುತ್ತಿರುವುದು ಪಾಲಕರಿಗೆ ಅರಿವಾಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು. ಅಷ್ಟೊತ್ತಿಗೆ ಕುಡಿತ, ಮಾದಕ ವ್ಯಸನದ ಚಟವನ್ನೂ ಆಕೆ ಅಂಟಿಸಿಕೊಂಡಿದ್ದಳು. ಮಗಳನ್ನು ಉಳಿಸಿಕೊಳ್ಳಲು ಪಾಲಕರು ಡಿ-ಅಡಿಕ್ಷನ್ ಸೆಂಟರ್‌ಗೂ ಕರೆದೊಯ್ದಿದ್ದರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿರಿ ಹೋಟೆಲ್ಗೆ ಕನ್ನ ಹಾಕಿದವರು ಹಸಿವನ್ನಷ್ಟೇ ತೀರಿಸಿಕೊಂಡರು…!
ಕಾಲೇಜಿನ ಕೊನೆಯ ದಿನದಿಂದ ಅಂಜನಾ ನಾಪತ್ತೆಯಾಗಿದ್ದಳು. ಅವಳ ಅಜ್ಜಿಯೇ ಆಕೆಯನ್ನು ಮನೆಯಲ್ಲಿ ಬಚ್ಚಿಟ್ಟಿದ್ದಾಳೆಂದು ಅಂಜನಾಳ ಗೆಳೆಯ/ಗೆಳತಿಯರು ಆರೋಪಿಸಿದ್ದರು. ಅಜ್ಜಿಯ ಮನೆಗೆ ಕಲ್ಲು ಎಸೆದು ಗಲಾಟೆ ಮಾಡಿದ್ದರು. ನಂತರ, ಮಗಳು ನಾಪತ್ತೆಯಾಗಿದ್ದಾಳೆ ಎಂದು ಅಂಜನಾಳ ತಾಯಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರು.
ನಕ್ಸಲೈಟ್ ನಾಯಕಿ ಅಜಿತಾಳ ಪುತ್ರಿ ಗಾರ್ಗಿಯ ಮನೆಯಲ್ಲಿ ಅಂಜನಾ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು ಆಕೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ‘‘ನಾನು ತಾಯಿಯ ಜತೆ ಹೋಗುವುದಿಲ್ಲ. ಗೆಳತಿ ಗಾರ್ಗಿಯ ಜತೆಗೇ ಇರುತ್ತೇನೆ’’ ಎಂದು ಅಂಜನಾ ವಾದಿಸಿದಳು. ಆಕೆಗೆ ವಯಸ್ಸು 22. ಅವಳೇನು ಅಪ್ರಾಪ್ತ ವಯಸ್ಕಳಲ್ಲ. ಆದ್ದರಿಂದ ಕೋರ್ಟ್ ಕೂಡ ಇದಕ್ಕೆ ಸಮ್ಮತಿಸಿತು. ಅಲ್ಲಿಂದಾಚೆಗೆ ಕುಟುಂಬಸ್ಥರ ಸಂಪರ್ಕದಿಂದ ದೂರವೇ ಹೋಗಿಬಿಟ್ಟಳು ಅಂಜನಾ. ಹಾಗಾಗಿ ಅವಳ ಜೀವನದಲ್ಲಿ ಏನಾಗುತ್ತಿದೆ ಎಂಬ ಯಾವ ಮಾಹಿತಿಯೂ ಮನೆಯವರಿಗೆ ಸಿಗುತ್ತಿರಲಿಲ್ಲ.
ಇದನ್ನೂ ಓದಿರಿ ಪತ್ನಿ, ಮಗ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಶವವಾಗಿ ಬಿದ್ದಿದ್ದ ಡಿಎಸ್ಪಿ: ಅಷ್ಟಕ್ಕೂ ನಡೆದಿದ್ದಾರೂ ಏನು?
ಮಾ. 17ರಂದು ಸ್ನೇಹಿತರೊಂದಿಗೆ ಅಂಜನಾ ಗೋವಾ ಪ್ರವಾಸಕ್ಕೆ ಹೋಗಿದ್ದಳು. ಇದ್ದಕ್ಕಿದ್ದಂತೆ ಮೇ 15ರಂದು ಸಂಬಂಧಿಕರಿಗೆ ಮತ್ತು ತಾಯಿಗೆ ಕರೆ ಮಾಡಿದ ಅಂಜನಾ, ‘‘ನಾನು ನಂಬಿದ್ದ ಸ್ನೇಹಿತರೆಲ್ಲರೂ ದ್ರೋಹಿಗಳು. ನನ್ನನ್ನು ದಯವಿಟ್ಟು ಮನೆಗೆ ಕರೆದುಕೊಂಡು ಹೋಗಿ’’ ಎಂದು ಬೇಡಿಕೊಂಡಳು. ಮಗಳನ್ನು ಕರೆತರಲು ಹಾತೊರೆದ ತಾಯಿ, ಪೊಲೀಸರಿಗೆ ವಿಷಯ ತಿಳಿಸಿದರು. ಅಂಜನಾ ತಂಗಿದ್ದ ಹೋಟೆಲ್ಗೆ ಪೊಲೀಸರು ಭೇಟಿ ನೀಡಿದಾಗ ಅಂಜನಾ ಆಗಲೇ ಶವವಾಗಿದ್ದಳು.
ಪ್ರೀತಿಯ ಬಲೆಯಲ್ಲಿ ಅಂಜನಾಳನ್ನು ಬೀಳಿಸಿಕೊಂಡಿದ್ದ ಜಿಹಾದಿಯು ಆಕೆಯ ಹೆಸರನ್ನು ಚಿನ್ನು ಜುಲ್ಫಿಕರ್ ಎಂದು ಬದಲಾಯಿಸಿದ್ದ ಎಂಬುದು ಮಗಳ ಸಾವಿನ ಬಳಿಕ ಪಾಲಕರಿಗೆ ತಿಳಿಯಿತು. ಪ್ರೀತಿಯ ಹೆಸರಲ್ಲಿ ಮೋಸ ಹೋದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸ್ನೇಹಿತರು ತಿಳಿಸಿದ್ದಾರೆ.
ಜಿಹಾದಿಗಳು ಪ್ರೀತಿ ಹೆಸರಲ್ಲಿ ಹಿಂದೂ ಯುವತಿಯರನ್ನು ಮಾನಸಿಕವಾಗಿ ಯಾಮಾರಿಸಿ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಇಂತಹ ಕೂಪಕ್ಕೆ ಬೀಳದಂತೆ ಹಿಂದೂಗಳು ತಮ್ಮ ಮಕ್ಕಳನ್ನು ಬೆಳೆಸಬೇಕು ಎಂದು ಹಿಂದೂ ಐಕ್ಯ ವೇದಿ ಸಂಘಟನೆಯ ನಾಯಕಿ ಶಶಿಕಲಾ ಟೀಚರ್ ಹೇಳಿದ್ದಾರೆ.
ಇದನ್ನೂ ಓದಿರಿ ಹೆಸರು, ಧರ್ಮವನ್ನು ಮುಚ್ಚಿಟ್ಟು ಪ್ರೀತಿಯ ನಾಟಕವಾಡಿ ಹಣ ಪಡೆದು ಯುವತಿಗೆ ವಂಚನೆ