ಆನವಟ್ಟಿ: ಭಾರತದ ಸಂವಿಧಾನವು ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವಾಗಿದ್ದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗಳಿಗೂ ಸಮಾನವಾದ ಹಕ್ಕು ನೀಡಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಸತೀಶ್ ತಿಳಿಸಿದರು.
ಪಪಂ, ಸಮಾಜ ಕಲ್ಯಾಣ, ಕೃಷಿ, ಕಂದಾಯ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಂವಿಧಾನ ಅಂಗೀಕರಿಸಿದ 75ನೇ ವರ್ಷಾಚರಣೆ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಉಪನ್ಯಾಸ ನೀಡಿದರು.
ಸಂವಿಧಾನವೂ ಕೇವಲ ಹಕ್ಕುಗಳನ್ನು ನೀಡಿಲ್ಲ. ಜತೆಗೆ ಪ್ರತಿಯೊಬ್ಬರಿಗೂ ಜವಾಬ್ದಾರಿಗಳನ್ನೂ ನೀಡಿದೆ ಎಂದರು. ಪಪಂ ಮುಖ್ಯಾಧಿಕಾರಿ ಸಂತೋಷ್‌ಕುಮಾರ್, ಜಿಪಂ ಮಾಜಿ ಸದಸ್ಯ ಎ.ಎಲ್.ಅರವಿಂದ್, ಪ್ರಮುಖರಾದ ಸುರೇಶ್ ಹಾವಣ್ಣನವರ್, ಎ.ಕೆ.ನಾಗರಾಜ್, ಹೊಳೆಲಿಂಗಪ್ಪ, ಶ್ರುತಿ, ಜಾಕೀರ್ ಅಹ್ಮದ್, ಮನೋಜ್, ಅಶೋಕ್, ಕಿರಣಕುಮಾರ್, ಎಚ್.ಜಿ.ಮನೋಜ್‌ಕುಮಾರ್, ಸಿ.ಮಂಜುನಾಥ, ಜಿ.ಎಸ್.ಮಂಜುನಾಥ, ಶಿವಲೀಲಾ ಹಿರೇಮಠ್ ಇತರರಿದ್ದರು.