More

    ಮಾಸಾಶನ ಪಾವತಿಯಲ್ಲಿ ಸೃಷ್ಟಿಯಾದ ಗೊಂದಲ!

    ವಿಕ್ರಮ ನಾಡಿಗೇರ ಧಾರವಾಡ
    ರಾಜ್ಯದ ಬಡ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸಾಮಾಜಿಕ ಭದ್ರತೆ ಯೋಜನೆ ಅಡಿ ಸರ್ಕಾರ ವಿವಿಧ ಮಾಸಾಶನಗಳನ್ನು ನೀಡುತ್ತಿದೆ. ಆದರೆ ಕಳೆದ 3&4 ತಿಂಗಳಿಂದ ಲಾನುಭವಿಗಳ ಖಾತೆಗೆ ಮಾಸಾಶನ ಜಮೆ ಆಗದೆ ಜೀವನ ನಡೆಸಲು ಪರದಾಡುವಂತಾಗಿದೆ.
    ಸಾಮಾಜಿಕ ಭದ್ರತೆ ಯೋಜನೆ ಅಡಿ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹೀಗೆ ವಿವಿಧ ಮಾಸಾಶನಗಳನ್ನು ನೀಡಲಾಗುತ್ತಿದೆ. ಆದರೆ ಸುಮಾರು 3 ತಿಂಗಳಿಂದ ಫಲಾನುಭವಿಗಳ ಖಾತೆಗೆ ಮಾಸಾಶನ ಜಮೆ ಮಾಡಲು ಕಾರಣ ಏನು? ಎಂಬುದೇ ಅಸ್ಪಷ್ಟವಾಗಿದೆ. ಹೀಗಾಗಿ ಫಲಾನುಭವಿಗಳು ನಿತ್ಯ ತಹಸೀಲ್ದಾರ ಕಚೇರಿ, ಬ್ಯಾಂಕ್​ಗಳಿಗೆ ಓಡಾಟ ನಡೆಸುವಂತಾಗಿದೆ.
    ಬಹುತೇಕ ಲಾನುಭವಿಗಳ ಪಿಂಚಣಿ ಜನವರಿವರೆಗೆ ಮಾತ್ರ ಜಮೆ ಆಗಿದೆ. ನಂತರ ಬ್ಯಾಂಕ್​ ಖಾತೆಗಳಿಗೆ ಜಮೆ ಆಗಿಲ್ಲ. ಚುನಾವಣೆ ದಿನಾಂಕ ೂಷಣೆ ಆಗುತ್ತಿದ್ದಂತೆ ಪಿಂಚಣಿಗಳಿಗೆ ಗ್ರಹಣ ಹಿಡಿದಂತಾಗಿದೆ ಎಂಬ ಸಂಶಯ ಮೂಡಿದೆ. ತಮ್ಮನ್ನು ಯೋಜನೆಯಿಂದ ಕೈ ಬಿಡಲಾಗಿದೆ ಎಂಬ ಚಿಂತೆಯಲ್ಲಿ ತೊಡಗಿರುವ ಲಾನುಭವಿಗಳು ನಿತ್ಯ ತಹಸೀಲ್ದಾರ ಕಚೇರಿಗೆ ಆಗಮಿಸಿ ಖಾತೆ ಮಾಹಿತಿ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
    6 ತಿಂಗಳ ಹಿಂದೆ ಪಿಂಚಣಿ ಹಣವನ್ನು ಲಾನುಭವಿ ನೀಡಿದ ಬ್ಯಾಂಕ್​ ಖಾತೆ ಬದಲು ಆಧಾರ ಲಿಂಕ್​ ಆಗಿರುವ ಬ್ಯಾಂಕ್​ ಖಾತೆಗೆ ಜಮೆ ಆಗುತ್ತಿರುವುದರಿಂದ ಲಾನುಭವಿಗಳಲ್ಲಿ ಗೊಂದಲ ಉಂಟಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಆಧಾರ್​ ಲಿಂಕ್​ ಆಗಿರುವ ಖಾತೆಗೂ ಪಿಂಚಣಿ ಜಮೆ ಆಗಿಲ್ಲ ಎಂದು ಕೆಲವರು ದೂರುತ್ತಿದ್ದಾರೆ. ಹೀಗಾಗಿ ಪಿಂಚಣಿ ಜಮೆಯಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಈ ಸಮಸ್ಯೆಗೆ ಅಧಿಕಾರಿಗಳೇ ಪರಿಹಾರ ನೀಡಬೇಕಿದೆ.
    ಒಂದು ವೇಳೆ ಅನುದಾನ ಕೊರತೆಯಿಂದ ಸರ್ಕಾರವೇ ಪಿಂಚಣಿ ಪಾವತಿಯಲ್ಲಿ ವಿಳಂಬ ಮಾಡಿದ್ದರೆ, ಜನರ ಕಷ್ಟ ಪರಿಹರಿಸಲು ಸದಾ ಸಿದ್ಧ ಎನ್ನುವ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಈ ಸಮಸ್ಯೆಗೆ ಪರಿಹಾರ ಕೊಡಿಸುವರೇ? ಎಂಬುದನ್ನು ಕಾದು ನೋಡಬೇಕಿದೆ.
    ಯಾವ ಯೋಜನೆಗೆ ಎಷ್ಟು?: ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆ (64 ರಿಂದ 65 ವಯಸ್ಸು)ಯಲ್ಲಿ 600 ರೂ., ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ (65 ವರ್ಷ ಮೇಲ್ಪಟ್ಟು) 1200 ರೂ., ಸಂಧ್ಯಾ ಸುರಕ್ಷಾ 1200 ರೂ., ಮನಸ್ವಿನಿ 600 ರೂ., ವಿಧವಾ ಯೋಜನೆ 800 ರೂ., ಅಂಗವಿಕಲ (ಶೇ. 45) 800 ರೂ., ಅಂಗವಿಕಲ (ಶೇ. 75) 1400 ರೂ., ಅಂಗವಿಕಲ (ಮಾನಸಿಕ) 2000 ರೂ., ಫಾರ್ಮರ್​ ವಿಡೊ ಪೆನ್ಶನ್​ ರೂ. 2000 ಹಾಗೂ ಮೈತ್ರಿ ಯೋಜನೆಯಲ್ಲಿ 600 ರೂ. ಪಿಂಚಣಿ ನೀಡಲಾಗುತ್ತಿದೆ.
    ಫಲಾನುಭವಿ ಮಾಹಿತಿ: ಧಾರವಾಡ ತಾಲೂಕಿನಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆಲ್ಲಿ 10332, ಸಂಧ್ಯಾ ಸುರಕ್ಷಾದಲ್ಲಿ 27802, ವಿಧವಾ ವೇತನ 14912, ಅಂಗವಿಕಲ 23269, ಮೈತ್ರಿ 5, ಮನಸ್ವಿನಿ 2211, ಫಾರ್ಮರ್​ ವಿಡೊ ಪೆನ್ಶನ್​ 52 ಸೇರಿ ಒಟ್ಟು 78583 ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ.

    ಫಲಾನುಭವಿಗಳ ಖಾತೆಗೆ ಪಿಂಚಣಿ ಜಮೆ ಆಗುತ್ತಿದೆ. ಹೊಸದಾಗಿ ಯೋಜನೆಯ ಲಾಭ ಪಡೆಯುವವರಿಗೆ ಮಾತ್ರ ಅನುಮೋದನೆ ನೀಡಲಾಗಿದೆ. ಉಳಿದಂತೆ ಹಳೇ ಲಾನುಭವಿಗಳಿಗೆ ಖಾತೆಗೆ ಹಣ ಪಾವತಿ ಆಗುತ್ತಿದೆ.
    *ಡಾ. ಡಿ.ಎಚ್​. ಹೂಗಾರ, ತಹಸೀಲ್ದಾರ, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts