More

    ಕರೊನಾ ಎಫೆಕ್ಟ್​, 15 ಪುಟಗಳ ನಿಧನ ಸುದ್ದಿ ಪ್ರಕಟಿಸಿದ ಅಮೆರಿಕ ಪತ್ರಿಕೆ

    ನ್ಯೂಯಾರ್ಕ್​: ಕರೊನಾದಿಂದಾಗಿ ಸೋಂಕಿತರು ಹಾಗೂ ಸಾವನ್ನಪ್ಪಿದವರ ಸಂಖ್ಯೆ ಅಮೆರಿಕದಲ್ಲಿ ಅತಿ ಹೆಚ್ಚಾಗಿದೆ. ಈವರೆಗೆ ಅಲ್ಲಿ 7,59,746 ಜನರು ಸೋಂಕಿಗೆ ಒಳಗಾಗಿದ್ದರೆ, ಮೃತಪಟ್ಟವರ ಸಂಖ್ಯೆ 41 ಸಾವಿರ ದಾಟಿದೆ.

    ಪ್ರತಿದಿನ ಸಾವಿರಾರು ಜನರು ಕೋವಿಡ್​-19 ಬಲಿಯಾಗುತ್ತಿದ್ದಾರೆ. ಮೂರು ದಿನಗಳ ಹಿಂದಷ್ಟೇ ಒಂದೇ ದಿನ 4,591 ಜನರು ಅಮೆರಿಕದಲ್ಲಿ ಮೃತಪಟ್ಟಿದ್ದರು. ನ್ಯಾಯಾರ್ಕ್​ನಲ್ಲಂತೂ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇತರ ನಗರದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನಿಲ್ಲ.

    ಮೆಸಾಚುಸೆಟ್ಸ್​ನಲ್ಲಿ 38,000 ಪ್ರಕರಣಗಳು ವರದಿಯಾಗಿದ್ದು, 1,700 ಜನರು ಮೃತಪಟ್ಟಿದ್ದಾರೆ. ಇದರ ರಾಜಧಾನಿಯಾಗಿರುವ ಬೋಸ್ಟನ್​ನಲ್ಲಿರುವ ದಿ ಗ್ಲೋಬ್​ ಎಂದೇ ಕರೆಯಲಾಗುವ ದಿ ಬೋಸ್ಟನ್​ ಗ್ಲೋಬ್​ ಪತ್ರಿಕೆ ಭಾನುವಾರದ ಆವೃತ್ತಿಯಲ್ಲಿ 15 ಪುಟಗಳ ನಿಧನ ಸುದ್ದಿಯನ್ನು ಪ್ರಕಟಿಸಿದೆ. ಇದು ಓದುಗರಲ್ಲಿಯೂ ಅಚ್ಚರಿ ಮೂಡಿಸಿದೆ.

    ಪಾಶ್ಚಾತ್ಯ ಪತ್ರಿಕೆಗಳಲ್ಲಿ ಮೃತರ ವಿವರವನ್ನು ಪುಟಗಟ್ಟಲೇ ಪ್ರಕಟಿಸುವುದು ವಿಶೇಷವೇನಲ್ಲ. ಬಹುತೇಕ ಪತ್ರಿಕೆಗಳಲ್ಲಿ ಆಗಾಗ ಇಂಥ ವಿದ್ಯಮಾನಗಳು ಕಂಡು ಬರುತ್ತವೆ. ಆದರೆ, ಬರೋಬ್ಬರಿ 15 ಪುಟಗಳನ್ನು ನಿಧನ ಸುದ್ದಿಗಾಗಿ ಮೀಸಲಿಟ್ಟಿದ್ದು ಇದೇ ಮೊದಲು. ಕೆಲ ದಿನಗಳ ಹಿಂದೆ ಇಟಲಿಯ ‘ಬರ್ಗಾಮೊ ಇಟಲಿ’ ಪತ್ರಿಕೆ ಕೂಡ ಪುಟಗಟ್ಟಲೇ ನಿಧನ ಸುದ್ದಿ ನೀಡಿತ್ತು.

    ಗ್ಲೋಬ್​ ಪತ್ರಿಕೆ 148 ವರ್ಷಗಳ ಇತಿಹಾಸ ಹೊಂದಿದೆ. 1872ರಲ್ಲಿ ಚಾಲ್ಸ್​ ಎಚ್​. ಟೇಲರ್​ ಎಂಬುವರು ಈ ಪ್ರತಿಕೆ ಆರಂಭಿಸಿದರು. ಅತ್ಯಂತ ಪ್ರಭಾವಿ ಪತ್ರಿಕೆ ಎನಿಸಿರುವ ಗ್ಲೋಬ್​ಅನ್ನು 1993ರಲ್ಲಿ ನ್ಯೂಯಾರ್ಕ್​ ಟೈಮ್ಸ್​ ದಾಖಲೆಯ 1.1 ಬಿಲಿಯನ್ ಡಾಲರ್​ಗೆ (ಅಂದಾಜು 8,410 ಕೋಟಿ ರೂ) ಖರೀದಿಸಿತು. ಇದಾದ ಇಪ್ಪತ್ತು ವರ್ಷಗಳ ಬಳಿಕ 2013ರಲ್ಲಿ ಜಾನ್​ ಹೆನ್ರಿ ಎಂಬುವರು 70 ಮಿಲಿಯನ್​ ಡಾಲರ್​ಗೆ (535 ಕೋಟಿ ರೂ.) ನ್ಯೂಯಾರ್ಕ್​ ಟೈಮ್ಸ್​ನಿಂದ ಖರೀದಿಸಿದರು. ಅಂದರೆ ಇದರ ಮೌಲ್ಯಕ್ಕಿಂತ ಶೇ.93ರಷ್ಟು ಕಡಿಮೆ ದರಕ್ಕೆ ಬಿಕರಿಯಾಯ್ತು. ಇಷ್ಟಾಗಿಯೂ ಇದು ಬೋಸ್ಟನ್​ನಲ್ಲಿಯೇ ಅತಿ ಪ್ರಸಾರದ ಪತ್ರಿಕೆ ಎನಿಸಿದೆ.

    ಪ್ಯಾರಿಸ್​ನ ನೀರಿನಲ್ಲೂ ಕರೊನಾ ವೈರಸ್​, ಪೂರೈಕೆ ಬಂದ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts