More

    ಮೋಹದ ಬಲೆಗೆ ಬಿದ್ದ.. ತಪ್ಪಿಸಿಕೊಳ್ಳಲು ಹೋಗಿ ಜೈಲು ಸೇರಿದ! ಕೋಲಾರದಲ್ಲಿ ನಡೆದಿದ್ದ ಕೊಲೆ ರಹಸ್ಯ ಭೇದಿಸಿದ ಪೊಲೀಸರು..

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ವಿವಾಹೇತರ ಸಂಬಂಧಗಳಿಂದಾಗಿ ಅನೇಕ ಹತ್ಯೆಗಳು ನಡೆಯುತ್ತಿವೆ. ಇದರಿಂದ ಅವರ ಸಂಸಾರಗಳು ಶೋಕಸಾಗರದಲ್ಲಿ ಮುಳುಗುವಂತಾಗುತ್ತಿವೆ. ಇನ್ನು ಅಪರಾಧ ಎಸಗಿ ತಪ್ಪಿಸಿಕೊಳ್ಳಲು ಕೊಲೆಗಡುಕರು ಎಷ್ಟೇ ಪ್ರಯತ್ನಿಸಿದರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಮಹಿಳೆ ಕೊಲೆ ಪ್ರಕರಣವೊಂದರಲ್ಲಿ ಬರೋಬ್ಬರಿ 1ವರ್ಷದ ಬಳಿಕ ಬಾವ, ಬಾಮೈದ ಕಂಬಿ ಎಣಿಸುವಂತಾಗಿದೆ. ಈ ಘಟನೆ ನಡೆದಿರುವುದು ಬೆಂಗಳೂರು- ಕೋಲಾರದಲ್ಲಿ. ಸಂಪೂರ್ಣ ವಿವರ ಇಲ್ಲಿದೆ…

    ಇದನ್ನೂ ಓದಿ: ಬ್ಯಾಂಕ್ ಗ್ರಾಹಕರಿಗೆ ಭಾರಿ ನಷ್ಟ! ಏಪ್ರಿಲ್​ನಿಂದ ಹೊಸ ನಿಯಮಗಳು..

    2023ರ ಏಪ್ರಿಲ್ 19ರಂದು ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮೇರಹಳ್ಳಿ ಕೆರೆಯಲ್ಲಿ ಮುಸ್ಲಿಂ ಮಹಿಳೆಯ ಶವ ಪತ್ತೆಯಾಗಿತ್ತು. ಆಕೆಯನ್ನು ಬರ್ಬರವಾಗಿ ಕೊಂದು ಮೃತದೇಹಕ್ಕೆ ಕಲ್ಲು ಕಟ್ಟಿ ಕೆರೆಗೆ ಎಸೆಯಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು.

    ಬರೋಬ್ಬರಿ ಒಂದು ವರ್ಷದಿಂದ ಎಲ್ಲ ಆಯಾಮಗಳಲ್ಲಿ ಕೊಲೆ ಪ್ರಕರಣ ಭೇದಿಸಲು ಯತ್ನಿಸಿದರೂ ಆರೋಪಿಗಳ ಪತ್ತೆಯಾಗಿರಲಿಲ್ಲ. ಕಡೆಗೆ ಮಹಿಳೆಯ ಕೊಲೆಯ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ವಿವರಗಳಿಗೆ ಹೋಗುವುದಾದರೆ..

    ಸೌಂದರ್ಯವತಿ ಸುಲ್ತಾನಾ: ಬೆಂಗಳೂರಿನ ಎಚ್ ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮರೆಡ್ಡಿ ಕಾಲೋನಿಯ ಸುಲ್ತಾನಾತಾಜ್ ಸೌಂದರ್ಯ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಳು. ಗಂಡನಿಲ್ಲ, ಮಕ್ಕಳೊಂದಿಗೆ ವಾಸವಾಗಿದ್ದಳು. ಇದೇ ಏರಿಯಾದಲ್ಲಿ ಕೋಲಾರದ ನೂರನಗರದ ಅಬ್ರಾರ್ ಅಹಮದ್ ಮೊಬೈಲ್ ಅಂಗಡಿ ನಡೆಸಿಕೊಂಡು ವಾಸವಾಗಿದ್ದ. ಸುಲ್ತಾನಾ ಮತ್ತು ಅಬ್ರಾರ್ ಪರಿಚಯವಾಗಿ ಆ ಸಂಪರ್ಕ ಅಕ್ರಮ ಸಂಬಂಧಕ್ಕೆ ತಿರುಗಿತ್ತು.

    ಅಬ್ರಾರ್ ಅಹ್ಮದ್ ಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳಿದ್ದರು. ಆದರೂ ಇಬ್ಬರೂ ಲವ್ವಿಡವ್ವಿ ಶುರು ಮಾಡಿಕೊಂಡಿದ್ದರು. ಒಮ್ಮೆ ಸುಲ್ತಾನಾ ತನ್ನೊಂದಿಗೆ ಅಹ್ಮದ್​ ಏಕಾಂತದಲ್ಲಿದ್ದ ಖಾಸಗಿ ವಿಡಿಯೋ ಮಾಡಿಕೊಂಡಿದ್ದು, ವೀಡಿಯೋ ಮತ್ತು ಫೋಟೋಗಳನ್ನು ತೋರಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಅಹ್ಮದ್​ ಹಣಕೊಟ್ಟು ಸಾಕಾಗಿ ಹೇಗಾದರೂ ಮಾಡಿ ಆಕೆಗೆ ಅಂತ್ಯ ಕಾಣಿಸಬೇಕೆಂದು ನಿರ್ಧರಿಸಿದ್ದ.

    ಅದರಂತೆ 2023ರ ಮಾರ್ಚ್ 17 ರಂದು ಆತ ತನ್ನ ಕಾರಿನಲ್ಲಿ ಸುಲ್ತಾನಾಳನ್ನು ಕರೆದುಕೊಂಡು ಕೋಲಾರದ ಕಡೆ ಹೊರಟಿದ್ದಾರೆ. ಮಾರ್ಗಮಧ್ಯೆ ಆತ ತನ್ನ ಸೋದರ ಮಾವ ಸಾಧಿಕ್ ಪಾಷಾನನ್ನು ಕರೆಸಿಕೊಂಡಿದ್ದಾನೆ. ಮೂವರು ನಿರ್ಜನ ಪ್ರದೇಶದ ಪಾಳುಬಿದ್ದ ಮನೆಗೆ ತೆರಳಿದ್ದಾರೆ. ಅಲ್ಲಿ ಸುಲ್ತಾನಾಳಿಗೆ ಚಾಕುವಿನಿಂದ ಇರಿದು ಜ್ಯಾಕ್ ರಾಡ್ ನಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾನೆ. ಬಳಿಕ ಮೃತ ದೇಹಕ್ಕೆ ಕಲ್ಲು ಕಟ್ಟಿ ಅಮ್ಮೇರಹಳ್ಳಿ ಕೆರೆಗೆ ಎಸೆದಿದ್ದಾರೆ.

    ಮೃತದೇಹ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸುಲ್ತಾನಾ ತಾಜ್ ತಾಯಿ ಹಸನಿ ತಾಜ್ ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಒಂದು ವರ್ಷ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದರು. ಸುಲ್ತಾನಾ ಫೋನ್ ಕರೆಗಳು ಮತ್ತು ವಾಟ್ಸಾಪ್ ಚಾಟ್‌ಗಳನ್ನು ತನಿಖೆ ಮಾಡಲಾಯಿತು.

    ವರ್ಷವಿಡೀ ನಡೆದ ತನಿಖೆಯಲ್ಲಿ ಅಬ್ರಾರ್ ಜತೆಗಿನ ಆಕೆಯ ಅಕ್ರಮ ಸಂಬಂಧ ಬೆಳಕಿಗೆ ಬಂದಿತು. ಆತನನ್ನು ಹಿಡಿದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾವೇ ಕೊಲೆ ಮಾಡಿದ್ದು, ಸೋದರ ಮಾವ ಸಹಾಯ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಮೂಲಕ ಒಂದು ವರ್ಷದಿಂದ ನಡೆಯುತ್ತಿದ್ದ ನಿಗೂಢತೆ ಕೊನೆಗೂ ಭೇದಿಸಿದೆ.

    ಎಟಿಎಂಗಳಲ್ಲಿ ಹಣ ಕದಿಯುತ್ತಿದ್ದ ಕಳ್ಳನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts