More

    ಲಾಕ್​ಡೌನ್​ ವೇಳೆ ಸೀರಿಯಲ್​ ನೋಡಿ ಮಕ್ಕಳಿಗಾಗಿ ರಾಮಾಯಣ ಪುಸ್ತಕ ಬರೆದ 10ರ ಬಾಲಕ!

    ಭುವನೇಶ್ವರ್​: ಮಹಾಮಾರಿ ಕರೊನಾಗೆ ಕಡಿವಾಣ ಹಾಕಲು ಕಳೆದ ವರ್ಷ ಮಾರ್ಚ್​ನಲ್ಲಿ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಿಸಲಾಗಿತ್ತು. ಈ ವೇಳೆ ರಾಮಾಯಣ ಸೇರಿದಂತೆ ಅನೇಕ ಹಳೇ ಧಾರಾವಾಹಿಗಳನ್ನು ಪ್ರದರ್ಶಿಸಲಾಗಿತ್ತು. ಇದೀಗ ಒಡಿಶಾದ ಹತ್ತು ವರ್ಷದ ಬಾಲಕನೊಬ್ಬ ಲಾಕ್​ಡೌನ್​ನಲ್ಲಿ ರಾಮಾಯಣ ಸೀರಿಯಲ್​ ನೋಡಿ ಮಕ್ಕಳಿಗಾಗಿ ರಾಮಯಾಣ ಪುಸ್ತಕವನ್ನೇ ಬರೆದಿದ್ದಾನೆ.

    ಆಯುಷ್​ ಕುಮಾರ್​ ಕುಂತಿಯಾ ರಾಮಾಯಣ ಪುಸ್ತಕ ಬರೆದ ಬಾಲಕ. ತಮ್ಮದೇ ಒರಿಯಾ ಭಾಷೆಯಲ್ಲಿ ರಾಮಾಯಣವನ್ನು ಬರೆದಿದ್ದು, ಅದಕ್ಕೆ ಪಿಲಕಾ ರಾಮಾಯಣ (ಮಕ್ಕಳ ರಾಮಾಯಣ) ಎಂದು ಹೆಸರಿಡಲಾಗಿದೆ. ಪುಸ್ತಕವು 104 ಪುಟಗಳನ್ನು ಹೊಂದಿದೆ.

    ಇದನ್ನೂ ಓದಿರಿ: ಮದುವೆ ಮಂಟಪಕ್ಕೆ ವಧು ಎಂಟ್ರಿ ಕೊಟ್ಟ ರೀತಿಗೆ ಅತಿಥಿಗಳು ಫಿದಾ..!

    ಈ ಬಗ್ಗೆ ಮಾತನಾಡಿರುವ ಆಯುಷ್​, ಲಾಕ್​ಡೌನ್​ ಸಮಯದಲ್ಲಿ ಟಿವಿಯಲ್ಲಿ ಮರು ಪ್ರಸಾರ ಆಗುವ ರಾಮಾಯಣ ವೀಕ್ಷಿಸುವಂತೆ ನನ್ನ ಅಂಕಲ್​ ಹೇಳಿದರು. ವೀಕ್ಷಿಸುವುದು ಮಾತ್ರವಲ್ಲದೆ ಏನಾದರೂ ಬರೆಯಲು ಸೂಚಿಸಿದರು.

    ದೂರದರ್ಶನದಲ್ಲಿ ಪ್ರತಿದಿನ ಪ್ರಸಾರವಾಗುತ್ತಿದ್ದ ರಾಮಾಯಣದ ಎಲ್ಲ ಎಪಿಸೋಡ್​ಗಳನ್ನು ನೋಡಿದೆ. ಪ್ರತಿ ಎಪಿಸೋಡ್​ ಮುಗಿದ ಬಳಿಕ ಅದರ ಬಗ್ಗೆ​ ನೋಟ್​ಬುಕ್​ನಲ್ಲಿ ಬರೆದುಕೊಳ್ಳುತ್ತಿದ್ದೆ. ಪುಸ್ತಕವನ್ನು ಮುಗಿಸಲು ಸುಮಾರು 2 ತಿಂಗಳು ತೆಗೆದುಕೊಂಡಿತು ಎಂದು ಆಯುಷ್​ ಹೇಳಿದ್ದಾನೆ.

    ರಾಮನ 14 ವರ್ಷಗಳ ವನವಾಸ ಮತ್ತು ರಾವಣ, ಸೀತೆಯನ್ನು ಅಪಹರಿಸಿದ್ದು ಸೇರಿದಂತೆ ಅನೇಕ ಪ್ರಮುಖ ಘಟನೆಗಳನ್ನು ರಾಮಾಯಣ ಪುಸ್ತಕದಲ್ಲಿ ಪ್ರಸ್ತುತಪಡಿಸಿದ್ದೇನೆ. ಅಲ್ಲದೆ, ರಾಮ ಅಯೋಧ್ಯೆಗೆ ಹಿಂದಿರುಗಿದಾಗ ಆತನಿಗೆ ಸಿಕ್ಕ ಭವ್ಯ ಸ್ವಾಗತವನ್ನು ಸಹ ವಿವರಿಸಿದ್ದೇನೆಂದು ಆಯುಷ್​ ಮಾಹಿತಿ ನೀಡಿದನು. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ‘ಉತ್ತರ ಪ್ರದೇಶದಲ್ಲಿ 350 ಸೀಟು ಗೆದ್ದೇ ಗೆಲ್ಲುತ್ತೇವೆ’

    ಮದುವೆ ಮಂಟಪಕ್ಕೆ ವಧು ಎಂಟ್ರಿ ಕೊಟ್ಟ ರೀತಿಗೆ ಅತಿಥಿಗಳು ಫಿದಾ..!

    “ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್​ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts