More

    ‘ಉತ್ತರ ಪ್ರದೇಶದಲ್ಲಿ 350 ಸೀಟು ಗೆದ್ದೇ ಗೆಲ್ಲುತ್ತೇವೆ’

    ಲಖನೌ: ಪಂಚ ರಾಜ್ಯಗಳಲ್ಲಿ ಚುನಾವಣಾ ಕಣದ ರಂಗು ಹೆಚ್ಚಲಾರಂಭಿಸಿದೆ. ಈ ಚುನಾವಣೆಗಳ ನಂತರ ಉತ್ತರ ಪ್ರದೇಶದಲ್ಲಿ ಮುಂಬರುವ ವರ್ಷದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಆಡಳಿತ ಪಕ್ಷವು ಚುನಾವಣಾ ಸಿದ್ಧತೆಯನ್ನು ಆರಂಭಿಸಿದ್ದು, ಚುನಾವಣೆಯಲ್ಲಿ ಕನಿಷ್ಠ 350 ಸೀಟನ್ನು ತಮ್ಮದಾಗಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದೆ.

    ಖಾಸಗಿ ವಾಹಿನಿಯೊಂದರೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಚುನಾವಣೆಯ ಕುರಿತಾಗಿ ಮಾತನಾಡಿದ್ದಾರೆ. ನಮಗೆ ಪ್ರಬಲ ಮೈತ್ರಿ ಪಕ್ಷಗಳಿವೆ. ನಾವು ಮುಂದಿನ ಚುನಾವಣೆಯಲ್ಲಿ 403 ಸೀಟುಗಳಲ್ಲಿ ಕನಿಷ್ಠ 350 ಸೀಟು ನಮ್ಮದಾಗಿಸಿಕೊಳ್ಳುತ್ತೇವೆ. ಕಳೆದ ನಾಲ್ಕು ವರ್ಷಗಳಿಂದ ನಾವು ಬಜೆಟ್​ನಲ್ಲಿ ಯಾವುದೇ ತೆರಿಗೆ ಹೆಚ್ಚಿಸಿಲ್ಲ ಅಥವಾ ಹೊಸ ತೆರಿಗೆ ಹೇರಿಲ್ಲ. ಕರೊನಾದ ಕಷ್ಟ ಕಾಲದಲ್ಲೂ ಯಾವುದೇ ಹೊಸ ತೆರಿಗೆಯನ್ನು ತರಲಿಲ್ಲ ಎಂದು ಅವರು ಹೇಳಿದ್ದಾರೆ.

    ಕರೊನಾ ನಿಯಂತ್ರಣ ವಿಚಾರದಲ್ಲಿ ರಾಜ್ಯವು ಅತ್ಯಂತ ಅದ್ಭುತ ಕೆಲಸ ಮಾಡಿದೆ. ನಮ್ಮ ರಾಜ್ಯದಲ್ಲಿರುವ ಜನಸಂಖ್ಯೆ ಬ್ರೆಜಿಲ್​ನ ಜನಸಂಖ್ಯೆಗೆ ಸರಿಸಮವಿದೆ. ಅಲ್ಲಿನ ಪರಿಸ್ಥಿತಿಗೂ ನಮ್ಮಲ್ಲಿನ ಪರಿಸ್ಥಿತಿಗು ನೀವೇ ವ್ಯತ್ಯಾಸ ನೋಡಬಹುದು. ವಿಶ್ವ ಆರೋಗ್ಯ ಸಂಸ್ಥೆಯೂ ನಮ್ಮ ರಾಜ್ಯವನ್ನು ಹೊಗಳಿದೆ ಎಂದು ಆದಿತ್ಯಾನಾಥ ಅವರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮದುವೆ ಮಂಟಪಕ್ಕೆ ವಧು ಎಂಟ್ರಿ ಕೊಟ್ಟ ರೀತಿಗೆ ಅತಿಥಿಗಳು ಫಿದಾ..!

    ಸಿಗರೇಟ್ ಸೇದುವ ವಿಚಾರಕ್ಕೆ ರಿಯಾಲಿಟಿ ಶೋ ಸ್ಫರ್ಧಿಯ ಕಿರಿಕ್‌: ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts