More

    15ರಂದು ಉಡುಪಿಯಲ್ಲಿ ವಿಶ್ವದಾಖಲೆಗಾಗಿ ತನುಶ್ರೀ ಯೋಗಾಸನ

    ಉಡುಪಿ: ಸೈಂಟ್ ಸಿಸಿಲಿ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅವರಿಂದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ 7ನೇ ವಿಶ್ವದಾಖಲೆಗಾಗಿ 45 ನಿಮಿಷದಲ್ಲಿ 200 ಯೋಗಾಸನ ಪ್ರದರ್ಶನ ಆ.15ರಂದು ಮಧ್ಯಾಹ್ನ 2.30ಕ್ಕೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಏರ್ಪಡಿಸಲಾಗಿದೆ.
    75ನೇ ಸ್ವಾತಂತ್ರೊೃೀತ್ಸವ ಸವಿನೆನಪಿಗಾಗಿ ಆಯೋಜಿಸಿರುವ ಯೋಗಾಸನ ಸ್ಪರ್ಧೆಯಲ್ಲಿ ದೇಶಾದ್ಯಂತ ಚಾಲ್ತಿಯಲ್ಲಿರುವ ಯೋಗದ 200 ಭಂಗಿಗಳನ್ನು ಒಂದೆಡೆ ಸೇರಿಸುವ ವಿಶಿಷ್ಟ ಪ್ರಯೋಗ ನಡೆಯಲಿದೆ ಎಂದು ತನುಶ್ರೀ ತಂದೆ ಉದಯ್‌ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಅಧಿಕಾರಿ ಮನೀಷ್ ವೈಷ್ಣವ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 5 ಮಂದಿ ಯೋಧರನ್ನು ಸನ್ಮಾನಿಸಲಾಗುವುದು. ಕೇಂದ್ರ ಸರ್ಕಾರ ಯೋಗವನ್ನು ಕ್ರೀಡೆಯಾಗಿ ಪರಿಗಣಿಸಿರುವುದರಿಂದ ಭವಿಷ್ಯದಲ್ಲಿ ಯೋಗ ಸಾಧಕರಿಗೆ ಉತ್ತಮ ಅವಕಾಶ ಲಭ್ಯವಾಗಲಿದೆ ಎಂದು ತಿಳಿಸಿದರು. ಯೋಗಪಟು ತನುಶ್ರೀ ಪಿತ್ರೋಡಿ, ವಿಜಯ ಕೋಟ್ಯಾನ್, ರತನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts