More

    ಗುರುಪೌರ್ಣಮಿಯಂದು ದಿಗ್ಗಜರಿಗೆ ನಮನ ಸಲ್ಲಿಸಿದ ತಮನ್​

    ಭಾನುವಾರ ಗುರುಪೌರ್ಣಮಿಯಂದು ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಱರನ್ನು ನೆನಪಿಸಿಕೊಂಡಿದ್ದಾರೆ. ಅವರಿಗೆ ಗುರು ನಮನಗಳನ್ನು ಸಲ್ಲಿಸಿದ್ದಾರೆ. ಅದೇ ರೀತಿ, ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್​.ಎಸ್​. ತಮನ್​ ಅವರನು ನಮನ ಸಲ್ಲಿಸಿದ್ದು ಯಾರಿಗೆ ಗೊತ್ತಾ? ಕನ್ನಡ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕರಾದ ರಾಜನ್​-ನಾಗೇಂದ್ರ ಅವರಿಗೆ.

    ರಾಜನ್​ ಮತ್ತು ನಾಗೇಂದ್ರ ಅವರು ಸಂಗೀತ ಜೋಡಿ, ಬರೀ ಕನ್ನಡಕ್ಕೆ ಮಾತ್ರ ಸೀಮಿತವಲ್ಲ. ಕನ್ನಡವಲ್ಲದೆ ಬೇರೆ ಭಾಷೆಗಳಲ್ಲೂ ಅವರು ಕೆಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ತಮ್ಮ ಮೆಲೋಡಿ ಹಾಡುಗಳಿಂದ ಅಲ್ಲಿನ ಹಲವು ಜನರ ಮನಸ್ಸು ಗೆದ್ದಿದ್ದಾರೆ.

    ಇದನ್ನೂ ಓದಿ: ಕರೊನಾ ರಣಕೇಕೆ ಹಾಕುತ್ತಿರುವ ನಾಡಲ್ಲೇ ಅಕ್ಷಯ್​ ಕುಮಾರ್ ಸಿನಿಮಾ ಶೂಟಿಂಗ್​

    ಕೆಲವು ವರ್ಷಗಳ ಹಿಂದೆ ಪತ್ರಿಕಾಗೋಷ್ಠಿಯೊಂದರಲ್ಲಿ, ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್​ ಅವರು ರಾಜನ್​-ನಾಗೇಂದ್ರ ತಮ್ಮ ಗುರುಗಳು ಎಂದು ಹೇಳಿಕೊಂಡಿದ್ದರು. ಮೆಲೋಡಿ ಹಾಡುಗಳಿಗೆ ಸಂಗೀತ ಸಂಯೋಜಿಸುವಲ್ಲಿ ನಿಷ್ಣಾತರಾಗಿರುವ ಜೆಸ್ಸಿ ಗಿಫ್ಟ್​, ರಾಜನ್​-ನಾಗೇಂದ್ರ ಅವರ ಮೆಲೋಡಿ ಹಾಡುಗಳಿಗೆ ಸಾಟಿ ಇಲ್ಲ ಎಂದು ಹೇಳಿದ್ದರು.

    ಈಗ ಎಸ್​.ಎಸ್​. ತಮನ್​ ಸಹ ರಾಜನ್​-ನಾಗೇಂದ್ರ ಅವರನ್ನು ಕೊಂಡಾಡಿದ್ದಾರೆ. ಕನ್ನಡದಲ್ಲೂ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ತಮನ್​ ಅವರು, ಗುರು ಪೌರ್ಣಿಮೆಯ ಅಂಗವಾಗಿ ರಾಜನ್​-ನಾಗೇಂದ್ರ ಅವರನ್ನು ನೆನಪಿಸಿಕೊಂಡು ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಯೋಗಿ ಹುಟ್ಟುಹಬ್ಬಕ್ಕೆ ಸಿಕ್ತು ಒಂದು ಸ್ಪೆಷಲ್​ ಗಿಫ್ಟ್​ …

    ಕನ್ನಡ ಸಿನಿ ಸಂಗೀತದ ಎರಡು ಕಣ್ಣುಗಳಾದ “ರಾಜನ್ -ನಾಗೇಂದ್ರ” ರವರು ನನ್ನ ಸಂಗೀತ ಸಾಧನೆಯ ದಾರಿಗೆ ಮಾರ್ಗದರ್ಶನಮಾಡಿ ಚೈತನ್ಯ ತುಂಬಿ ಕನ್ನಡ ತಾಯಿಯ ಸೇವೆ ಮಾಡುವುದಕ್ಕೆ ಪರೋಕ್ಷ ಕಾರಣವಾಗಿರುವ ನಿಮಗೆ ಈ ಗುರುಪೌರ್ಣಮಿಯ ದಿನ ನನ್ನ ಗುರು ನಮನಗಳನ್ನು ಅರ್ಪಿಸುತ್ತಿದ್ದೇನೆ’ ಎಂದು ಅವರು ಕನ್ನಡದಲ್ಲೇ ಬರೆದಿದ್ದಾರೆ.

    ತಮನ್​ ಕನ್ನಡದಲ್ಲಿ ಪೋಸ್ಟ್​ ಮಾಡಿರುವುದು ಇದು ಮೊದಲಲ್ಲ. ಕೆಲವು ದಿನಗಳ ಹಿಂದೆ, ‘ಯುವರತ್ನ’ ಚಿತ್ರದ ಹಾಡುಗಳು ವಿಳಂಬವಾಗುತ್ತಿರುವುದಕ್ಕೆ ಕ್ಷಮೆ ಕೋರಿ ಅವರು ಟ್ವೀಟ್​ ಮಾಡಿದ್ದರು. ಈಗ ಗುರು ಪೌರ್ಣಿಮೆಯ ಅಂಗವಾಗಿ ರಾಜನ್​-ನಾಗೇಂದ್ರ ಅವರನ್ನು ನೆನಪಿಸಿಕೊಂಡಿರುವುದು ವಿಶೇಷ.

    PHOTO: ಅಬುದಾಬಿಯಲ್ಲಿ ಕೆಜಿಎಫ್​ ಬೆಡಗಿ ಮೌನಿ ರಾಯ್​ ಹಾಟ್​ ಅವತಾರ ಹೇಗಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts