More

    ದಳಪತಿ ವಿಜಯ್ ತಮ್ಮ #Thalapathy66ನೇ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಏಷ್ಟು ಗೊತ್ತಾ?

    ದಳಪತಿ ವಿಜಯ್ ಸಿನಿಮಾಗಳೆಂದರೆ ಮಿನಿಮಮ್ ಒಂದು 10 ದಿನ ಚಿತ್ರಮಂದಿರಗಳು ಹೌಸ್‌ಫುಲ್ ಪಕ್ಕಾ. ತಮಿಳಿನಲ್ಲಿ ಮಾತ್ರವಲ್ಲದೇ, ಬೇರೆ ಬೇರೆ ಭಾಷೆಗಳಲ್ಲಿಯೂ ನಟನ ಅಭಿಮಾನಿಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚು ಎಂದೇ ಹೇಳಬೇಕು. ಕಳೆದ ವರ್ಷ ಕರೊನಾ ಸಮಯದಲ್ಲಿ ಬಿಡುಗಡೆ ಆಗಿದ್ದ ವಿಜಯ್ ಅವರ ಮಾಸ್ಟರ್ಚಿತ್ರ 50% ಆಕ್ಯುಪೆನ್ಸಿ ನಡುವೆಯೂ ಗಳಿಕೆಯಲ್ಲಿ ದಾಖಲೆಗಳನ್ನು ಮುರಿದಿತ್ತು. ಈ ಸಿನಿಮಾ ಕೋಟಿ ಗಟ್ಟಲೆ ಗಳಿಸುತ್ತಿರುವುದನ್ನು ಗಮನಿಸಿದ ನಟ, ಅವರ ಸಂಭಾವನೆಯನ್ನು ಭಾರಿ ಮಟ್ಟದಲ್ಲಿ ಏರಿಸಿಕೊಂಡಿದ್ದಾರೆ ಎಂಬ ಸುದ್ದಿಗಳು ಕೇಳಿಬಂದವು.
    ಆ ಮೂಲಕ ಸದ್ಯ ಸಂಭಾವನೆ ಪಡೆಯುವುದರಲ್ಲಿಯೂ ನಟ ಒಂದು ದಾಖಲೆಯನ್ನು ಮಾಡಿದ್ದಾರೆ. ಹೌದು, ಕೆಲವು ದಿನಗಳ ಹಿಂದೆ ವಿಜಯ್ ಅವರ #Thalapathy66 ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರು ನಿರ್ದೇಶನ ಮಾಡಲಿರುವ #Thalapathy66ಗೆ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಅಂದಹಾಗೆ, ‘ಮಾಸ್ಟರ್ಮತ್ತು ಬೀಸ್ಟ್ಚಿತ್ರಗಳಿಗೆ ಕ್ರಮವಾಗಿ 70, 80 ಕೋಟಿ ಸಂಭಾವನೆ ಪಡೆದರು ನಟ ದಳಪತಿ ವಿಜಯ್.
    ನಟ ವಿಜಯ್ ತಮ್ಮ 66ನೇ ಸಿನಿಮಾಗೆ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಕೆಲವು ಮೂಲಗಳ ಪ್ರಕಾರ, ಈ ಚಿತ್ರಕ್ಕೆ ದಳಪತಿ ವಿಜಯ್ ಬರೋಬ್ಬರಿ 120 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಆ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ದಕ್ಷಿಣ ಭಾರತದ ನಟರ ಪಟ್ಟಿಗೆ ವಿಜಯ್ ಅವರ ಹೆಸರು ಸೇರಿಕೊಂಡಿದೆ. ಇನ್ನು, ಸಿನಿಮಾ ಬಿಡುಗಡೆಯಾಗುವ ಮೊದಲೆ #Thalapathy66 ಅನ್ನು ಮನರಂಜನಾ ಚಾನೆಲ್, OTT ವೇದಿಕೆಯೊಂದು ಚಿತ್ರವನ್ನು 200 ಕೋಟಿಗೆ ಖರೀದಿಸಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ. 

    ದಳಪತಿ ವಿಜಯ್ ತಮ್ಮ #Thalapathy66ನೇ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಏಷ್ಟು ಗೊತ್ತಾ?

    RGV ಮುತ್ತಿಟ್ಟ ಫೋಟೋಗೆ ಕ್ಯಾಪ್ಷನ್ ಕೊಟ್ಟರೆ, ನಿಮಗೆ ಏನು ಬಹುಮಾನ ಕೊಡುತ್ತಾರೆ ಗೊತ್ತಾ?

    ಒಬ್ಬರು ಪ್ಯಾಂಟ್ ಧರಿಸಿಲ್ಲ, ಮತ್ತೊಬ್ಬರು ಟಾಪ್ ಮರೆತರು! ಹಿಗ್ಗಾಮುಗ್ಗಾ ಟ್ರೋಲ್ ಆದ ಬಾಲಿವುಡ್ ಹಾಟ್ ಬೆಡಗಿಯರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts