More

    ಖಾಸಗಿ ಬಸ್‌ಗಳಿಗೆ ದುಬಾರಿ ಶುಲ್ಕ

    ಉಳ್ಳಾಲ: ಮಂಗಳೂರು-ತಲಪಾಡಿ ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳಿಗೆ ದುಬಾರಿ ಟೋಲ್ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆ ಮುಖಂಡರು, ಸಾರ್ವಜನಿಕರು, ಬಸ್‌ಮಾಲೀಕರು ಹಾಗೂ ಟೋಲ್ ಅಧಿಕಾರಿಗಳ ನಡುವೆ ಭಾನುವಾರ ನಡೆದ ಸಂಧಾನ ಸಭೆ ವಿಫಲವಾಗಿದೆ.
    ತಲಪಾಡಿಗೆ ತೆರಳುವ ಖಾಸಗಿ ಬಸ್‌ಗಳಿಗೆ ಟೋಲ್‌ನಲ್ಲಿ ದಿನಕ್ಕೆ 500 ರೂ.ನಿಗದಿಪಡಿಸಿದ್ದನ್ನು ವಿರೋಧಿಸಿರುವ ಬಸ್ ಮಾಲೀಕರು ಮೇಲಿನ ತಲಪಾಡಿಗೆ ತೆರಳದೆ ಟೋಲ್‌ಗೇಟ್ ಎದುರೇ ಕೊನೇ ಸ್ಟಾಪ್ ನೀಡುತ್ತಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಸ್ಥಳೀಯ ಸಂಘಟನೆಗಳು, ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಮಂಗಳೂರು-ತಲಪಾಡಿ ಬಸ್ ಮಾಲೀಕರ ಸಂಘ ಅಧ್ಯಕ್ಷ ಕರೀಂ ನಾಗತೋಟ, ಉಳ್ಳಾಲ ಪೊಲೀಸರು ಮತ್ತು ಟೋಲ್ ಅಧಿಕಾರಿಗಳ ನಡುವೆ ಸಂಧಾನ ಸಭೆ ಕರೆಯಲಾಗಿತ್ತು.
    2 ತಿಂಗಳಿನಿಂದ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಅಥವಾ ಕಂಪನಿಯವರು ಬರುತ್ತಾರೋ ಎಂದು ಕಾದು ನೋಡಿದೆವು. ಯಾರ ಸ್ಪಂದನೆಯೂ ಸಿಗದ ಹಿನ್ನೆಲೆಯಲ್ಲಿ ಜನಪ್ರತಿನಿಧಿ, ಪೊಲೀಸ್ ಅಧಿಕಾರಿಗಳು, ಬಸ್ ಮಾಲೀಕರನ್ನು ಕರೆಸಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಿದ್ದೀಕ್ ತಲಪಾಡಿ ತಿಳಿಸಿದ್ದಾರೆ.

    ಈವರೆಗೆ ಮೇಲಿನ ತಲಪಾಡಿ ತನಕ ಹೋಗಿ ಪ್ರಯಾಣಿಕರನ್ನು ಇಳಿಸಿ ಬರುತ್ತಿದ್ದೆವು. ಈಗ ಟೋಲ್‌ನವರು ತಿಂಗಳಿಗೆ 40 ಸಾವಿರ ರೂ. ಶುಲ್ಕ ಪಾವತಿಸಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಬಸ್‌ಗಳಿಗೆ ತಿಂಗಳಿಗೆ 4,100 ರೂ. ಶುಲ್ಕ ಎಂದು ಟೋಲ್ ಅಧಿಕಾರಿಗಳು ಹಾಕಿದ ಬೋರ್ಡ್‌ನಲ್ಲೇ ಇದ್ದರೂ ಮನಬಂದಂತೆ ಶುಲ್ಕ ಕೇಳುವುದು ಸರಿಯಲ್ಲ.
    ಕರೀಂ ನಾಗತೋಟ, ಮಂಗಳೂರು-ತಲಪಾಡಿ ಬಸ್ ಮಾಲೀಕರ ಸಂಘ ಅಧ್ಯಕ್ಷ

    ಟೋಲ್ ಶುಲ್ಕ ಇಳಿಸುವ ಪ್ರಶ್ನೆಯೇ ಇಲ್ಲ. ಬಸ್‌ಗಳಿಗೆ ತಿಂಗಳಿಗೆ 4,100 ರೂ. ಶುಲ್ಕ ಬೋರ್ಡ್‌ನಲ್ಲಿ ಪ್ರಕಟಿಸಿರುವುದು ದಿನಕ್ಕೆ ಒಂದು ಬಾರಿ ಹೋಗಿ ಬರುವ ಘನ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ತಲಪಾಡಿ ಬಸ್ ದಿನಕ್ಕೆ 29 ಬಾರಿ ಹೋಗಿ ಬರುತ್ತಿದ್ದು, ಉತ್ತಮ ಆದಾಯವೂ ಇರುವುದರಿಂದ ಬೋರ್ಡ್‌ನಲ್ಲಿ ಪ್ರಕಟಿಸಿದ ಶುಲ್ಕ ತಲಪಾಡಿ ಬಸ್‌ಗಳಿಗೆ ಅನ್ವಯಿಸುವುದಿಲ್ಲ.
    ಶಿವಪ್ರಸಾದ್, ಟೋಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts