More

    ಡ್ಯಾಂಗಳಲ್ಲಿ ನೀರಿಗಿಳಿಯೋ ಮುನ್ನ ಈ ವಿಡಿಯೋ ನೋಡಿ: ಈಜುತ್ತಿದ್ದವನನ್ನು ಎಳೆದೊಯ್ದ ಮೊಸಳೆ, ಬದುಕಿದ್ದೆ ಅಚ್ಚರಿ!

    ಭೋಪಾಲ್​: ಈಜುವಾಗ ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ನೀರಿನೊಳಗೆ ಎಳೆದೊಯ್ದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ. ಮೊಸಳೆ ದವಡೆಗೆ ಸಿಲುಕಿದ ವ್ಯಕ್ತಿಯ ಪಕ್ಕದಲ್ಲೇ ಇದ್ದ ಆತನ ಸ್ನೇಹಿತನ ಸಾಹಸಿ ಕಾರ್ಯವನ್ನು ಈ ಕ್ಷಣದಲ್ಲಿ ಮೆಚ್ಚಲೇಬೇಕಾಗಿದೆ.

    ಆತಂಕಕಾರಿ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿರುವ ಕಲಿಯಾಸೋಟ್ ಅಣೆಕಟ್ಟಿನಲ್ಲಿ ನಡೆದಿದೆ. 30 ವರ್ಷದ ಅಮಿತ್​ ಜಾತವ್​ ಎಂಬವರು ಸ್ನೇಹಿತನ ಜತೆ ಈಜುವಾಗ ಮೊಸಳೆ ಎಳೆದಾಡಿ ಬಲ ತೊಡೆಯ ಭಾಗವನ್ನು ಗಾಯಗೊಳಿಸಿದೆ. ಮೊಸಳೆ ದಾಳಿಯನ್ನು ಮನಗಂಡ ಸ್ನೇಹಿತ ಗಜೇಂದ್ರ ಯಾದವ್​, ಸೆಲ್ಫಿ ಸ್ಟಿಕ್​ನಿಂದ ಮೊಸಳೆಯನ್ನು ದೂರಷ್ಟು ತಳ್ಳಿ ಅಮಿತ್​ ಜಾತವ್​ ಪ್ರಾಣವನ್ನು ಉಳಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆ ದೇಗುಲ ಪ್ರವೇಶ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; 19ರ ಉತ್ಸವ ರದ್ದುಗೊಳಿಸಿದ ಸರ್ಕಾರ

    ತಕ್ಷಣ ಜಾತವ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಬಲ ತೊಡೆಗೆ 30 ಹೊಲಿಗೆಯನ್ನು ಹಾಕಲಾಗಿದೆ. ಅಂದಹಾಗೆ ಜಾತವ್​ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದಾರೆ. ಲಾಕ್​ಡೌನ್​ ಬೇಸರ ಹಿನ್ನೆಲೆಯಲ್ಲಿ ಸ್ನೇಹಿತ ಯಾದವ್​ರೊಟ್ಟಿಗೆ ಈಜಲು ಡ್ಯಾಂಗೆ ತೆರಳಿದ್ದರು. ವಿಡಿಯೋ ಮಾಡುತ್ತಾ, ಈಜುತ್ತಾ ನೀರಿನಲ್ಲಿ ಆಟ ಆಡುವಾಗ ಮೊಸಳೆ ಏಕಾಏಕಿ ಜಾತವ್​ ಮೇಲೆ ದಾಳಿ ನಡೆಸಿದೆ. ನೀರಿನಾಳಕ್ಕೆ ದಿಢೀರನೇ ಎಳೆದೊಯ್ದಿದೆ.

    ಈ ಬಗ್ಗೆ ಮಾತನಾಡಿರುವ ಜಾತವ್​ ನನ್ನ ಸ್ನೇಹಿತ ಯಾದವ್​ ಇರದಿದ್ದರೆ ನಾನು ಖಂಡಿತ ಬದುಕುತ್ತಿರಲಿಲ್ಲ. ಮೊಸಳೆ ಸುಮಾರು 6 ಅಡಿ ಇತ್ತು. ಬಹಳ ಆಳದವರೆಗೆ ಎಳೆದೊಯ್ಯಿತು. ಬಳಿಕ ನನ್ನ ಸ್ನೇಹಿತ ನೆರವಿಗೆ ಧಾವಿಸಿದ ಎಂದು ಹೇಳಿಕೊಂಡಿದ್ದಾರೆ.

    ಭೂಪಾಲ್​ನಲ್ಲಿ ಕಳೆದ ಒಂಬತ್ತು ವರ್ಷದಲ್ಲಿ 3ನೇ ಬಾರಿ ನಡೆದ ಮೊಸಳೆ ದಾಳಿ ಇದಾಗಿದೆ. 2011ರಲ್ಲಿ 17 ವರ್ಷದ ಸಂಜಯ್​ ಸಿಂಗ್​ ಎಂಬ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿ ಕೊಂದು ತಿಂದಿತ್ತು. ಈ ವೇಳೆ ಸಂಜಯ್​ ಸಿಂಗ್​ ಸ್ನೇಹಿತನೊಂದಿಗೆ ಆಟವಾಡುತ್ತಿದ್ದ. 2014ರ ಸೆಪ್ಟೆಂಬರ್​ನಲ್ಲಿ ಮೀನು ಹಿಡಿಯುತ್ತಿದ್ದ 46 ವರ್ಷದ ವ್ಯಕ್ತಿಯ ಮೇಲೆ ಮೊಸಳೆ ದಾಳಿ ಮಾಡಿತ್ತು. (ಏಜೆನ್ಸಿಸ್​)

    ಡ್ಯಾಂಗಳಲ್ಲಿ ನೀರಿಗಿಳಿಯೋ ಮುನ್ನ ಈ ವಿಡಿಯೋ ನೋಡಿ

    ಆತಂಕಕಾರಿ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿರುವ ಕಲಿಯಾಸೋಟ್ ಅಣೆಕಟ್ಟಿನಲ್ಲಿ ನಡೆದಿದೆ. 30 ವರ್ಷದ ಅಮಿತ್​ ಜಾತವ್​ ಎಂಬವರು ಸ್ನೇಹಿತನ ಜತೆ ಈಜುವಾಗ ಮೊಸಳೆ ಎಳೆದಾಡಿ ಬಲ ತೊಡೆಯ ಭಾಗವನ್ನು ಗಾಯಗೊಳಿಸಿದೆ. ಮೊಸಳೆ ದಾಳಿಯನ್ನು ಮನಗಂಡ ಸ್ನೇಹಿತ ಗಜೇಂದ್ರ ಯಾದವ್​, ಸೆಲ್ಫಿ ಸ್ಟಿಕ್​ನಿಂದ ಮೊಸಳೆಯನ್ನು ದೂರಷ್ಟು ತಳ್ಳಿ ಅಮಿತ್​ ಜಾತವ್​ ಪ್ರಾಣವನ್ನು ಉಳಿಸಿದ್ದಾರೆ#Swimming #Crocodile #CrocodileAttack #Friend #Rescue #BhopalDam

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜೂನ್ 11, 2020

    ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿದೆ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts