More

    ತೇರದಾಳ ಪುರಸಭೆ ಚುನಾವಣೆ ದಿಢೀರ್ ರದ್ದು

    ತೇರದಾಳ: ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ದಿಢೀರ್ ರದ್ದು ಪಡಿಸಿದ್ದರಿಂದ ನಾಮಪತ್ರ ಸಲ್ಲಿಕೆಗೆ ಬಂದಿದ್ದ ಸದಸ್ಯರು ಬರೀಗೈಯಲ್ಲಿ ವಾಪಾಸ್ ತೆರಳುವಂತಾಯಿತು.

    ಗುರುವಾರ ಚುನಾವಣೆ ಎಂದು ಘೋಷಿಸಲಾಗಿತ್ತು. ಅದರಂತೆ ಪುರಸಭೆ ಆವರಣದಲ್ಲಿ ಬೆಳಗ್ಗೆಯಿಂದ ಚುನಾವಣೆಯ ಲಕ್ಷಣಗಳು ಕಂಡು ಬಂದವು. ಪೊಲೀಸ್ ಬಿಗಿ ಬಂದೋ ಬಸ್ತ್ ಸಹಿತ ಕೈಗೊಳ್ಳಲಾಗಿತ್ತು. ತಹಸೀಲ್ದಾರ್ ಪ್ರಶಾಂತ ಚನಗೊಂಡ ಬೆಳಗ್ಗೆಯಿಂದಲೇ ಪುರಸಭೆ ಕಚೇರಿಯಲ್ಲಿ ಠಿಕಾಣೆ ಹಾಕಿದ್ದರು. ಸಮಯ ನಿಗದಿಯಂತೆ ಮಧ್ಯಾಹ್ನ 4 ಗಂಟೆಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಲ ಸದಸ್ಯರು ನಾಮಪತ್ರ ಸಲ್ಲಿಕೆಗೆ ತೆರಳಿದಾಗ ಚುನಾವಣೆ ಅಧಿಕಾರಿಗಳು ಇಲ್ಲದಿರುವುದು ಅಚ್ಚರಿಗೆ ಕಾರಣವಾಯಿತು. ಚುನಾವಣೆ ದಿಢೀರ್ ಮುಂದೂಡಿರುವುದನ್ನು ತಿಳಿದು ಅವಕ್ಕಾದರು.

    ತಹಸೀಲ್ದಾರ್ ಪ್ರಶಾಂತ ಚನಗೊಂಡ ಪ್ರತಿಕ್ರಿಯಿಸಿ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಕೆಲವರು ಹೈಕೋರ್ಟ್ ತೆರಳಿದ್ದರಿಂದ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ನಾವು ಮೊದಲೇ ಗುರುವಾರ ಚುನಾವಣೆ ಘೋಷಣೆ ಮಾಡಿದ್ದೇವು. ಆದರೆ, ನ್ಯಾಯಾಲಯ ತೀರ್ಪು ಗುರುವಾರ ಮಧ್ಯಾಹ್ನವಾದರೂ ಪ್ರಕಟವಾಗದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಬೇಕಾಯಿತು ಎಂದು ಸ್ಪಷ್ಟನೆ ನೀಡಿದರು.

    ಸದಸ್ಯರಾದ ಸುರೇಶ ಕಬಾಡಗಿ, ಶೆಟ್ಟೆಪ್ಪ ಸುನಗಾರ, ಮಾಜಿ ಅಧ್ಯಕ್ಷ ಹನಮಂತ ಮಾತನಾಡಿ, ನ್ಯಾಯಾಲಯ ಆದೇಶವನ್ನು ಉಲ್ಲಂಸಿ, ಚುನಾವಣೆ ನಡೆಸುವ ಕಾರ್ಯ ಖಂಡಿಸುತ್ತೇವೆ. ನ್ಯಾಯಾಲಯ ಆದೇಶವನ್ನು ನಮಗೆ ಮುಂಚಿತವಾಗಿ ತಿಳಿಸಿಲ್ಲ. ಮುಂಬರುವ ಚುನಾವಣೆಯನ್ನು ಕಾನೂನುಬದ್ಧವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
    ಸುರೇಶ ಕಬಾಡಗಿ, ಗೌತಮ ರೋಡಕರ, ಆದಿನಾಥ ಸಪ್ತಸಾಗರ, ರುಸ್ತುಂ ನಿಪ್ಪಾಣಿ ಇತರ ಸದಸ್ಯರು ಇದ್ದರು.

    ಅಧಿಕಾರ ಗದ್ದುಗೆ ಹಿಡಿಯಲಿದ್ದ ಬಿಜೆಪಿ ಪರ ಸದಸ್ಯರು ಮಾತ್ರ ಇತ್ತಕಡೆ ಬಾರದೆ ಇರುವುದು ಆಡಳಿತಾರೂಢ ಸದಸ್ಯರಿಗೆ ಈ ಮೊದಲೇ ತಿಳಿದಿದೇಯೇ ಏನೋ ಎಂಬ ಚರ್ಚೆಗಳು ಕೇಳಿಬಂದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts