More

    ಸಚಿನ್ ಈಗ ಆಡುತ್ತಿದ್ದರೆ 1.30 ಲಕ್ಷ ರನ್ ಸಿಡಿಸುತ್ತಿದ್ದರಂತೆ!

    ಲಾಹೋರ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ವರ್ಷಗಳ ಕಾಲ ಆಡಿರುವ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ 34 ಸಾವಿರಕ್ಕೂ ಅಧಿಕ ರನ್‌ಗಳನ್ನು ಸಿಡಿಸಿ ನಿವೃತ್ತರಾಗಿದ್ದಾರೆ. ಇದೇ ಸಚಿನ್ ಈಗಿನ ಕಾಲದಲ್ಲಿ ಕ್ರಿಕೆಟ್ ಆಡುತ್ತಿದ್ದರೆ 1.30 ಲಕ್ಷಕ್ಕೂ ಅಧಿಕ ರನ್ ಬಾರಿಸುತ್ತಿದ್ದರಂತೆ! ಅವರ ಒಂದು ಕಾಲದ ಎದುರಾಳಿ ಬೌಲರ್ ಪಾಕಿಸ್ತಾನ ಶೋಯೆಬ್ ಅಖ್ತರ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಕುಂಬ್ಳೆ 10 ವಿಕೆಟ್ ಕಬಳಿಸಿದ್ದ ಸ್ಟೇಡಿಯಂ ಈಗ ಏನಾಗಿದೆ ಗೊತ್ತೇ?

    ಟೀಮ್ ಇಂಡಿಯಾ ನಾಯಕ ಹಾಗೂ ಹಾಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡುಲ್ಕರ್ ನಡುವೆ ಹೋಲಿಕೆ ಸರಿಯಲ್ಲ ಎಂದಿರುವ ಶೋಯೆಬ್ ಅಖ್ತರ್, ಸಚಿನ್ ಅತ್ಯಂತ ಕಠಿಣ ಸವಾಲಿನ ಕ್ರಿಕೆಟ್ ಯುಗದಲ್ಲಿ ಆಡಿ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್. ಆದರೆ, ಸಚಿನ್ ಆಡುತ್ತಿದ್ದ ದಿನಗಳಲ್ಲಿ ಕ್ರಿಕೆಟ್ ಅತ್ಯಂತ ಕಠಿಣವಾಗಿತ್ತು. ಈಗಿನ ಕಾಲದಲ್ಲಿ ಆಡುವ ಅವಕಾಶ ಅವರಿಗೆ ಸಿಕ್ಕರೆ 1.30 ಲಕ್ಷಕ್ಕೂ ಅಧಿಕ ರನ್ ಬಾರಿಸಬಹುದು. ಹೀಗಾಗಿ ಸಚಿನ್-ಕೊಹ್ಲಿ ನಡುವೆ ಹೋಲಿಕೆ ಬೇಡ ಎಂದು ಅಖ್ತರ್ ಲೈವ್ ವಿಡಿಯೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಐಪಿಎಲ್ ರದ್ದಾದರೆ ಕ್ರಿಕೆಟ್​ಗೆ ಕಷ್ಟ!

    2003ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಆಟವಾಡಿದ್ದ ಸಚಿನ್ 98 ರನ್‌ಗೆ ಔಟಾಗಿದ್ದರು. ಅದೊಂದು ವಿಶೇಷವಾದ ಇನಿಂಗ್ಸ್ ಆಗಿತ್ತು. ಹೀಗಾಗಿ ಅವರು ಅಲ್ಲಿ ಶತಕ ಪೂರೈಸಬೇಕಿತ್ತು. ಅವರು ಶತಕ ಸಿಡಿಸಬೇಕೆಂದು ನಾನೂ ಬಯಸಿದ್ದೆ. ನಾನು ಅವರಿಗೆ ಹಾಕಿದ್ದ ಬೌನ್ಸರ್‌ಗೆ ಸಿಕ್ಸರ್ ಸಿಡಿಸುವರೆಂದು ಭಾವಿಸಿದ್ದೆ. ಆದರೆ ಅವರು ಔಟಾಗಿದ್ದರು ಎಂದು ಅಖ್ತರ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts