More

    ಐಪಿಎಲ್ ರದ್ದಾದರೆ ಕ್ರಿಕೆಟ್​ಗೆ ಕಷ್ಟ!

    ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಕ್ರೀಡಾಕ್ಷೇತ್ರಕ್ಕೆ ಈಗಾಗಲೆ ಸಾಕಷ್ಟು ಹೊಡೆತಗಳು ಬಿದ್ದಿವೆ. ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ಅಪಾರ ಪ್ರಮಾಣದ ಆರ್ಥಿಕ ನಷ್ಟವನ್ನು ಎದುರಿಸುವಂತಾಗಿದೆ. ಕಳೆದ 2 ತಿಂಗಳಿನಿಂದ ಕ್ರಿಕೆಟ್ ಚಟುವಟಿಕೆಗಳೂ ಸಂಪೂರ್ಣ ಸ್ತಬ್ಧಗೊಂಡಿರುವ ಕಾರಣ ಜಗತ್ತಿನ ಹೆಚ್ಚಿನ ಕ್ರಿಕೆಟ್ ಮಂಡಳಿಗಳು ದಿವಾಳಿಯಾಗುವ ಭೀತಿಯಲ್ಲಿವೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಸದ್ಯಕ್ಕೆ ಈ ಆರ್ಥಿಕ ಹೊಡೆತವನ್ನು ಸಮರ್ಥವಾಗಿ ಎದುರಿಸಿಕೊಂಡು ನಿಂತಿದೆ. ಆದರೆ, ಶ್ರೀಮಂತ ಟಿ20 ಟೂರ್ನಿ ಐಪಿಎಲ್ 13ನೇ ಆವೃತ್ತಿ ರದ್ದುಗೊಂಡರೆ ಬಿಸಿಸಿಐ ಮಾತ್ರವಲ್ಲ ಇಡೀ ಕ್ರಿಕೆಟ್ ಜಗತ್ತಿಗೆ ಅದರ ಹೊಡೆತವನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲವಂತೆ! ಐಪಿಎಲ್ ಮಾಜಿ ಸುಂದರ್ ರಾಮನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ ಹುಟ್ಟಿನ ದಿನಗಳಲ್ಲಿ ಅದರೊಂದಿಗೆ ಕೆಲಸ ನಿರ್ವಹಿಸಿದ್ದ ಸುಂದರ್ ರಾಮನ್, ಜಾಗತಿಕ ಕ್ರಿಕೆಟ್​ನ ಒಂದು ವರ್ಷದ ಒಟ್ಟಾರೆ ಆದಾಯದಲ್ಲಿ ಶೇ. 40ರಷ್ಟು ಪಾಲು ಐಪಿಎಲ್​ನದ್ದಾಗಿರುತ್ತದೆ ಎಂದು ಹೇಳಿದ್ದಾರೆ. ಮೂಲ ವೇಳಾಪಟ್ಟಿಯ ಪ್ರಕಾರ ಮಾರ್ಚ್ 29ರಂದು ಆರಂಭಗೊಳ್ಳಬೇಕಾಗಿದ್ದ ಐಪಿಎಲ್ 13ನೇ ಆವೃತ್ತಿಯನ್ನು ಸದ್ಯ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

    ಇದನ್ನೂ ಓದಿ   ಓಲಾ ಕಂಪನಿಯ 1,400 ನೌಕರರು ಕೆಲಸದಿಂದ ವಜಾ

    ಪ್ರತಿ ಫ್ರಾಂಚೈಸಿಯಿಂದ 85 ಕೋಟಿ ರೂ.ನಂತೆ ಐಪಿಎಲ್ ಒಂದರಿಂದಲೇ ಕ್ರಿಕೆಟಿಗರಿಗೆ ಪ್ರತಿ ವರ್ಷ ಒಟ್ಟಾರೆ 680 ಕೋಟಿ ರೂ. ವೇತನ ಹಂಚಿಕೆಯಾಗುತ್ತದೆ. ಐಪಿಎಲ್ ಪ್ರಸಾರ ಹಕ್ಕಿನಿಂದ ಬರುವ ವಾರ್ಷಿಕ ಆದಾಯ, ಜಗತ್ತಿನ ಇತರ 3-4 ಕ್ರಿಕೆಟ್ ಮಂಡಳಿಗಳ ಒಟ್ಟಾರೆ ಆದಾಯದೊಂದಿಗೆ ಹೋಲಿಸಿದರೂ ಸರಿಸಮಾನವಾಗುವುದಿಲ್ಲ ಎಂದು ಸುಂದರ್ ರಾಮನ್ ವಿವರಿಸಿದ್ದಾರೆ. ಐಪಿಎಲ್​ನಲ್ಲಿ ಆಡುವ ವಿದೇಶಿ ಆಟಗಾರರ ವೇತನದ ಶೇ. 20ರಷ್ಟು ಪಾಲು ಅವರ ತವರು ಕ್ರಿಕೆಟ್ ಮಂಡಳಿಗೆ ಸೇರುತ್ತದೆ.

    ಕ್ರಿಕೆಟ್ ಜಗತ್ತಿನ ವಾರ್ಷಿಕ ಆರ್ಥಿಕ ವ್ಯವಹಾರ 14,366 ಕೋಟಿ ರೂ. (1.9 ಶತಕೋಟಿ ಡಾಲರ್) ಎಂದು ಅಂದಾಜು ಹಾಕಿರುವ ಸುಂದರ್ ರಾಮನ್, ಈ ಪೈಕಿ 3ನೇ 2ರಷ್ಟು ಪಾಲು ಭಾರತದಲ್ಲಿ ನಡೆಯುವ ಅಥವಾ ಭಾರತ ತಂಡ ಪಾಲ್ಗೊಳ್ಳುವ ಸರಣಿ, ಟೂರ್ನಿಗಳದ್ದೇ ಆಗಿರುತ್ತದೆ ಎಂದಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಟಿಕೆಟ್ ಮಾರಾಟದಿಂದ ಬರುವ ಆದಾಯವು ಆತಿಥೇಯ ದೇಶಕ್ಕೆ ಸೇರುತ್ತದೆ. ಹೀಗಾಗಿ ಅಕ್ಟೋಬರ್-ನವೆಂಬರ್​ನಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸಿದರೆ ಅತಿಥೇಯ ಆಸ್ಟ್ರೇಲಿಯಾಕ್ಕೆ ಟಿಕೆಟ್ ಆದಾಯ ನಷ್ಟವಾಗುತ್ತದೆ. ಆದರೆ ಐಪಿಎಲ್ ಟೂರ್ನಿಯನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸಿದರೂ, 8 ಫ್ರಾಂಚೈಸಿಗಳಿಗೆ ಅದರಿಂದ ಆಗುವ ನಷ್ಟ ಸಣ್ಣ ಪ್ರಮಾಣದ್ದಾಗಿರುತ್ತದೆ ಎಂದು ಸುಂದರ್ ರಾಮನ್ ವಿವರಿಸಿದ್ದಾರೆ. -ಏಜೆನ್ಸೀಸ್

    VIDEO| ಕ್ವಾರಂಟೈನ್ ಕೇಂದ್ರಕ್ಕೂ ನುಗ್ಗಿದ ಅಂಫಾನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts