More

    ಕ್ರಿಕೆಟ್‌ಗೆ ವಾಪಸಾಗಲು ಸಚಿನ್ ಮಾತುಗಳೇ ಪ್ರೇರಣೆ ಎಂದ ಯುವರಾಜ್ ಸಿಂಗ್

    ಬೆಂಗಳೂರು: ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಯುವರಾಜ್ ಸಿಂಗ್ ಕೂಡ ಒಬ್ಬರು. 2007ರ ಚೊಚ್ಚಲ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು ಯುವರಾಜ್ ಸಿಂಗ್. 2011ರ ಏಕದಿನ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಯುವಿ ಕ್ಯಾನ್ಸರ್‌ನಿಂದಾಗಿ ಶಸಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಯುವರಾಜ್ ಸಿಂಗ್ ವೃತ್ತಿಜೀವನ ಮುಕ್ತಾಯಗೊಂಡಿತು ಎಂದು ಭಾವಿಸಿದವರೇ ಜಾಸ್ತಿ. ಈ ವೇಳೆ ದಿಗ್ಗಜ ಸಚಿನ್ ತೆಂಡುಲ್ಕರ್ ಹೇಳಿದ ಸ್ಫೂರ್ತಿಯುತ ಮಾತುಗಳೇ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಲು ಪ್ರಮುಖ ಕಾರಣವಂತೆ.

    ಇದನ್ನೂ ಓದಿ: ಡಬ್ಲ್ಯುಟಿಸಿ ರ‌್ಯಾಂಕಿಂಗ್ : 3ನೇ ಸ್ಥಾನಕ್ಕೇರಿದ ಇಂಗ್ಲೆಂಡ್, ಅಗ್ರಸ್ಥಾನ ಕಾಯ್ದುಕೊಂಡ ಭಾರತ

    ಕ್ರಿಕೆಟ್‌ಗೆ ವಾಪಸಾಗಲು ಸಚಿನ್ ಮಾತುಗಳೇ ಪ್ರೇರಣೆ ಎಂದ ಯುವರಾಜ್ ಸಿಂಗ್ವೃತ್ತಿಜೀವನದ ಉತ್ತುಂಗದಲ್ಲಿದ್ದ ಯುವರಾಜ್ ಸಿಂಗ್, ಕ್ಯಾನ್ಸರ್‌ನಿಂದಾಗಿ ಕೆಲದಿನಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದರಿಂದಾಗಿ ಪಂಜಾಬ್ ಆಟಗಾರ ಕ್ರಿಕೆಟ್‌ಗೆ ನಿವೃತ್ತಿ ಹೇಳಲು ನಿರ್ಧರಿಸಿದರಂತೆ. ಕ್ರಿಕೆಟ್‌ನಲ್ಲಿ ಏಳು, ಬೀಳು ಇರುತ್ತವೆ, ಸಚಿನ್ ಜತೆ ನಿರಂತರ ಸಂಪರ್ಕದಲ್ಲಿದ್ದೆ. ಕ್ರಿಕೆಟ್‌ಗೆ ವಾಪಸಾಗಲು ಸಚಿನ್ ನನಗೆ ಪ್ರೇರೆಪಿಸಿದರು. ಕ್ರಿಕೆಟ್ ಏಕೆ ಆಡುತ್ತೇವೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಸಲುವಾಗಿ. ಆದರೆ, ನಾವು ಕ್ರೀಡೆಯನ್ನು ಪ್ರೀತಿಸಬೇಕು. ನಾವು ಕ್ರೀಡೆಯನ್ನು ಪ್ರೀತಿಸಿದರಷ್ಟೇ, ಆಡಲು ಸಾಧ್ಯ’ ಎಂದು ಸಚಿನ್ ಹೇಳಿದ್ದರು ಎಂದು ಯುವರಾಜ್ ಸಿಂಗ್ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ನಾನು ನಿನ್ನ ಪರಿಸ್ಥಿತಿಯಲ್ಲಿದ್ದರೆ, ಏನು ಮಾಡುತ್ತಿದ್ದೆ ಗೊತ್ತಿಲ್ಲ. ನೀನು ಆಟವನ್ನು ಇಷ್ಟಪಟ್ಟರೆ, ಬಂದು ಆಡು. ನಂತರ ನಿವೃತ್ತಿ ಕುರಿತು ಯೋಚಿಸು’ ಎಂದು ಸಚಿನ್ ಹೇಳಿದ ಮಾತು ಮರೆಯುವಂತಿಲ್ಲ ಎಂದು ಯುವರಾಜ್ ಮೆಲುಕು ಹಾಕಿದ್ದಾರೆ.

    ಇದನ್ನೂ ಓದಿ: ನಾಡಾ ಜವಾನನ ಕೆಲಸಕ್ಕೆ ಅರ್ಜಿ ಹಾಕಿದ ಭಾರತ ತಂಡದ ಮಾಜಿ ನಾಯಕ

    ಸಚಿನ್ ಸ್ಫೂರ್ತಿಯುತ ಮಾತಿಗಳಿಂದ ರಾಷ್ಟ್ರೀಯ ತಂಡಕ್ಕೆ ವಾಪಸಾಗುವಂತಾಯಿತು. ಬಳಿಕ 3-4 ವರ್ಷ ಕ್ರಿಕೆಟ್‌ನಲ್ಲಿದ್ದೆ, ಬಳಿಕ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಆಡಿದ ಎಂದು ಯುವಿ ಹೇಳಿಕೊಂಡಿದ್ದಾರೆ. 2007ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ 6 ಎಸೆತಗಳಿಗೂ 6 ಸಿಕ್ಸರ್ ಸಿಡಿಸಿ ಯುವಿ ಗಮನಸೆಳೆದಿದ್ದರು. ಯುವರಾಜ್ ಸಿಂಗ್ 40 ಟೆಸ್ಟ್ ಪಂದ್ಯಗಳಿಂದ 1900 ರನ್‌ಗಳಿಸಿದರೆ, 304 ಏಕದಿನ ಪಂದ್ಯಗಳಿಂದ 14 ಶತಕ ಸೇರಿದಂತೆ 8701 ರನ್, 58 ಟಿ20 ಪಂದ್ಯಗಳಿಂದ 863 ರನ್ ಬಾರಿಸಿದ್ದಾರೆ.

    ದಕ್ಷಿಣ ಆಫ್ರಿಕಾದ ಜಾಕ್ಸ್ ಕಾಲೀಸ್ ದಾಖಲೆ ಸನಿಹದಲ್ಲಿ ಕ್ರೇಗ್ ಬ್ರಾಥ್‌ವೇಟ್…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts