More

    ದಕ್ಷಿಣ ಆಫ್ರಿಕಾದ ಜಾಕ್ಸ್ ಕಾಲೀಸ್ ದಾಖಲೆ ಸನಿಹದಲ್ಲಿ ಕ್ರೇಗ್ ಬ್ರಾಥ್‌ವೇಟ್…!

    ಮ್ಯಾಂಚೆಸ್ಟರ್: ಕ್ರಿಕೆಟ್‌ನಲ್ಲಿ ದಾಖಲೆಗಳಿಗೆ ಬರವಿಲ್ಲ. ಅತಿಹೆಚ್ಚು ರನ್‌ಗಳಿಸುವುದು, ಅತಿಹೆಚ್ಚು ವಿಕೆಟ್ ಕಬಳಿಸಿವುದು ಹೀಗೆ..ದಾಖಲೆಗಳ ಪಟ್ಟಿ ಮಾಡುತ್ತಾ ಸಾಗಬಹುದು. ಹಾಗೆಯೇ ಅತಿ ಹೆಚ್ಚು ಬಾರಿ ಔಟಾಗುವುದು ಕೂಡ ದಾಖಲೆಯೇ..ಯಾವ ಬ್ಯಾಟ್ಸ್‌ಮನ್, ಯಾವ ಬೌಲರ್‌ಗೆ ಎಷ್ಟು ಬಾರಿ ಔಟಾಗಿದ್ದಾನೆ ಅಂತೆಲ್ಲಾ ಅಂಕಿ-ಅಂಶಗಳು ಸಿಗುತ್ತವೆ. ಬೌಲರ್‌ನೊಬ್ಬನ 100, 200 ವಿಕೆಟ್ ರೂಪದಲ್ಲಿ ಬಲಿಯಾದ ಆಟಗಾರರು ಮಾತ್ರ ತೀರ ವಿರಳ. ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಜಾಕ್ಸ್ ಕಾಲೀಸ್ 5 ಬಾರಿ ಹಾಗೂ ವೆಸ್ಟ್ ಇಂಡೀಸ್‌ನ ಕ್ರೇಗ್ ಬ್ರಾಥ್‌ವೇಟ್ 3 ಬಾರಿ ಈ ರೀತಿ ಔಟಾಗಿದ್ದಾರೆ.

    ಇದನ್ನೂ ಓದಿ: VIDEO: ಇಂಗ್ಲೆಂಡ್ ತಂಡಕ್ಕೆ 269 ರನ್ ಜಯ, 2-1 ರಿಂದ ಸರಣಿ ವಶ

    ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್, ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಿತ್ತ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 2ನೇ ಹಾಗೂ ವಿಶ್ವದ 7ನೇ ಬೌಲರ್ ಎನಿಸಿಕೊಂಡರು.
    ವೆಸ್ಟ್ ಇಂಡೀಸ್‌ನ ಕ್ರೇಗ್ ಬ್ರಾಥ್‌ವೇಟ್ ಸ್ಟುವರ್ಟ್ ಬ್ರಾಡ್‌ಗೆ ಟೆಸ್ಟ್ ಕ್ರಿಕೆಟ್‌ನ 500ನೇ ಬಲಿ ಯಾದರು. ಇದಕ್ಕೂ ಮೊದಲು 2017ರಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆಂಡರ್‌ಸನ್‌ಗೂ ಬ್ರಾಥ್‌ವೇಟ್ 500ನೇ ಬಲಿಯಾಗಿದ್ದರು. ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌ಗೂ ಬ್ರಾಥ್‌ವೇಟ್ 200ನೇ ಬಲಿಯಾಗಿದ್ದರು.

    ಇದನ್ನೂ ಓದಿ: ‘ಕೋಟಿಗೊಬ್ಬ 3’ ಬಿಡುಗಡೆ ಯಾವಾಗ? ಸುದೀಪ್​ ಹೇಳ್ತಾರೆ ಕೇಳಿ …

    ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ 5 ಬಾರಿ ಈ ರೀತಿ ಔಟಾಗಿದ್ದಾರೆ. ಇಂಗ್ಲೆಂಡ್ ವೇಗಿಗಳಾದ ಜೇಮ್ಸ್ ಆಂಡರ್‌ಸನ್‌ಗೆ 100, ಆ್ಯಂಡಿ ಕ್ಯಾಡಿಕ್‌ಗೂ 100, ಆಸ್ಟ್ರೇಲಿಯಾದ ಶೇನ್ ವಾರ್ನ್‌ಗೆ 300, ಭಾರತದ ಜಹೀರ್ ಖಾನ್‌ಗೆ 300 ಹಾಗೂ ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಯ್‌ಗೆ 500ನೇ ಬಲಿಯಾಗಿದ್ದರು.

    ನಾಡಾ ಜವಾನನ ಕೆಲಸಕ್ಕೆ ಅರ್ಜಿ ಹಾಕಿದ ಭಾರತ ತಂಡದ ಮಾಜಿ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts