More

    ತನಗೆ ಸಿಕ್ಕ 5 ಲಕ್ಷ ರೂ. ಬ್ಯಾಗನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಹತ್ತರ ಪೋರ!

    ಲಖನೌ: ಈಗಿನ ಕಾಲದಲ್ಲಿ 10 ರೂಪಾಯಿ ಕಳೆದುಕೊಂಡರೂ ಸಿಗಲು ಸಾಧ್ಯವೇ ಇಲ್ಲ. ಅಂತಹದರಲ್ಲಿ ಬಾಲಕನೊಬ್ಬ ತನಗೆ ಸಿಕ್ಕ 5 ಲಕ್ಷ ರೂ. ಹಣವಿದ್ದ ಬ್ಯಾಗನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ.

    ಉತ್ತರ ಪ್ರದೇಶದ ಬರೇಲಿಯಲ್ಲಿ ವಾಸವಾಗಿರುವ ಬೈಕ್​ ಮೆಕ್ಯಾನಿಕ್​ ಮಗನಾಗಿರುವ ಅಬ್ದುಲ್​ ಹನ್ನಾನ್​ ಎಂಬ ಬಾಲಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಟೋರಿಕ್ಷದಿಂದ ಒಂದು ಬ್ಯಾಗ್​ ಕೆಳಬೀಳುತ್ತೆ. ತಕ್ಷಣ ಬ್ಯಾಗನ್ನು ಎತ್ತಿ ಆಟೋದಲ್ಲಿದ್ದವರಿಗೆ ತಲುಪಿಸಲು ಓಡುತ್ತಾನೆ. ಅಷ್ಟರಲ್ಲೇ ಆಟೋ ತುಂಬಾ ದೂರ ಹೋಗಿರುತ್ತದೆ.

    ನಂತರ ಬ್ಯಾಗನ್ನು ತನ್ನ ತಾಯಿಗೆ ತಂದುಕೊಟ್ಟಿದ್ದಾನೆ. ಅದರಲ್ಲಿ ಹಣವಿರುವುದನ್ನು ನೋಡಿ ಹತ್ತಿರದ ಮಸೀದಿಗೆ ತಲುಪಿಸಿದ್ದಾರೆ. ಮಸೀದಿಯಿಂದ ಬ್ಯಾಗ್​ ಕಳುವಾಗಿರುವ ಬಗ್ಗೆ ಎಲ್ಲೆಡೆ ಮಾಹಿತಿ ತಲುಪಿಸಲಾಗುತ್ತದೆ. ಒಂದು ಗಂಟೆಯೊಳಗೆ ನಿಜವಾದ ವಾರಸುದಾರರು ಬಂದು ಹಣವಿದ್ದ ಬ್ಯಾಗನ್ನು ಸ್ವೀಕರಿಸಿ. ಬಾಲಕನಿಗೆ ಬಹುಮಾನವನ್ನು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts