More

  ತಾಪಮಾನ ಏರಿಕೆ; ಉತ್ತರ ಕರ್ನಾಟಕ ಭಾಗದ 4 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಐಎಂಡಿ

  ಬೆಂಗಳೂರು: ಉತ್ತರ ಕರ್ನಾಟಕದ 4 ಜಿಲ್ಲೆಗಳಲ್ಲಿ ಉಷ್ಣ ಅಲೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಉಷ್ಣಾಂಶ ಭಾರಿ ಏರಿಕೆಯಾಗಲಿದೆ. ಹೌದು, ತಾಪಮಾನ ಎರಡರಿಂದ ಮೂರು ಡಿಗ್ರಿಯಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

  ಈ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಭಾರಿ ಹೆಚ್ಚಳವಾಗಿರುವುದರಿಂದ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆ ಕೊರತೆಯಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಗರಿಷ್ಠ ಉಷ್ಣಾಂಶದಲ್ಲಿ ಭಾರಿ ಹೆಚ್ಚಳವಾಗಿದೆ. ವಾಡಿಕೆಗಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಹೆಚ್ಚಳವಾಗುತ್ತದೆ ಎನ್ನಲಾಗಿದೆ.

  ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಗಡಿಗೆ ತಲುಪಿದೆ. ಹಾಗೆಯೇ ಮಾರ್ಚ್‌ನಲ್ಲಿ ಇದುವರೆಗೆ ನಿಗದಿತ ಪ್ರಮಾಣದ ಮಳೆಯಾಗಿಲ್ಲ ಎಂದು ಐಎಂಡಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. “ಕರ್ನಾಟಕದಾದ್ಯಂತ ಸ್ಪಷ್ಟವಾದ ಆಕಾಶ ಮತ್ತು ಶುಷ್ಕ ಹವಾಮಾನದೊಂದಿಗೆ, ಮುಂದಿನ ಮೂರು ದಿನಗಳಲ್ಲಿ ಯಾವುದೇ ಮಳೆಯಾಗುವ ಸಾಧ್ಯತೆಯಿಲ್ಲ” ಎಂದು ಅವರು ತಿಳಿಸಿದ್ದಾರೆ.

  ಪರಾರಿಯಾಗಿರುವ ನೀರವ್ ಮೋದಿಗೆ ದೊಡ್ಡ ಪೆಟ್ಟು, 55 ಕೋಟಿ ರೂ.ಗೆ ಮಾರಾಟವಾಗಲಿದೆ ಲಂಡನ್‌ನಲ್ಲಿರುವ ಐಷಾರಾಮಿ ಫ್ಲಾಟ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts