More

    ಹೈಕೋರ್ಟ್​ ಮತ್ತು ಜಿಲ್ಲಾ ಕೋರ್ಟ್​ಗಳಿಗೆ ಟೆಲಿಗ್ರಾಂ ಚ್ಯಾನೆಲ್​, ಚ್ಯಾಟ್​ಬಾಟ್​

    ಬೆಂಗಳೂರು : ಕರ್ನಾಟಕ ಹೈಕೋರ್ಟ್​ನಲ್ಲಿ ವಿಚಾರಣೆಯಲ್ಲಿರುವ ಮೊಕದ್ದಮೆಗಳ ಬಗ್ಗೆ ರಿಯಲ್ ಟೈಮ್ ಮಾಹಿತಿ ನೀಡಲು ಅಧಿಕೃತ ಟೆಲಿಗ್ರಾಂ ಚ್ಯಾನೆಲ್​ಅನ್ನು ಆರಂಭಿಸಲಾಗಿದೆ. ಕಾಸ್​ ಲಿಸ್ಟ್​ಗಳು, ಕೇಸ್​ ಸ್ಟೇಟಸ್, ಡೈಲಿ ನೋಟಿಫಿಕೇಷನ್ಸ್​, ಡಿಸ್​​ಪ್ಲೇ ಬೋರ್ಡ್ಸ್​ ಮುಂತಾದವನ್ನು ಹೊಂದಿರುವ ಈ ಟೆಲಿಗ್ರಾಂ ಚ್ಯಾನೆಲ್ (https://t.me/karnatakahighcourt) ಕೇಸುಗಳ ಬಗ್ಗೆ ಅತ್ಯವಶ್ಯಕ ಮಾಹಿತಿ ಒದಗಿಸಲಿದೆ.

    ರಾಜ್ಯ ನ್ಯಾಯಾಂಗದ ಹಾಲಿ ಮಹತ್ವದ ಚಟುವಟಿಕೆಗಳ ಬಗ್ಗೆ ಕೂಡ ಇದರಲ್ಲಿ ಮಾಹಿತಿ ಸಿಗಲಿದೆ. ಇದೇ ರೀತಿಯ ಚ್ಯಾನೆಲ್​ಗಳನ್ನು ರಾಜ್ಯದ 30 ಜಿಲ್ಲಾ ಕೋರ್ಟ್​ಗಳಿಗೂ ಕೂಡ ಆರಂಭಿಸಲಾಗಿದೆ. ಜೊತೆಗೆ, ಕರ್ನಾಟಕ ಹೈಕೋರ್ಟ್​ ವರ್ಚುವಲ್ ಕೇಸ್ ಇನ್​ಫರ್ಮೇಶನ್​ ಸರ್ವೀಸ್​(HCKChatBot) ಎಂಬ ಟೆಲಿಗ್ರಾಂ ಚ್ಯಾಟ್​ಬಾಟ್​ಅನ್ನು ಕೂಡ ಆರಂಭಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್​ ಶ್ರೀನಿವಾಸ್​ ಓಕ ಅವರು ಘೋಷಿಸಿದ್ದಾರೆ.

    ಇದನ್ನೂ ಓದಿ: ಜುಲೈ 31 ರೊಳಗೆ ದ್ವಿತೀಯ ಪಿಯುಸಿ ಫಲಿತಾಂಶ; ರಿಪೀಟರ್ಸ್​​ಗೆ ಸಿಹಿ ಸುದ್ದಿ!

    ಸ್ಮಾರ್ಟ್​ಫೋನಿನಲ್ಲೇ ಲಭ್ಯವಾಗಿರುವ ಈ ಸೇವೆ ರಾಜ್ಯದ ವಕೀಲರಿಗೆ ಮತ್ತು ವ್ಯಾಜ್ಯದಾರ ನಾಗರೀಕರಿಗೆ ಉಪಯುಕ್ತವಾಗಲಿದೆ. ಅದಾಗಲೇ ಸುಮಾರು 7,000 ಸದಸ್ಯರು ಹೈಕೋರ್ಟ್​ ಚ್ಯಾನೆಲ್​ಗೆ ಸಬ್​ಸ್ಕ್ರೈಬ್ ಮಾಡಿಕೊಂಡಿದ್ದಾರೆ. ಜಿಲ್ಲಾ ಕೋರ್ಟ್​ ಚ್ಯಾನೆಲ್​ಗಳಿಗೆ 5,000 ಕ್ಕೂ ಹೆಚ್ಚು ಜನ ಸದಸ್ಯರಾಗಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ರಸ್ತೆಯಲ್ಲಿ ಉಗುಳಿ 33 ಲಕ್ಷ ರೂಪಾಯಿ ದಂಡ ಕಕ್ಕಿದ ಮುಂಬೈಕರರು!

    ಎನ್​ಬಿಎ ಸುದ್ದಿ ಸಂಸ್ಥೆಗಳಿಗೆ ಹೊಸ ಐಟಿ ನಿಯಮಗಳಿಂದ ರಕ್ಷಣೆ

    VIDEO | ರಜನೀಕಾಂತ್​ ಅನುಕರಣೆಯ ಫ್ಲಾಪ್ ಶೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts