More

    ಎನ್​ಬಿಎ ಸುದ್ದಿ ಸಂಸ್ಥೆಗಳಿಗೆ ಹೊಸ ಐಟಿ ನಿಯಮಗಳಿಂದ ರಕ್ಷಣೆ

    ತಿರುವನಂತಪುರಂ: ಕೇಂದ್ರ ಸರ್ಕಾರದ ಹೊಸ ಐಟಿ ನಿಯಮಗಳ ವಿರುದ್ಧ ನ್ಯೂಸ್​ ಬ್ರಾಡ್​ಕ್ಯಾಸ್ಟರ್ಸ್ ಅಸೋಸಿಯೇಷನ್(ಎನ್​ಬಿಎ) ಸಲ್ಲಿಸಿರುವ ರಿಟ್ ಅರ್ಜಿಯ ಮೇಲೆ ಕೇರಳ ಹೈಕೋರ್ಟ್​ ಇಂದು ಮಧ್ಯಂತರ ಆದೇಶ ಹೊರಡಿಸಿದೆ. ಹೊಸ ನಿಯಮಗಳನ್ನು ಪಾಲಿಸದಿರುವುದಕ್ಕೆ ಎನ್​ಬಿಎ ಸದಸ್ಯರಾದ ಸುದ್ದಿ ಸಂಸ್ಥೆಗಳ ವಿರುದ್ಧ ಸದ್ಯಕ್ಕೆ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದೆ.

    ಎನ್​ಬಿಎ ಸಲ್ಲಿಸಿರುವ ಅರ್ಜಿಯಲ್ಲಿ, ಕೇಂದ್ರದ ಹೊಸ ನಿಯಮಗಳು ಮಾಧ್ಯಮ ಹಕ್ಕುಗಳನ್ನು ಕಾರಣರಹಿತವಾಗಿ ನಿರ್ಬಂಧಿಸಲು ಸರ್ಕಾರಿ ಪ್ರಾಧಿಕಾರಗಳಿಗೆ ವಿಪರೀತ ಅಧಿಕಾರ ನೀಡುತ್ತದೆ ಎಂದು ಹೇಳಿದ್ದು, ಸದರಿ ನಿಯಮಗಳು ಐಟಿ ಕಾಯ್ದೆಯ ಕಾನೂನು ವ್ಯಾಪ್ತಿಗೆ ಸಲ್ಲುವುದಿಲ್ಲ ಎನ್ನಲಾಗಿದೆ. ಹಲವು ಡಿಜಿಟಲ್ ಮಾಧ್ಯಮ ಕಂಪೆನಿಗಳಿಗೆ ಹೊಸ ಐಟಿ ನಿಯಮಗಳಿಂದ ಹೈಕೋರ್ಟ್​ ಈಗಾಗಲೇ ರಕ್ಷಣೆ ನೀಡಿದೆ ಎಂದು ಎನ್​ಬಿಎ ಪರ ವಕೀಲರು ವಾದಿಸಿದರು.

    ಇದನ್ನೂ ಓದಿ: ಆಂಧ್ರದಿಂದ ಗಾಂಜಾ ತಂದು ಕಾಲೇಜು ವಿದ್ಯಾರ್ಥಿಗಳಿಗೆ ಮಾರುತ್ತಿದ್ದರು; ಒಬ್ಬ ವಿದೇಶಿ ಪ್ರಜೆ ಸೇರಿ 6 ಜನರ ಬಂಧನ

    ನ್ಯಾಯಮೂರ್ತಿ ಪಿ.ಬಿ.ಸುರೇಶ್​ ಕುಮಾರ್​ ಅವರು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್​ ಮತ್ತು ಐಟಿ ಸಚಿವಾಲಯ, ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಗಳಿಗೆ ಈ ಅರ್ಜಿಯ ಮೇಲೆ ನೋಟೀಸು ಜಾರಿ ಮಾಡಿದ್ದಾರೆ. ಅರ್ಜಿ ನಿರ್ಣಯವಾಗುವವರೆಗೆ ಸುದ್ದಿ ಸಂಸ್ಥೆಗಳಿಗೆ ರಕ್ಷಣೆ ಒದಗಿಸಿ ಆದೇಶಿಸಿದ್ದಾರೆ.

    ವಿವಿಧ ಹೈಕೋರ್ಟ್​ಗಳ ಮುಂದೆ ವಿಚಾರಣೆಗೆ ಬಂದಿರುವ ಐಟಿ ನಿಯಮಗಳ ಕುರಿತಾದ ಎಲ್ಲಾ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್​ಗೆ ವರ್ಗಾಯಿಸುವಂತೆ ಕೋರಿ, ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀ ಕೋರ್ಟ್​ಗೆ ವರ್ಗಾವಣೆ ಅರ್ಜಿ ಸಲ್ಲಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

    VIDEO | ರಜನೀಕಾಂತ್​ ಅನುಕರಣೆಯ ಫ್ಲಾಪ್ ಶೋ!

    VIDEO | ಕ್ಯಾಪ್ಟನ್​ ಕೂಲ್​ ಧೋನಿ ಬರ್ತ್​​ಡೇಗೆ ಐಸಿಸಿ ವಿಶೇಷ ಕೊಡುಗೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts