More

    ಮೋಸ ಮಾಡಿ ಜಯ ಗಳಿಸಿತಾ ಬಿಜೆಪಿ? ಅಂಚೆ ಮತಗಳ ಮರುಎಣಿಕೆಗೆ ತೇಜಸ್ವಿ ಒತ್ತಾಯ

    ಪಟನಾ: ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದಾಗಿದೆ. ಬಿಜೆಪಿ, ಜೆಡಿಯು ಮೈತ್ರಿ ಜಯಭೇರಿ ಬಾರಿಸಿದೆ. ಆದರೆ ಈ ಫಲಿತಾಂಶದಲ್ಲಿ ಅನ್ಯಾಯವಿರುವುದಾಗಿ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ದೂರಿದ್ದಾರೆ. ಅಂಚೆ ಮತಗಳ ಮರುಎಣಿಕೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ನ.14ರಿಂದ ಅಖಿಲ ಭಾರತ ಸಹಕಾರ ಸಪ್ತಾಹ : ಸಿಎಂ ಬಿಎಸ್‌ವೈ ಉದ್ಧಾಟನೆ

    ಎನ್​ಡಿಎಗೆ ಶೇ. 37.3 ಮತ ಸಿಕ್ಕಿದೆ. ಮಹಾಘಟಬಂಧನಕ್ಕೆ ಶೇ. 37.2 ಮತ ಸಿಕ್ಕಿದೆ. ಕೇವಲ ಶೇ. 0.1 ಮತಗಳ ಅಂತರವಿದೆ. ಅಂದರೆ ಮಹಾಘಟನಬಂಧನಕ್ಕಿಂತ 12 ಸಾವಿರ ಹೆಚ್ಚು ಮತಗಳನ್ನು ಎನ್​ಡಿಎ ಪಡೆದುಕೊಂಡಿದೆ. ಆದರೆ ಕ್ಷೇತ್ರವಾರು ನೋಡಿದರೆ ಮಹಾಘಟಬಂಧನ 110 ಕ್ಷೇತ್ರದಲ್ಲಿ ಜಯ ಗಳಿಸಿದ್ದರೆ ಎನ್​ಡಿಎ 125 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಕೇವಲ 12 ಸಾವಿರ ಮತಗಳಿಗೆ 15 ಸ್ಥಾನ ಹೆಚ್ಚಾಗಲು ಹೇಗೆ ಸಾಧ್ಯ ಎಂದು ತೇಜಸ್ವಿ ಯಾದವ್​ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ರೇವತಗಾಂವ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

    ಅಂಚೆ ಮತಗಳನ್ನು ಎಣಿಕೆ ಮಾಡಬೇಕೆಂದರೆ ಅದಕ್ಕೆ ಅದರದ್ದೇ ಆದ ನಿಯಮಗಳಿವೆ. ಎಲ್ಲ ಮತಗಳಿಗಿಂತ ಮೊದಲು ಅಂಚೆ ಮತ ಎಣಿಕೆಯಾಗಬೇಕು. ಸಾಕ್ಷ್ಯವಾಗಿ ವಿಡಿಯೋ ಚಿತ್ರೀಕರಣವಾಗಬೇಕು. ಆದರೆ ಇಲ್ಲಿ ಕೊನೆಯಲ್ಲಿ ಅಂಚೆ ಮತ ಎಣಿಕೆಯಾಗಿದೆ. ಅದರಲ್ಲೂ ಸಾಕಷ್ಟು ಮತಗಳನ್ನು ರದ್ದು ಮಾಡಲಾಗಿದೆ. ಇದೆಲ್ಲವುದಕ್ಕೂ ಉತ್ತರ ಬೇಕು. ಅಂಚೆ ಮತಗಳ ಮರು ಎಣಿಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ಮನೆ ಹತ್ತಿರ ಮಲಗುತ್ತದೆಯೆಂದು ನಾಯಿ ಮೇಲೆ ಆ್ಯಸಿಡ್​ ಸುರಿದ ಪಾಪಿ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts