More

    ಸಿಎಂ ನಿತೀಶ್​ ಕುಮಾರ್​ ಬಹುಮತ ಸಾಬೀತಿಗೂ ಮುನ್ನವೇ ಮಿತ್ರ ಪಕ್ಷ ಆರ್​ಜೆಡಿಗೆ ಸಿಬಿಐ ಶಾಕ್​!

    ಪಟನಾ: ಉದ್ಯೋಗ ಪಡೆಯಲು ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಯಾದವ್​ ನೇತೃತ್ವದ ರಾಷ್ಟ್ರೀಯ ಜನತಾದಳ (ಆರ್​ಜೆಡಿ) ಪಕ್ಷದ ಇಬ್ಬರು ಹಿರಿಯ ನಾಯಕರ ನಿವಾಸಗಳ ಮೇಲೆ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ಇಂದು (ಆ.24) ದಾಳಿ ಮಾಡಿದೆ.

    ಯುಪಿಎ-1 ಸರ್ಕಾರದಲ್ಲಿ ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ಈ ಹಗರಣ ನಡೆದಿತ್ತು. ಭೂಮಿಗೆ ಪ್ರತಿಯಾಗಿ ಅನರ್ಹ ಅಭ್ಯರ್ಥಿಗಳಿಗೆ ಉದ್ಯೋಗಗಳನ್ನು ನೀಡಲಾಯಿತು. ಈ ಸಂಬಂಧ ಈಗಾಗಲೇ ಸಿಬಿಐ ಎಫ್​ಐಆರ್​ ದಾಖಲಿಸಿ, ತನಿಖೆ ನಡೆಸುತ್ತಿದೆ.

    ಎನ್​ಡಿಎ ಮೈತ್ರಿಕೂಟದಿಂದ ಹೊರ ಬಂದ ನಿತೀಶ್​ ಕುಮಾರ್​ ನೇತೃತ್ವದ ಜನತಾದಳ (ಸಂಯುಕ್ತ)ಕ್ಕೆ ಸರ್ಕಾರ ರಚನೆ ಮಾಡಲು ಆರ್​ಜೆಡಿ ಬೆಂಬಲ ವ್ಯಕ್ತಪಡಿಸಿದೆ. ಇಂದು ನಿತೀಶ್​ ಕುಮಾರ್​ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಾಗಿದ್ದು, ಅದಕ್ಕೂ ಮುನ್ನವೇ ಆರ್​ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ.

    ಆರ್​ಜೆಡಿ ರಾಜ್ಯ ಸಭಾ ಸಂಸದ ಅಹ್ಮದ್​ ಅಶ್ಫಾಕ್ ಕರೀಂ ಮತ್ತು ಬಿಹಾರದ ವಿಧಾನ ಪರಿಷತ್ತು ಸದಸ್ಯ ಸುನೀಲ್​ ಸಿಂಗ್​ ಅವರ ನಿವಾಸಗಳ ಮೇಲೆ ಇಂದು ಬೆಳಗ್ಗೆ ಸಿಬಿಐ ದಾಳಿ ನಡೆಸಿದೆ. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗುತ್ತಿದೆ. ಈ ದಾಳಿಗೆ ಅರ್ಥವೇ ಇಲ್ಲ. ದಾಳಿಯ ಭಯದಿಂದ ನಮ್ಮ ಶಾಸಕರು ಅವರೊಂದಿಗೆ (ಬಿಜೆಪಿ) ಸೇರಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಈ ದಾಳಿ ಮಾಡುತ್ತಿದ್ದಾರೆ ಎಂದು ಸುನೀಲ್​ ಸಿಂಗ್​ ತಮ್ಮ ಪಟನಾ ನಿವಾಸದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ಹನಿಟ್ರ್ಯಾಪ್​ಗೆ ಬೀಳದ ಕಾಡಾನೆ: ಹೆಣ್ಣಾನೆಯೊಂದಿಗೆ ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ಎಸ್ಕೇಪ್​!

    ಮೊಸಳೆ ವೇಗವಾಗಿ ಓಡೋದನ್ನ ಎಂದಾದ್ರೂ ನೋಡಿದ್ದೀರಾ? ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ

    ಡಿವೋರ್ಸ್​ ವದಂತಿಗೆ ಬ್ರೇಕ್​: 1 ತಿಂಗಳು ತವರಿಗೆ ಹೋಗ್ತೀನೆಂದು ಹೆಂಡ್ತಿ ಹೇಳಿದ್ದಕ್ಕೆ ಕುಣಿದು ಕುಪ್ಪಳಿಸಿದ ಚಹಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts