More

    ತಂತ್ರಜ್ಞಾನ ಆಧಾರಿತ ಶಿಕ್ಷಣ ಶ್ಲಾಘನೀಯ

    ಕಬ್ಬೂರ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇಂಟರ‌್ಯಾಕ್ಟಿವ್ ಬೋರ್ಡ್ ವಿತರಿಸುತ್ತಿದ್ದಾರೆ ಎಂದು ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ ಹೇಳಿದರು.

    ಕಬ್ಬೂರ ಪಟ್ಟಣದ ಬೆಲ್ಲದ ನಗರದಲ್ಲಿರುವ ಓಂ ಪಬ್ಲಿಕ್ ಸ್ಕೂಲ್, ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆ ವತಿಯಿಂದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ 2ನೇ ಕಂತಿನ 25 ಇಂಟರ‌್ಯಾಕ್ಟಿವ್ ಬೋರ್ಡ್‌ಗಳನ್ನು ಶನಿವಾರ ವಿತರಿಸಿ ಮಾತನಾಡಿದರು. ಸಂಪತ್ತಿನಲ್ಲಿ ಸಮಾಜಮುಖಿ ಕಾರ್ಯಗಳಿಗೆ ಕೆಲ ಭಾಗ ದಾನ ಮಾಡಬೇಕು. ಮಹೇಶ ಬೆಲ್ಲದ ಅವರ ಕೆಲಸ ಮಾತನಾಡುತ್ತಿದ್ದು, ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದರು.

    ಶಾಲೆಯ ಸಂಸ್ಥಾಪಕ ಹಾಗೂ ಸಂಸ್ಥೆ ಅಧ್ಯಕ್ಷ ಮಹೇಶ ಬೆಲ್ಲದ ಮಾತನಾಡಿ, ಗ್ರಾಮೀಣ ಮಕ್ಕಳಿಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಬೇಕು ಎಂಬ ಅದಮ್ಯ ಆಸೆಯಿಂದ ಇಂಟರ‌್ಯಾಕ್ಟಿವ್ ಬೋರ್ಡ್ ನೀಡಲು ನಿರ್ಧಾರ ಮಾಡಿದೆ ಎಂದರು.
    ಬಿಆರ್‌ಸಿ ಬಸವರಾಜ ಕಾಂಬಳೆ ಮಾತನಾಡಿದರು. ಪ್ರಾಚಾರ್ಯ ಡಾ.ಮಹೇಂದ್ರ ಕೆ. ಆರ್.ಪ್ರಾಸ್ತಾವಿಕವಾಗಿ ಮಾತನಾಡಿದರು.

    ಹಿರಾ ಶುಗರ್ಸ್‌ ನಿರ್ದೇಶಕ ಸುರೇಶ ಬೆಲ್ಲದ, ಡಾ.ಪ್ರಕಾಶ ಬೆಲ್ಲದ, ರಮೇಶ ಬೆಲ್ಲದ, ಶಿವಪ್ಪ ಹುದ್ದಾರ, ಮಹಾಲಿಂಗ ಹಂಜಿ, ಜಿ.ಬಿ.ಸಂಗಟೆ, ಬಿ.ಎಸ್.ಕಾಡೇಶಗೋಳ, ಎಸ್.ಕೆ.ಕಾಮಗೌಡ, ರಮೇಶ ಬಸ್ತವಾಡೆ, ಮಹೇಶ ಗೋಜಗೋಜಿ, ಕಲ್ಲಪ್ಪ ಕರಗಾಂವ, ಎಸ್.ಐ.ಹೊನ್ನಾಳಿ, ಎಸ್.ಬಿ.ಮುನ್ನೋಳಿ, ಎಸ್.ಆರ್.ಡೊಂಗರೆ, ಬಿ.ಎಂ.ಅಮ್ಮಣಗಿ ಇತರರು ಇದ್ದರು. ಉಪ ಪ್ರಾಚಾರ್ಯ ರಾಜು ಮಹಿಪತಿ ನಿರೂಪಿಸಿದರು, ಸಿದ್ದಪ್ಪ ಮೂರಚಟ್ಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts