More

    ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು

    ಅಳವಂಡಿ: ಗುರುಗಳಿಗೆ ವಿದ್ಯಾರ್ಥಿಗಳೇ ಆಸ್ತಿ, ಶಿಕ್ಷಕ ಹುದ್ದೆ ಇತರ ವೃತ್ತಿಗಳಿಗಿಂತ ಪವಿತ್ರವಾದದ್ದು ಎಂದು ಬೆಂಗಳೂರಿನ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ.ಕಲ್ಲೇಶ ತಿಳಿಸಿದರು.

    ಇದನ್ನೂ ಓದಿ: ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿ

    ಸಮೀಪದ ಹಿರೇಸಿಂದೋಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 2004-05 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಭಾನುವಾರ ಮಾತನಾಡಿದರು.

    ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಹಾಗೇ 18 ವರ್ಷಗಳ ಹಿಂದೆ ಈ ಶಾಲೆಯಲ್ಲಿ ಓದಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಪುನಃ ಒಂದೆಡೆ ಸೇರಿ ಗುರುಗಳನ್ನು ಸ್ಮರಿಸುವುದು ಹಾಗೂ ವಿದ್ಯಾರ್ಥಿ ಜೀವನದ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸ್ನೇಹಿತರ ಸಮ್ಮೀಲನ ಕಾರ್ಯಕ್ರಮ ಸಂತಸ ತಂದಿದೆ.

    ಶಿಕ್ಷಕನಾಗಿ ಸೇವೆ ಸಲ್ಲಿಸುವಾಗ ಇದ್ದ ತೃಪ್ತಿ ಅಧಿಕಾರಿಯಾದ ಮೇಲೆ ಇಲ್ಲ ಹೀಗಾಗಿ ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು ಎಂದರು. ಹಿರೇಸಿಂದೋಗಿ ಕಪ್ಪತ್ತಮಠದ ಶ್ರೀಚಿದಾನಂದ ಸ್ವಾಮಿಗಳು ಮಾತನಾಡಿ, ಗುರುವಿನ ಕೃಪೆ ಇದ್ದರೆ ಜಗತ್ತನ್ನು ಗೆಲ್ಲಬಹುದು. ಹಳೆಯ ವಿದ್ಯಾರ್ಥಿಗಳು ಜೀವನದ ಒತ್ತಡದ ಕೆಲಸದ ನಡುವೆ ಗುರುಗಳನ್ನು ಸ್ಮರಣೆ ಮಾಡುವುದು ಉತ್ತಮ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದರು.

    ವೀರಣ್ಣ ವಾಲಿ, ರೇಣುಕಾ ಹಡಗಲಿ, ಮಹಾಂತೇಶ ಚನ್ನನಾಯ್ಕರ, ಸೋಮರಡ್ಡಿ ಅಳವಂಡಿ, ಸುಮನ್, ನಾಗರಾಜ ಸುನಗ, ಸುಧೀಂದ್ರ ಜೋಶಿ, ಶಂಕರಗೌಡ, ರಾಮಣ್ಣ, ದೇವರಡ್ಡಿ, ಹನುಮನಗೌಡ, ಪಾಡುರಂಗ, ಬೀಮೇಶ, ವೆಂಕನಗೌಡ,

    ಸಿದ್ದಲಿಂಗಯ್ಯ, ಬೂಮರಡ್ಡಿ ಅವರನ್ನು ಸನ್ಮಾನಿಸಲಾಯಿತು, ಪ್ರಾಚಾರ್ಯ ಹನುಮಂತಪ್ಪ ಅಂಡಗಿ, ಪ್ರಮುಖರಾದ ದೇವಪ್ಪ ಬಚಕ್ಕನವರ, ವೆಂಕಣ್ಣ ಕೊಳ್ಳಿ, ಪ್ರಭುಗೌಡ ಮೈನಳ್ಳಿ, ಕೇಶವರಡ್ಡಿ, ಮಂಜುನಾಥ ಕುರಿ, ಆನಂದ ಮಾದಿನೂರ, ಚಂದ್ರಶೇಖರ ಗದ್ದಿ, ಎಂ.ಆರ್.ಡೊಳ್ಳಿನ, ಮಂಜುಳಾ, ಭುವನೇಶ್ವರಿ, ಸೌಮ್ಯ, ನಿರ್ಮಲವ್ವ, ಷಣ್ಮುಖಗೌಡ, ಮಲ್ಲಪ್ಪ, ಹೊನ್ನಪ್ಪ, ರೇವಣಸಿದ್ದನಗೌಡ, ಸದಾಶಿವರಡ್ಡಿ, ಚನ್ನಯ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts