More

    ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿ

    ಕಲಬುರಗಿ: ರಾಜ್ಯದಲ್ಲಿ ಖಾಲಿ ಇರುವ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕು. ಕಳೆದ ೧೭ ವರ್ಷದಿಂದ ನೇಮಕ ಮಾಡದೇ ಇರುವುದರಿಂದ ಕ್ರೀಡಾ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದ್ದು, ಕ್ರೀಡೆಯಲ್ಲಿ ರಾಜ್ಯದ ಮಕ್ಕಳ ಸಾಧನೆಗೆ ಹೊಡೆತ ಬೀಳುವ ಜತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ರಾಜ್ಯ ನಿರುದ್ಯೋಗಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಹಾ ಪೋಷಕ ಡಾ.ಎಂ.ಎಸ್.ಪಾಸೋಡಿ, ಪೋಷಕ ಬಿ.ದೇವಿಂದ್ರಪ್ಪ, ಗೌರವಾಧ್ಯಕ್ಷ ಡಾ.ಶಿವಲಿಂಗಪ್ಪ ಜಂಟಿಯಾಗಿ ಹೇಳಿದರು.

    ರಾಜ್ಯದಲ್ಲಿ ತರಬೇತಿ ಹೊಂದಿದ್ದ ಸುಮಾರು ೫೦ ಸಾವಿರ ಸಿ.ಪಿಇಡಿ, ಬಿ.ಪಿಇಡಿ, ಎಂ.ಪಿಇಡಿ ನಿರುದ್ಯೋಗಿ ದೈಹಿಕ ಶಿಕ್ಷಣ ಶಿಕ್ಷಕರಿದ್ದು, ೨೦೦೬-೦೭ರಲ್ಲಿ ಪ್ರೊ.ಎಲ್.ಆರ್.ವೈದ್ಯನಾಥನ ವರದಿ ಜಾರಿ ಮಾಡಬೇಕು. ಪ್ರಾಥಮಿಕ, ಪ್ರೌಢ, ಪಿಯುಸಿ ಸೇರಿ ಎಲ್ಲ ಕಡೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಪ್ರತಿ ತಾಲೂಕಿನಲ್ಲಿ ಕ್ರೀಡಾಂಗಣವಿದ್ದು, ಅಲ್ಲಿನ ಆಡಳಿತಾಧಿಕಾರಿಗಳ ಹುದ್ದೆ ದೈಹಿಕ ಶಿಕ್ಷಣ ಪದವೀಧರರನ್ನು ನೇಮಿಸಬೇಕು, ಮುರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚನ್ನಮ್ಮ ಸೇರಿ ಇತರ ವಸತಿ ಶಾಲೆಗಳ ವಾರ್ಡ್ನ ನೇಮಕದಲ್ಲಿ ಬಿ.ಪಿಇಡಿ ಪದವೀಧರರನ್ನು ಪರಿಗಣಿಸಬೇಕು, ದೈಹಿಕ ಶಿಕ್ಷಣ ಶಿಕರನ್ನು ಸಹ ಶಿಕ್ಷರನ್ನಾಗಿ ಪದನಾಮಕರಿಸಬೇಕು, ಮುಖ್ಯಗುರು ಹುದ್ದೆಗೆ ಬಡ್ತಿ ನೀಡುವಂತಾಗಬೇಕು, ಗ್ರಾಪಂಗೆ ಒಬ್ಬ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷರನ್ನು ನೇಮಿಸಬೇಕು, ಪ್ರತಿ ತಾಲೂಕಿಗೆ ಕ್ರೀಡಾ ತರಬೇತಿ ಶಾಲೆಗಳನ್ನು ಆರಂಭಿಸಬೇಕು, ಅತಿಥಿ ಶಿಕ್ಷಕರ ನೇಮಕ ಕೈಬಿಡಬೇಕು, ದೈಹಿಕ ಶಿಕ್ಷಣ ಶಿಕ್ಷರನ್ನು ನೇಮಿಸದಿದ್ದರೆ ಪ್ರತಿ ತಿಂಗಳು ಗೌರವ ಮಾಸಾಶನವಾಗಿ ೧೫ ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts