More

    ಇನ್ನು ಮುಂದೆ ರೈಲ್ವೆ ನಿಲ್ದಾಣದಲ್ಲಿ ಟೀ ಕುಡಿಯೋಕೆ ಸಿಗಲ್ಲ ಪ್ಲಾಸ್ಟಿಕ್​ ಕಪ್​; ಮಣ್ಣಿನ ಲೋಟದಲ್ಲೇ ಸವಿಯಿರಿ ಬಿಸಿಬಿಸಿ ಚಹಾ!

    ಜೈಪುರ: ರೈಲ್ವೆ ನಿಲ್ದಾಣದಲ್ಲಿ ಕುಳಿತು ರೈಲಿಗೆ ಕಾಯುವಾಗ ಒಂದು ಕಪ್​ ಟೀ ಇದ್ದರೆ ಅದರ ಮಜಾನೇ ಬೇರೆ. ಮನೆಯಲ್ಲಿ ಮಾಡುವಷ್ಟು ರುಚಿ ಇಲ್ಲದಿದ್ದರೂ, ಪ್ಲಾಸ್ಟಿಕ್​ ಕಪ್​ನಲ್ಲಿ ಸಿಗುವ ಆ ಟೀ ಬಗ್ಗೆ ಬೇರೆಯದ್ದೇ ಆದ ಪ್ರೀತಿ ಪ್ರಯಾಣಿಕರಿಗಿದೆ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಪ್ಲಾಸ್ಟಿಕ್​ ಕಪ್​ನಲ್ಲಿ ಟೀ ಕುಡಿಯುವದಕ್ಕೆ ಸಂಪೂರ್ಣವಾಗಿ ಬ್ರೇಕ್​ ಹಾಕಲು ರೈಲ್ವೆ ಇಲಾಖೆ ನಿರ್ಧರಿಸಿದೆ.

    ಇದನ್ನೂ ಓದಿ: ಡಿವೋರ್ಸ್​ ಕೇಸ್​ ಹಾಕಿದವರೇ ವಾದ ಮಂಡಿಸಲು ಅವಕಾಶವಿದೆಯೆ?

    ರೈಲ್ವೆ ನಿಲ್ದಾಣದ ಟೀ ಶಾಪ್​ಗಳಲ್ಲಿ ಪ್ಲಾಸ್ಟಿಕ್​ ಕಪ್​ ಬದಲಾಗಿ ಮಣ್ಣಿನ ಲೋಟದಲ್ಲಿ ಟೀ ಮಾರಾಟ ಮಾಡಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್​ ಗೋಯಲ್​ ತಿಳಿಸಿದ್ದಾರೆ. ಭಾನುವಾರದಂದು ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ಧಿಗವಾರ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ಈಗಾಗಲೇ ದೇಶದ 400 ರೈಲ್ವೆ ನಿಲ್ದಾಣದಲ್ಲಿ ಮಣ್ಣಿನ ಲೋಟದಲ್ಲಿ ಟೀ ಮಾರಾಟ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿ ರೈಲ್ವೆ ನಿಲ್ದಾಣವೂ ಪ್ಲಾಸ್ಟಿಕ್​ ಮುಕ್ತವಾಗಲಿದೆ. ಎಲ್ಲ ನಿಲ್ದಾಣದಲ್ಲಿಯೂ ಮಣ್ಣಿನ ಲೋಟದಲ್ಲಿಯೇ ಟೀ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ವಿದ್ಯುತ್​ ಕಂಬದ ಮೇಲೆ ಕಾದು ಕುಳಿತಿದ್ದ ಜವರಾಯ! ಓರ್ವ ಲೈನ್​ ಮ್ಯಾನ್​ ಸಾವು, ಇನ್ನೋರ್ವ ಗಂಭೀರ

    ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts