More

    ಮೆಟ್ರೋ ರೈಲು ನಿಲ್ದಾಣಗಳಲ್ಲಿ ಚಹಾದಂಗಡಿ, ಹಾಲು ಮಾರಾಟ ಮಳಿಗೆ

    ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದಲ್ಲಿನ ನಾಯಂಡಹಳ್ಳಿ- ಕೆಂಗೇರಿ ಮಾರ್ಗದಲ್ಲಿನ ನಿಲ್ದಾಣಗಳಲ್ಲಿ ಚಹಾ ಅಂಗಡಿ ಮತ್ತು ಹಾಲು ಮಾರಾಟ ಮಳಿಗೆಗಳಿಗೆ ಅವಕಾಶ ನೀಡಲು ಚಿಂತನೆ ನಡೆಸಲಾಗಿದೆ.

    ನಮ್ಮ ಮೆಟ್ರೋ 2ನೇ ಹಂತದಲ್ಲಿನ 72 ಕಿ.ಮೀ. ಉದ್ದದ ಮಾರ್ಗದಲ್ಲಿ ಈಗಾಗಲೆ ಯಲಚೇನಹಳ್ಳಿಯಿಂದ ಸಿಲ್ಕ್ ಸಂಸ್ಥೆವರೆಗಿನ 6.8 ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದೆ. ಅದರ ಜತೆಗೆ ಇದೀಗ ನಾಯಂಡಹಳ್ಳಿ-ಕೆಂಗೇರಿವರೆಗಿನ 7.5 ಕಿ.ಮೀ. ಉದ್ದದ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಈ ಮಾರ್ಗದಲ್ಲಿನ ನಿಲ್ದಾಣಗಳಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳಲ್ಲಿ ಚಹಾ ಮತ್ತು ಹಾಲು ಮಾರಾಟಕ್ಕೆ ಅವಕಾಶ ನೀಡುವ ಕುರಿತು ಚರ್ಚಿಸಲಾಗುತ್ತಿದೆ.

    ಈ ಕುರಿತಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಣ್ಣ ಮಾರಾಟಗಾರರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಅಲ್ಲದೆ, ಶನಿವಾರ ನಾಯಂಡಹಳ್ಳಿ-ಕೆಂಗೇರಿ ಮಾರ್ಗದಲ್ಲಿನ ಕಾಮಗಾರಿ ಪರಿಶೀಲಿಸಿ, ಬಾಕಿ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

    ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್​ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…

    ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!

    ಮಹಿಳಾ ಪೊಲೀಸರಿಗೇ ಲೈಂಗಿಕ ಕಿರುಕುಳ ಕೊಟ್ಟ; ಮಾಸ್ಕ್ ಹಾಕಿಲ್ಲ ಎಂದು ತಡೆದಿದ್ದಕ್ಕೆ ಪೀಡಿಸಿದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts