More

    ಶುಕ್ರವಾರ ಒಂದೇ ದಿನ ವಿನಾಯಿತಿ, ಉಳಿದ ದಿನಗಳಲ್ಲಿ ಡ್ರೆಸ್​ ಕೋಡ್ ಕಡ್ಡಾಯ: ಟಿಸಿಎಸ್​ನಿಂದ ಉದ್ಯೋಗಿಗಳಿಗೆ ಸೂಚನೆ

    ನವದೆಹಲಿ: ಸಾಫ್ಟ್​ವೇರ್​ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್​) ವರ್ಕ್​ ಫ್ರಂ ಹೋಮ್​ನಲ್ಲಿರುವ ಉದ್ಯೋಗಿಗಳಿಗೆ ಆಫೀಸಿಗೆ ಬರಲು ಸೂಚನೆ ನೀಡಿದ್ದಲ್ಲದೆ, ಕಡ್ಡಾಯವಾಗಿ ಡ್ರೆಸ್​ ಕೋಡ್ ಪಾಲಿಸುವಂತೆಯೂ ತಿಳಿಸಿದೆ.

    ಟಿಸಿಎಸ್​ನ ಚೀಫ್​ ಹ್ಯೂಮನ್ ರಿಸೋರ್ಸಸ್​ ಆಫೀಸರ್ ಮಿಲಿಂದ್ ಕಕ್ಕಡ್ ಅವರು ಇ-ಮೇಲ್ ಮೂಲಕ ತಮ್ಮ ಉದ್ಯೋಗಿಗಳಿಗೆ ಈ ಸೂಚನೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ವರ್ಕ್​ ಫ್ರಂ ಹೋಮ್ ಮುಗಿಸಿ ಆಫೀಸಿಗೆ ಮರಳುತ್ತಿರುವ ಉದ್ಯೋಗಿಗಳು ಸರಿಯಾದ ಡ್ರೆಸ್​ ಕೋಡ್ ಪಾಲಿಸಬೇಕು ಎಂದು ಇ-ಮೇಲ್​ನಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ಕಾರಲ್ಲಿ ಕಾಳಿಂಗ ಸರ್ಪ!; 50 ಕಿ.ಮೀ. ಪ್ರಯಾಣಿಸಿದ ಬಳಿಕವೇ ಗೊತ್ತಾಗಿದ್ದು!

    ಉದ್ಯೋಗಿಗಳು ಸೋಮವಾರದಿಂದ ಗುರುವಾರದವರೆಗೆ ಡ್ರೆಸ್​ ಕೋಡ್ ಪಾಲಿಸಬೇಕು. ಈ ದಿನಗಳಲ್ಲಿ ಬಿಸಿನೆಸ್ ಕ್ಯಾಷುವಲ್ಸ್​ ಧರಿಸಿ ಬರಬೇಕು. ಅಂದರೆ ಪುರುಷರು ಫುಲ್ ಶರ್ಟ್-ಟ್ರೌಷರ್ ಧರಿಸಿ ಇನ್​ ಶರ್ಟ್ ಮಾಡಿರಬೇಕು ಹಾಗೂ ಮಹಿಳೆಯರು ಬಿಸಿನೆಸ್ ಡ್ರೆಸ್ ಧರಿಸಿರಬೇಕು ಎಂದು ಸೂಚಿಸಲಾಗಿದೆ.

    ಅಲ್ಲದೆ ಎಲ್ಲ ಸೆಮಿನಾರ್​-ಸಮಾವೇಶಗಳಲ್ಲಿ ಮತ್ತು ಕ್ಲೈಂಟ್ ಭೇಟಿ ವೇಳೆ ಬಿಸಿನೆಸ್ ಫಾರ್ಮಲ್ ಧರಿಸಿರಬೇಕು. ಶುಕ್ರವಾರ ಮಾತ್ರ ಹಾಫ್ ಸ್ಲೀವ್ಡ್ ಶರ್ಟ್, ಟರ್ಟಲ್ ನೆಕ್, ಖಾಕಿಸ್, ಕೈನೊಸ್, ಕುರ್ತಾ-ಸಲ್ವಾರ್ ಇತ್ಯಾದಿ ಧರಿಸಲು ಅವಕಾಶ ಇದೆ ಎಂದು ಇ-ಮೇಲ್​ನಲ್ಲಿ ತಿಳಿಸಲಾಗಿದೆ.

    ಮ್ಯಾನೇಜ್​ಮೆಂಟ್ ಮೀಟಿಂಗ್​ನಲ್ಲಿ ಅಂಗಿ ಧರಿಸದೆ ಭಾಗವಹಿಸಿದ ಸಿಇಒ!

    ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts