More

    ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವಕ್ಕೆ TATA ಗುಡ್​ಬೈ! ಟೆಂಡರ್ ಬಿಡುಗಡೆ ಮಾಡಿದ BCCI

    ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಎನಿಸಿಕೊಂಡಿರುವ ಇಂಡಿಯನ್​ ಪ್ರೀಮಿಯರ್ ಲೀಗ್ (ಐಪಿಎಲ್​)ನಲ್ಲಿ ಮಹತ್ವದ ಬದಲಾವಣೆ ನಡೆಯಲಿದೆ. ಈ ಬದಲಾವಣೆಯು ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಸಂಬಂಧಿಸಿದ್ದಾಗಿದೆ. ಅಂದರೆ, ಮುಂದಿನ ಸೀಸನ್​ನಿಂದಲೇ ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಟಾಟಾ ಕಂಪನಿ ಗುಡ್​ ಬೈ ಹೇಳಲಿದೆ ಎಂಬ ವದಂತಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಭಾರೀ ಮನ್ನಣೆ ಪಡೆದಿರುವ ಟಿ-20 ಲೀಗ್​, ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬರುವ ಸೀಸನ್​​ಗಾಗಿ ಹೊಸ ಶೀರ್ಷಿಕೆ ಪ್ರಾಯೋಜಕರನ್ನು ಆಹ್ವಾನಿಸಲಾಗಿದೆ. ಐಪಿಎಲ್‌ನ 2024–2028ರ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳು ಬಿಡ್‌ಗೆ ಸಿದ್ಧವಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಮೋದನೆ ನೀಡಿದೆ ಮತ್ತು ಐಪಿಎಲ್ ಆಡಳಿತ ಮಂಡಳಿಯು ಬಿಡ್‌ಗಳನ್ನು ಆಹ್ವಾನಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಸದ್ಯ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಇತ್ತೀಚೆಗಷ್ಟೇ ಹೊಸ ಟೆಂಡರ್‌ಗಳನ್ನು ಸಹ ಬಿಡುಗಡೆ ಮಾಡಿದೆ. 2021ರಿಂದ 2024ರ ಸೀಸನ್​ವರೆಗೂ ಟಾಟಾ ಗ್ರೂಪ್‌ನೊಂದಿಗೆ ಒಪ್ಪಂದವಾಗಿತ್ತು. ಇದೀಗ ಟಾಟಾ ಗುಡ್​ಬೈ ಹೇಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಟೆಂಡರ್​ಗಳನ್ನು ಬಿಡುಗಡೆ ಮಾಡಿದೆ.

    ಭಾರತ ಮತ್ತು ಚೀನಾ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ “Vivo” ಕಂಪನಿಯು ರಾಜೀನಾಮೆ ನೀಡಿದ ನಂತರ ಡ್ರೀಮ್-11 ಪ್ರಾಯೋಜಕತ್ವ ಪಡೆದಿತ್ತು. ಇದಾದ ಬಳಿಕ ಮತ್ತೆ ವಿವೋ ಐಪಿಎಲ್​ ಪಡೆದಿತ್ತು. 2021 ರಲ್ಲಿ ವಿವೋದಿಂದ ಟಾಟಾ ಐಪಿಎಲ್​ಗೆ ಪ್ರಾಯೋಜಕತ್ವ ಬದಲಾಯಿತು. ಪ್ರಸ್ತುತ ಟೆಂಡರ್‌ಗೆ ಆಹ್ವಾನದ ಖರೀದಿಯ ಅವಧಿಯನ್ನು 2024ರ ಜನವರಿ 8ಕ್ಕೆ ನಿಗದಿಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆಯು ಅರ್ಹತಾ ಅವಶ್ಯಕತೆಗಳು, ಬಿಡ್‌ಗಳನ್ನು ಸಲ್ಲಿಸುವ ವಿಧಾನ, ಹಕ್ಕುಗಳು ಸೇರಿದಂತೆ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳನ್ನು ಒಳಗೊಂಡಿದೆ.

    ಐಪಿಎಲ್ ಶೀರ್ಷಿಕೆ ಪ್ರಾಯೋಜಕರು
    2008ರಲ್ಲಿ DLF IPL ನಿಂದ 2022 ರಲ್ಲಿ ಟಾಟಾ IPL ವರೆಗೆ 15 ವರ್ಷಗಳ ಅವಧಿಯಲ್ಲಿ ವಿವಿಧ ಶೀರ್ಷಿಕೆ ಪ್ರಾಯೋಜಕರನ್ನು ಐಪಿಎಲ್​ ಹೊಂದಿತ್ತು.
    1. ಡಿಎಲ್​ಎಫ್​ (2008 ರಿಂದ 2012)
    2. ಪೆಪ್ಸಿ (2013 ರಿಂದ 2015)
    3. ವಿವೋ ಐಪಿಎಲ್​ (2016 ರಿಂದ 2017)
    4. ವಿವೋ ಐಪಿಎಲ್​ (2018 ರಿಂದ 2019)
    5. ಡ್ರೀಮ್​ 11 (2020)
    6. ವಿವೋ ಐಪಿಎಲ್​ (2021)
    7. ಟಾಟಾ ಐಪಿಎಲ್​ (2022- ಪ್ರಸ್ತುತ)

    ಕ್ರಾಂತಿಕಾರಕ ಪುಸ್ತಕಗಳನ್ನೇ ಓದುತ್ತಿದ್ದ ಮನೋರಂಜನ್​! ಮದ್ವೆ ಬೇಡ ಸಮಾಜ ಉದ್ಧಾರ ಮಾಡ್ತೀನಿ ಅಂತಿದ್ದ

    ಒಡೆದ ಹಿಮ್ಮಡಿಗಳಿಗೆ ಇವು ಅತ್ಯುತ್ತಮ ಮನೆಮದ್ದುಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts