More

    ಕ್ರಾಂತಿಕಾರಕ ಪುಸ್ತಕಗಳನ್ನೇ ಓದುತ್ತಿದ್ದ ಮನೋರಂಜನ್​! ಮದ್ವೆ ಬೇಡ ಸಮಾಜ ಉದ್ಧಾರ ಮಾಡ್ತೀನಿ ಅಂತಿದ್ದ

    ನವದೆಹಲಿ: ಸಂಸತ್​ ಭವನದಲ್ಲಿಂದು ಕಲಾಪ ನಡೆಯುವ ಸಮಯದಲ್ಲೇ ಏಕಾಏಕಿ ಒಳ ನುಗ್ಗಿ ಭಯದ ವಾತಾವರಣ ಉಂಟುಮಾಡಿದ ಇಬ್ಬರು ಕಿಡಿಗೇಡಿಗಳಲ್ಲಿ ಮೈಸೂರಿನ ಮನೋರಂಜನ್​ ಕೂಡ ಒಬ್ಬರು. ಈತನ ಕುರಿತಾದ ಅನೇಕ ಅಚ್ಚರಿಯ ಮಾಹಿತಿಗಳು ಇದೀಗ ಬಹಿರಂಗವಾಗಿದೆ.

    ಆರೋಪಿ ಮನೋರಂಜನ್​, ಮೈಸೂರಿನ ನಿವಾಸಿ. ವಿಜಯನಗರದ 2ನೇ ಹಂತದಲ್ಲಿ ಈತನ ಮನೆಯಿದೆ. ಈಗಾಗಲೇ ಮನೋರಂಜನ್ ನಿವಾಸಕ್ಕೆ ವಿಜಯನಗರ ಉಪ ವಿಭಾಗದ ಉಪ ಪೊಲೀಸ್ ಆಯುಕ್ತ ಗಜೇಂದ್ರ ಪ್ರಸಾದ್, ವಿಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಭೇಟಿ ನೀಡಿ, ಮನೋರಂಜನ್ ತಂದೆ ದೇವರಾಜ್ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

    ಮನೋಂಜನ್ 2014ರಲ್ಲೇ ಬಿಇ ಮುಗಿಸಿದ್ದ. ದೆಹಲಿ ಮತ್ತು ಬೆಂಗಳೂರು ಅಂತ ಓಡಾಡುತ್ತಿದ್ದ. ಯಾವ ಪಕ್ಷದಲ್ಲೂ ಆತ ಗುರುತಿಸಿಕೊಂಡಿರಲಿಲ್ಲ. ಆತ ತುಂಬ ಓದುತ್ತಿದ್ದ. ಮದುವೆಯಾಗು ಅಂತ ಅವರ ತಂದೆ ಆಗ್ರಹಿಸಿದರೆ, ನಾನು ಸಮಾಜ ಉದ್ಧಾರ ಮಾಡುತ್ತೇನೆ ಮತ್ತು ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂದು ಹೇಳುತ್ತಿದ್ದ.

    ಕ್ರಾಂತಿಕಾರಿ ಪುಸ್ತಕದ ಮೇಲೆ ಪ್ರೀತಿ
    ಮನೋರಂಜನ್​ ಯಾವಾಗಲು ಕ್ರಾಂತಿಕಾರಿ ಪುಸ್ತಕಗಳನ್ನು ಓದುತ್ತಿದ್ದ. ಮನೆಯಲ್ಲಿ ಸಿಕ್ಕಿರುವ ಬಹುತೇಕ ಪುಸ್ತಕಗಳು ಕ್ರಾಂತಿಕಾರಿಕ ವಿಚಾರ ಇರುವ ಪುಸ್ತಕಗಳಾಗಿವೆ. ದಿ ಫರ್ಗಾಟನ್​ ಆರ್ಮಿ, ವಾಟರ್​ ವಾರ್ಸ್​, ಎದೆಗಾರಿಕೆ, ಹುಲಿಯ ನೆನಪುಗಳು, ಗೆರಿಲ್ಲಾ ವಾರ್​ಫೈರ್​ ಸೇರಿದಂತೆ ಮುಂತಾದ ಅನೇಕ ಕ್ರಾಂತಿಕಾರಕ ಪುಸ್ತಕಗಳು ಮನೋರಂಜನ್​ ಬಳಿ ಇವೆ.

    ಮನೋರಂಜನ್​ ಯಾವ ಉದ್ದೇಶಕ್ಕಾಗಿ ಈ ರೀತಿ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದ ಮತ್ತಷ್ಟು ಮಾಹಿತಿಗಳು ಹೊರಬರಬೇಕಿದೆ.

    ನಾಲ್ವರ ಬಂಧನ
    ಪ್ರಾಥಮಿಕ ತನಿಖೆಯ ಪ್ರಕಾರ ಸದನದ ಒಳಗಡೆ ನುಗ್ಗಿದ ಇಬ್ಬರು ಆರೋಪಿಗಳನ್ನು ಸಾಗರ್​ ಶರ್ಮ ಮತ್ತು ಮನೋರಂಜ್​ ಡಿ ಎಂದು ಗುರುತಿಸಲಾಗಿದೆ. ಸಾಗರ್​ ಶರ್ಮ ಎಂಬಾತ ಮೈಸೂರು ಸಂಸದ ಪ್ರತಾಪ್​ ಸಿಂಹ ಅವರ ಹೆಸರಲ್ಲಿ ಪಾಸ್​ ಪಡೆದರೆ, ಮತ್ತೊಬ್ಬ ಆರೋಪಿ ಮೈಸೂರು ಮೂಲದ ಇಂಜಿನಿಯರ್​ ಮನೋರಂಜನ್​ ಡಿ ಎಂದು ಗುರುತಿಸಲಾಗಿದೆ. ಇದೇ ಸಮಯದಲ್ಲಿ ಓರ್ವ ಪುರುಷ ಮತ್ತು ಮಹಿಳೆ ಸಂಸತ್ತಿನ ಹೊರಭಾಗದಲ್ಲಿ ಹಳದಿ ಬಣ್ಣ ಹೊರಸೂಸುವ ವಸ್ತುವನ್ನು ಹಿಡಿದು ಪ್ರತಿಭಟನೆ ನಡೆಸಿದರು. ಇಬ್ಬರು ಸಾರಿಗೆ ಭವನದ ಎದುರು ಪೊಲೀಸರು ಬಂಧಿಸಿದ್ದು, ಅವರನ್ನು 42 ವರ್ಷದ ನೀಲಂ ಮತ್ತು 25 ವರ್ಷದ ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ನೀಲಂ ಹರಿಯಾಣದ ಹಿಸಾರ್ ನಿವಾಸಿ ಮತ್ತು ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೂರ್ ನಿವಾಸಿಯಾಗಿದ್ದು, ಒಟ್ಟು ನಾಲ್ವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

    ಲೋಕಸಭೆ ಸ್ಪೀಕರ್​ ಹೇಳಿದ್ದೇನು?
    ಘಟನೆಯ ಬಗ್ಗೆ ಮಾತನಾಡಿರುವ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಶೂನ್ಯ ಸಮಯದಲ್ಲಿ ನಡೆದ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇದು ಕೇವಲ ಹೊಗೆ ಎಂದು ಕಂಡುಬಂದಿದೆ. ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು ಹೇಳಿದರು. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ಅವರಲ್ಲಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನ ಹೊರಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಲೋಕಸಭೆ ಕಲಾಪ ವೇಳೆ ಭದ್ರತಾ ಲೋಪ; ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ ಮನೋರಂಜನ್ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts