More

    ಲೋಕಸಭೆ ಕಲಾಪ ವೇಳೆ ಭದ್ರತಾ ಲೋಪ; ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ ಮನೋರಂಜನ್ ತಂದೆ

    ಮೈಸೂರು: ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ಘಟನೆ ನಡೆದು ಇಂದಿಗೆ 22 ವರ್ಷಗಳು ಕಳೆದಿವೆ. 2001ರ ಡಿ.13ರಂದು ಸಂಸತ್​ ಭವನದ ಮೇಲೆ ಉಗ್ರರ ದಾಳಿ ನಡೆದಿತ್ತು. ಇದೇ ದಿನ ಇದೀಗ ಇಡೀ ದೇಶ ಮತ್ತೊಂದು ಕರಾಳ ಘಟನೆಗೆ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಉದ್ಘಾಟನೆಯಾದ ನೂತನ ಸಂಸತ್​ ಭವನದಲ್ಲಿ ಭಾರಿ ಭದ್ರತಾ ಲೋಪ ಕಂಡುಬಂದಿದ್ದು, ಎರಡು ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಅಪರಿಚಿತರು ಸದನದ ಒಳಗೆ ಮತ್ತು ಹೊರಗೆ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ.

    ಘಟನೆ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಈ ಪೈಕಿ ಪ್ರಮುಖ ಆರೋಪಿ ಮನೋರಂಜನ್ ತಂದೆ ದೇವರಾಜೇಗೌಡ ಪ್ರತಿಕ್ರಿಯಿಸಿದ್ದು, ಕಲಾಪಕ್ಕೆ ನುಗ್ಗಿದ್ದು ನನಗೆ ಗೊತ್ತಿಲ್ಲಾ ನನ್ನ ಮಗ ತುಂಬಾ ಒಳ್ಳೆಯವನು ಎಂದಿದ್ದಾರೆ.

    Teargas

    ಇದನ್ನೂ ಓದಿ: ಮುಸ್ಲಿಮರು ಎಲ್ಲಾ ವಿವಾದಿತ ಧಾರ್ಮಿಕ ಸ್ಥಳಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು: ಆರ್​ಎಸ್​ಎಸ್​ ನಾಯಕ

    ಈ ಕುರಿತು ಮಾತನಾಡಿದ ಮನೋರಂಜನ್​ ತಂದೆ ದೇವರಾಜೇಗೌಡ, ಆತ ದೆಹಲಿ, ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆ ಓಡಾಡುತ್ತಿದ್ದ. ಅವನಿಗೆ ಸಮಾಜದಲ್ಲಿ ಇರುವ ಜನರಿಗೆ ಒಳ್ಳೆಯದನ್ನು ಮಾಡಬೇಕೆಂದು ಬಯಸಿದವನು ಯಾರಿಗೂ ಕೇಡನ್ನು ಬಯಸಿದವನಲ್ಲಾ. ಕಲೆವರು ನನ್ನ ಮಗನ ತಲೆಗೆ ಏನಾದರೂ ತುಂಬಿದಾರೋ ಅಥವಾ ಏನೆಂದು ನನಗೆ ತಿಳಿಯುತ್ತಿಲ್ಲ. ನನ್ನ ಪುತ್ರ ಯಾಕೆ ಈ ರೀತಿ ಮಾಡಿದ್ದಾನೆ ಎಂದು ಗೊತ್ತಿಲ್ಲಾ.

    ನಮ್ಮ ಮನೆಯ ಸುತ್ತ ಮುತ್ತ ನೀವು ವಿಚಾರಿಸಿದರೆ ಅವನಂತಹ ಒಳ್ಳೆಯ ಹುಡುಗ ಇನ್ನೊಬ್ಬನಿಲ್ಲ ಎಂದು ಹೇಳುತ್ತಾರೆ. ನನ್ನ ಮಗ ಹಾಗೂ ಪ್ರತಾಪ್​ ಸಿಂಹ ಹನಡುವೆ ಏನು ಸಂಬಂಧ ಇದೇ ಎನ್ನುವುದು ನನಗೆ ತಿಳಿದಿಲ್ಲ. ನಮಗೆ ಯಾರೋ ಸಂಬಂಧಿಕರು ಹಾಗೂ ಸ್ನೇಹಿತರು ಕರೆ ಮಾಡಿ ಮಾಹಿತಿ ನೀಡಿದ್ದರು. ಸಮಾಜದಲ್ಲಿ ಅನ್ಯಾಯ ಮಾಡಿದ್ದಾನೆ ಅಂದ್ರೆ ಅವನು‌ ಮಗನೇ ಅಲ್ಲ. ಆತ ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts