More

    ಒಡೆದ ಹಿಮ್ಮಡಿಗಳಿಗೆ ಇವು ಅತ್ಯುತ್ತಮ ಮನೆಮದ್ದುಗಳು!

    ಬೆಂಗಳೂರು: ಚಳಿಗಾಲದಲ್ಲಿ  ಚರ್ಮದ ಸಮಸ್ಯೆಗಳಲ್ಲಿ ಒಡೆದ ಹಿಮ್ಮಡಿಗಳು ಒಂದು. ಚಳಿಯಿಂದಾಗಿ ಅನೇಕರಿಗೆ ಪಾದಗಳು ಬಿರುಕು ಬಿಡುತ್ತವೆ. ಒಡೆದ ಹಿಮ್ಮಡಿಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್​ಗಳನ್ನು ಬಳಸುವ ಬದಲು ನಾವೇ ಮನೆಯಲ್ಲಿ ಹೇಗೆ ನಮ್ಮ ಪಾದಗಳ ಆರೈಕೆ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳೋಣ..

    ಒಡೆದ ಹಿಮ್ಮಡಿಗಳಿಗೆ ಇವು ಅತ್ಯುತ್ತಮ ಮನೆಮದ್ದುಗಳು!

    ಈ ಬಿರುಕುಗಳಿಂದಾಗಿ ಪಾದಗಳಲ್ಲಿ ಉರಿ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ನಡೆಯಲು ತುಂಬಾ ಕಷ್ಟವಾಗುತ್ತಿದೆ. ಹೆಚ್ಚು ಹೊತ್ತು ನಿಲ್ಲುವಂತಿಲ್ಲ. ಈ ಬಿರುಕುಗಳು ಕೆಲವರಲ್ಲಿ ಊತವನ್ನೂ ಉಂಟುಮಾಡುತ್ತವೆ. ಇವುಗಳಿಗೆ ಆರಂಭದಲ್ಲೇ ಚಿಕಿತ್ಸೆ ನೀಡದಿದ್ದಲ್ಲಿ ದೀರ್ಘಾವಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

    1)  ಬಿರುಕುಬಿಟ್ಟ ಚರ್ಮವನ್ನು ಹೋಗಲಾಡಿಸಲು ತೆಂಗಿನ ಎಣ್ಣೆಯನ್ನು ನೀವು ಬಳಸಿದರೆ ಇದರಿಂದ ಉತ್ತಮ ಪರಿಹಾರ ನಿಮಗೆ ದೊರೆಯುವುದರಲ್ಲಿ ಆಶ್ಚರ್ಯವೇನಿಲ್ಲ.

    2)ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಕಾಲುಗಳನ್ನು 20 ನಿಮಿಷಗಳ ಕಾಲ ನೆನೆಸಿ. ಈ ಪ್ರಕ್ರಿಯೆ ಆದ ನಂತರದಲ್ಲಿ ನಿಮ್ಮ ಕಾಲುಗಳನ್ನು ಚೆನ್ನಾಗಿ ಒಣಗಿಸಿ ಮಾಯಿಶ್ಚರೈಸರ್ ಹಚ್ಚಿ. ಈ ಸಂದರ್ಭದಲ್ಲಿ ನೀವು ಪೆಟ್ರೋಲಿಯಂ ಜೆಲ್ಲಿಯನ್ನು ಸಹ ಅನ್ವಯಿಸಬಹುದು.

    3) ನಿಮ್ಮ ಒಡೆದ ಹಿಮ್ಮಡಿಗಳಿಗೆ  ರಾತ್ರಿಯ ಸಮಯದಲ್ಲಿ  ಜೇನುತುಪ್ಪವನ್ನು ಹಚ್ಚಬಹುದು. ಜೇನುತುಪ್ಪದಲ್ಲಿರುವ ಉತ್ತಮ ಗುಣಗಳು ನಿಮ್ಮ ಕಾಲುಗಳಲ್ಲಿ ಇರುವ ಒಡಕುಗಳನ್ನು ಸುಲಭವಾಗಿ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

    4) ಬಾಳೆಯ ಹಣ್ಣಿನ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕಾಲುಗಳಲ್ಲಿರುವ ಬಾಧಿತ ಸ್ಥಳಗಳಿಗೆ ಚೆನ್ನಾಗಿ ಉಜ್ಜಿಕೊಳ್ಳಿ. ತದನಂತರದಲ್ಲಿ ನೀರಿನಿಂದ ನಿಮ್ಮ ಕಾಲುಗಳನ್ನು ತೊಳೆಯಿರಿ.

    5) ಪಾದಗಳನ್ನು ಆಗಾಗ ನೀರಿನಿಂದ ತೊಳೆಯುತ್ತಿರಬೇಕು. ಹೊರಗೆ ಓಡಾಡುವಾಗ ಸಾಕ್ಸ್ ಧರಿಸಿ ಹೋಗಬೇಕು.

    6) ತೆಂಗಿನ ಎಣ್ಣೆ, ಆಲಿವ್ ಎಣ್ಣೆಗಳಂತಹ ತೈಲಗಳಿಂದ ಒಡೆದ ಹಿಮ್ಮಡಿಗಳಿಗೆ ಮಸಾಜ್ ಮಾಡಿದರೆ ಹಿಮ್ಮಡಿಗಳು ಕೋಮಲವಾಗುತ್ತವೆ.

    ಗಮನಿಸಿ: ಈ ಮಾಹಿತಿಯನ್ನು ತಜ್ಞರು ಮತ್ತು ಅಧ್ಯಯನಗಳಿಂದ ಸಂಗ್ರಹಿಸಲಾಗಿದೆ. ಈ ಲೇಖನವು ಜಾಗೃತಿಗಾಗಿ ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಣ್ಣ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

    ಅದ್ಧೂರಿ ನಡೆಯಿತ್ತು ಡಿವೋರ್ಸ್ ಪಾರ್ಟಿ; “ಅರೇ.. ಇವರ ಸಂತೋಷಕ್ಕೆ ಪಾರವೇ ಇಲ್ಲ” ಎಂದ್ರು ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts