More

    ಹೃದಯ ಕಾಯಿಲೆಯ ಅಪಾಯವನ್ನು ನಿಯಂತ್ರಿಸಲು ಈ 5 ಆಹಾರಗಳನ್ನು ಸೇವಿಸಿ

    ಬೆಂಗಳೂರು: ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಆಹಾರಗಳನ್ನು ಸೇರಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವುದರ ಜತೆಗೆ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: HD Kumaraswamy Reacts On BJP-JDS Alliance | ಬಿಜೆಪಿ ಜತೆ ಮೈತ್ರಿ ಬಗ್ಗೆ ಎಚ್​​ಡಿ ಕುಮಾರಸ್ವಾಮಿ ಹೇಳಿದ್ದೇನು?

    ಕಪ್ಪು ಬೀನ್ಸ್:  ಕಪ್ಪು ಬೀನ್ಸ್ ಉತ್ತಮವಾದ ಖನಿಜಗಳಿಂದ ತುಂಬಿದ್ದು, ಇದರಲ್ಲಿನ ಮೆಗ್ನೀಸಿಯಮ್, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳ ಬಳಕೆಯಿಂದ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಅಲ್ಲದೇ, ಫೈಬರ್ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ.

    ಅಗಸೆ ಬೀಜಗಳು:  ಈ ಬೀಜಗಳು ಆಲ್ಫಾ-ಲಿನೋಲೆನಿಕ್ ಆಮ್ಲ ಸೇರಿದಂತೆ ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಒಮೆಗಾ -3 ಕೊಬ್ಬಿನಾಮ್ಲಗಳು ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ಸೇರಿದಂತೆ ವಿವಿಧ ಧನಾತ್ಮಕ ಪರಿಣಾಮಗಳನ್ನು ಹೊಂದಿವೆ.

    ಇದನ್ನೂ ಓದಿ: ಈ ಭಾರತೀಯ ಸಿನಿಮಾವನ್ನು ತಮ್ಮ ಭಾಷೆಯಲ್ಲಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿರುವ ಜಪಾನಿಗರು!

    ಸಾಲ್ಮನ್ ಮೀನು: ಸಾಲ್ಮನ್ ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾದ ಆಹಾರವಾಗಿದೆ. ಏಕೆಂದರೆ ಇದರಲ್ಲಿ ಒಮೆಗಾ-3 ಸಮೃದ್ಧವಾಗಿದೆ. ಒಮೆಗಾ -3 ಎಂದು ಕರೆಯಲ್ಪಡುವ ಆರೋಗ್ಯಕರ ಕೊಬ್ಬುಗಳು ರಕ್ತದೊತ್ತಡವನ್ನು ಕಡಿಮೆ ಮಾವುದರ ಜತೆಗೆ ಹೃದಯದ ಸಮಸ್ಯೆಗಳ ಅಪಾಯವನ್ನು ನಿಯಂತ್ರಿಸಬಹುದು. ಸಾಲ್ಮನ್ ಅಥವಾ ಇತರ ಎಣ್ಣೆಯುಕ್ತ ಮೀನುಗಳನ್ನು ವಾರಕ್ಕೆ ಎರಡು ಬಾರಿ ಸೇವಿಸಬಹುದಾಗಿದೆ.

    ವಾಲ್‌ನಟ್‌: ವಾಲ್‌ನಟ್‌ಗಳ ಸೇವನೆಯು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಹೃದಯದ ಅಪಧಮನಿಯ ಉರಿಯೂತವನ್ನು ನಿಯಂತ್ರಿಸುತ್ತದೆ . ಒಮೆಗಾ-3 ಕೊಬ್ಬಿನಾಮ್ಲಗಳು, ಮೊನೊಸಾಚುರೇಟೆಡ್ ಕೊಬ್ಬುಗಳು, ಸಸ್ಯ ಸ್ಟೆರಾಲ್ಗಳು ಮತ್ತು ಫೈಬರ್ಗಳು ವಾಲ್ನಟ್ನಲ್ಲಿ ಹೇರಳವಾಗಿವೆ.

    ಇದನ್ನೂ ಓದಿ: ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಡಿ; ಪ್ರಧಾನಿ ಮತ್ತು ಯುಪಿ ಸಿಎಂಗೆ ಸೀಮಾ ಹೈದರ್ ಮನವಿ

    ಹಸಿರು ಎಲೆ ತರಕಾರಿಗಳು: ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಪೋಷಕಾಂಶಗಳನ್ನು ಹೊಂದಿರುವ ಹಸಿರು ತರಕಾರಿಗಳಲ್ಲಿ ವಿಟಮಿನ್-ಕೆ ಹೇರಳವಾಗಿದೆ. ಇದು ನಿಮ್ಮ ಅಪಧಮನಿಗಳನ್ನು ರಕ್ಷಿಸಲು ಮತ್ತು ಆರೋಗ್ಯಕರ ರಕ್ತ ಹೆಪ್ಪುಗಟ್ಟುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

    ಈ ಆಹಾರಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನುರಿತ ತಜ್ಞ ವೈದ್ಯರನ್ನು ಸಂಪರ್ಕಿಸಿ,(ಏಜೆನ್ಸೀಸ್).

    ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಡಿ; ಪ್ರಧಾನಿ ಮತ್ತು ಯುಪಿ ಸಿಎಂಗೆ ಸೀಮಾ ಹೈದರ್ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts