More

    ಟಾಟಾ ಸನ್ಸ್​ ತೆಕ್ಕೆಗೆ ಏರ್​ ಇಂಡಿಯಾ… ಮನೆಗೇ ಮರಳುತ್ತಿರುವ ‘ಮಹಾರಾಜ’!

    ನವದೆಹಲಿ: ಹಾಲಿ ನಷ್ಟದಲ್ಲಿ ನಡೆಯುತ್ತಿರುವ ಏರ್​ ಇಂಡಿಯಾ ಏರ್​ಲೈನ್ಸ್​ ಕಂಪೆನಿಯನ್ನು ಮತ್ತೆ ತನ್ನದಾಗಿಸಿಕೊಳ್ಳಲು ಟಾಟಾ ಕಂಪೆನಿ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಇಂದು(ಅಕ್ಟೋಬರ್ 1) ಅನುಮೋದನೆ ನೀಡಿದೆ. 1932 ರಲ್ಲಿ ಟಾಟಾ ಏರ್​ಲೈನ್ಸ್​ ಎಂಬ ಹೆಸರಿನಲ್ಲಿ ಆರಂಭಗೊಂಡು, 1947ರಲ್ಲಿ ರಾಷ್ಟ್ರೀಕರಣದ ನಂತರ ಏರ್ ಇಂಡಿಯಾ ಆಗಿದ್ದ ‘ಮಹಾರಾಜ’, ಇದೀಗ ಮರಳಿ ತನ್ನ ತವರು ಸಂಸ್ಥೆಗೇ ಸೇರುತ್ತಿರುವುದು ವಿಶೇಷವಾಗಿದೆ.

    ಏರ್​ ಇಂಡಿಯ ಮತ್ತು ಏರ್ ಇಂಡಿಯ ಎಕ್ಸ್​ಪ್ರೆಸ್​ಗಳಲ್ಲಿನ ಶೇ.100 ರಷ್ಟು ಸರ್ಕಾರಿ ಪಾಲುದಾರಿಕೆ ಮತ್ತು ಗ್ರೌಂಡ್​ ಹ್ಯಾಂಡ್ಲಿಂಗ್ ಕಂಪೆನಿ ಎಐಎಸ್​ಎಟಿಎಸ್​ನಲ್ಲಿ ಶೇ.50 ರಷ್ಟು ಪಾಲುದಾರಿಕೆಯನ್ನು ಸರ್ಕಾರ ಮಾರಾಟ ಮಾಡುತ್ತಿದೆ. ಖರೀದಿಗಾಗಿ ಟಾಟಾ ಸನ್ಸ್​ ಪ್ರೈವೇಟ್​ ಲಿಮಿಟೆಡ್​ ಸಲ್ಲಿಸಿದ್ದ ಬಿಡ್​ಅನ್ನು ಆಯ್ಕೆ ಮಾಡಿರುವ ಕೇಂದ್ರ ಸರ್ಕಾರದ ಸಮಿತಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮಂತ್ರಿ ಪಿಯೂಶ್​ ಗೋಯಲ್, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸದಸ್ಯರಾಗಿದ್ದರು ಎಂದು ವರದಿಗಳು ತಿಳಿಸಿವೆ.

    ಇದನ್ನೂ ಓದಿ: ದುಬಾರಿಯಾದ ಫೇಸ್ಬುಕ್​ ಸ್ನೇಹ! ಬರೋಬ್ಬರಿ 14 ಲಕ್ಷ ರೂ. ಕಳ್ಕೊಂಡು ಕಣ್ಣೀರಿಡುತ್ತಿರುವ ಹಾಸನದ ಮಹಿಳೆ

    ಏರ್​ ಇಂಡಿಯಾದಲ್ಲಿನ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಸರ್ಕಾರ 2020 ರ ಜನವರಿಯಲ್ಲಿ ಯೋಜನೆ ರೂಪಿಸಿತ್ತು. 2021 ರ ಏಪ್ರಿಲ್​ನಲ್ಲಿ ಆಸಕ್ತ ಉದ್ಯಮಿಗಳಿಂದ ಫೈನಾನ್ಶಿಯಲ್ ಬಿಡ್​ಗಳನ್ನು ಆಹ್ವಾನಿಸಿತ್ತು. ಏರ್​ ಇಂಡಿಯಾದ ರಿಸರ್ವ್​ ಪ್ರೈಸ್​ 15,000-20,000 ಕೋಟಿ ರೂ.ಗಳಷ್ಟಿತ್ತು. ಟಾಟಾ ಗುಂಪಿನೊಂದಿಗೆ ಸ್ಪೈಸ್​ಜೆಟ್​ ಸಂಸ್ಥಾಪಕ ಅಜಯ್​ ಸಿಂಗ್​ ಕೂಡ ಬಿಡ್​ ಸಲ್ಲಿಸಿದವರಲ್ಲಿ ಅಗ್ರಗಣ್ಯರಾಗಿದ್ದರು ಎನ್ನಲಾಗಿದೆ.

    ದೇಶಾದ್ಯಂತ 4,400 ದೇಶೀಯ ಮತ್ತು 1,800 ಅಂತರರಾಷ್ಟ್ರೀಯ ಲ್ಯಾಂಡಿಂಗ್​ ಮತ್ತು ಪಾರ್ಕಿಂಗ್​ ಸ್ಲಾಟ್​ಗಳನ್ನು ಹೊಂದಿರುವ ಏರ್​ ಇಂಡಿಯ, ವಿದೇಶದ ವಿಮಾನ ನಿಲ್ದಾಣಗಳಲ್ಲಿ ಕೂಡ 900 ಸ್ಲಾಟ್​ಗಳನ್ನು ಹೊಂದಿದೆ. 1932 ರಲ್ಲಿ ಆರಂಭವಾದಾಗ ಟಾಟಾ ಏರ್​ಲೈನ್ಸ್​ ಎಂಬ ಹೆಸರು ಹೊಂದಿದ್ದ ಏರ್​ ಇಂಡಿಯ ಸಂಸ್ಥಾಪಕರು ಉದ್ಯಮ ದಿಗ್ಗಜ ಜೆಆರ್​ಡಿ ಟಾಟಾ. 1947 ರಲ್ಲಿ ಇದು ರಾಷ್ಟ್ರೀಕರಿಸಲ್ಪಟ್ಟಿತ್ತು. 2007 ರಲ್ಲಿ ಇಂಡಿಯನ್​ ಏರ್​ಲೈನ್ಸ್​ನೊಂದಿಗೆ ಮರ್ಜರ್​ ಆದಾಗಿನಿಂದ, ಏರ್​ ಇಂಡಿಯಾ ನಷ್ಟದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್​)

    ಮೀಸಲಾತಿ ಹೋರಾಟ ಕೈಬಿಡಲು ಸಿಎಂ ಮನವಿ; ಇಂದು ಚರ್ಚೆ ನಂತರ ನಿರ್ಣಯ ಎಂದ ಸ್ವಾಮೀಜಿ

    ಹೊಸ ಮೈಲಿಗಲ್ಲು: ಅರ್ಹ ಜನಸಂಖ್ಯೆಯ ಕಾಲು ಭಾಗಕ್ಕೆ ಎರಡೂ ಡೋಸ್ ಲಸಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts