More

    ಟಾಟಾ ಪವರ್ Q3 ಲಾಭ 1076 ಕೋಟಿ ರೂಪಾಯಿ: ಷೇರಿನ ಟಾರ್ಗೆಟ್​ ಪ್ರೈಸ್​ ಹೆಚ್ಚಿಸಿದ ಬ್ರೋಕರೇಜ್​ ಸಂಸ್ಥೆ

    ಮುಂಬೈ: ಶುಕ್ರವಾರ ಟಾಟಾ ಪವರ್ ಷೇರುಗಳ ಬೆಲೆಯಲ್ಲಿ ಭಾರಿ ಏರಿಳಿತಗಳು ಕಂಡುಬಂದವು. ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರು ಬೆಲೆ 52 ವಾರದ ಗರಿಷ್ಠ ಮಟ್ಟವಾದ ರೂ 413 ತಲುಪಿತ್ತು. ನಂತರ ಲಾಭಕ್ಕಾಗಿ ಹೂಡಿಕೆದಾರರು ಮಾರಾಟದಲ್ಲಿ ತೊಡಗಿದ್ದರಿಂದ 392.10 ರೂಪಾಯಿ ಇಳಿಯಿತು.

    ಟಾಟಾ ಗ್ರೂಪ್‌ನ ಪವರ್ ಕಂಪನಿ ಟಾಟಾ ಪವರ್ ತನ್ನ ಡಿಸೆಂಬರ್ ತ್ರೈಮಾಸಿಕ (Q3) ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ಶೇಕಡಾ 2.3ರಷ್ಟು ಹೆಚ್ಚಳವಾಗಿ 1,076 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 1,052 ಕೋಟಿ ರೂಪಾಯಿ ಇತ್ತು. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 14,339 ಕೋಟಿ ರೂ.ಗಳಷ್ಟಿದ್ದ ಆದಾಯ 14,841 ಕೋಟಿ ರೂ.ಗೆ ಏರಿಕೆಯಾಗಿದೆ.

    ಕಂಪನಿಯ ಲಾಭವು ಪ್ರಸಕ್ತ ಹಣಕಾಸು ವರ್ಷದ (ಏಪ್ರಿಲ್-ಡಿಸೆಂಬರ್, 2023) ಮೊದಲ ಒಂಬತ್ತು ತಿಂಗಳಲ್ಲಿ 3,235 ಕೋಟಿ ರೂ.ಗೆ ಏರಿಕೆಯಾಗಿದೆ, ಇದು ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 2,871 ಕೋಟಿ ರೂಪಾಯಿ ಇತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಕಂಪನಿಯ ಆದಾಯವು ಈ ಅವಧಿಯಲ್ಲಿ 45,286 ಕೋಟಿ ರೂ.ಗೆ ಏರಿಕೆಯಾಗಿದೆ.
    ಡಿಸೆಂಬರ್ 31, 2023 ರಂತೆ, ಟಾಟಾ ಪವರ್ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ 4270 ಮೆಗಾ ವ್ಯಾಟ್ ಕಾರ್ಯಾಚರಣಾ ಸಾಮರ್ಥ್ಯವನ್ನು ಹೊಂದಿದ್ದು, ಇದರಿಂದ 603.1 ಕೋಟಿ ರೂ. ಮೊತ್ತದ ಹಸಿರು ವಿದ್ಯುತ್ ಉತ್ಪಾದಿಸಲಾಗುತ್ತಿದೆ.

    ನಮ್ಮ ಪ್ರಮುಖ ವ್ಯವಹಾರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕಂಪನಿಯು ತನ್ನ ಸತತ 17 ನೇ ತ್ರೈಮಾಸಿಕ ನಿವ್ವಳ ಲಾಭವನ್ನು ಸಾಧಿಸಲು ಇದರಿಂದ ಸಾಧ್ಯವಾಗಿದೆ ಎಂದು ಟಾಟಾ ಪವರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಪ್ರವೀರ್ ಸಿನ್ಹಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ವಾರದ ಕೊನೆಯ ವಹಿವಾಟು ದಿನವಾದ ಶುಕ್ರವಾರ ಟಾಟಾ ಪವರ್ ಷೇರುಗಳಲ್ಲಿ ಭಾರಿ ಏರಿಳಿತ ಕಂಡುಬಂದಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರು 52 ವಾರದ ಗರಿಷ್ಠ ಬೆಲೆ 413 ರೂ.ಗೆ ತಲುಪಿತ್ತು. ನಂತರ ಹೂಡಿಕೆದಾರರು ಲಾಭಕ್ಕಾಗಿ ಮಾರಿದ್ದರಿಂದ 392.10 ರೂಪಾಯಿಗೆ ಇಳಿಯಿತು. ಆಂಟಿಕ್​ ಬ್ರೋಕಿಂಗ್ ಬ್ರೋಕರೇಜ್​ ಸಂಸ್ಥೆಯು ಟಾಟಾ ಪವರ್‌ ಷೇರಿನ ಬೆಲೆ ಗುರಿಯನ್ನು 450 ರೂಪಾಯಿಗೆ ನಿಗದಿಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts