More

    ಐಸಿಐಸಿಐ, ಎಸ್​ಬಿಐ, ರಿಲಯನ್ಸ್ ಷೇರು ಖರೀದಿ ಜೋರು: ವಾರಾಂತ್ಯದಲ್ಲಿ ಗುಟುರು ಹಾಕಿದ ಗೂಳಿ

    ಮುಂಬೈ: ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಷೇರುಗಳ ಖರೀದಿ ಹೆಚ್ಚಿದ ಹಿನ್ನೆಲೆಯಲ್ಲಿ ಶುಕ್ರವಾರದ ಅಸ್ಥಿರ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕವು 167 ಅಂಕಗಳ ಚೇತರಿಕೆ ಕಂಡಿದೆ.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 167.06 ಅಂಕಗಳು ಅಥವಾ ಶೇಕಡಾ 0.23ರಷ್ಟು ಏರಿಕೆಯಾಗಿ 71,595.49 ಕ್ಕೆ ಸ್ಥಿರವಾಯಿತು. ಇಂಟ್ರಾ ಡೇ ವಹಿವಾಟಿನಲ್ಲಿ ಇದು ಗರಿಷ್ಠ 71,676.49 ಮತ್ತು ಕನಿಷ್ಠ 71,200.31 ಅಂಕಗಳನ್ನು ಮುಟ್ಟಿತ್ತು.

    ನಿಫ್ಟಿ ಸೂಚ್ಯಂಕವು 64.55 ಅಂಕಗಳು ಅಥವಾ ಶೇಕಡಾ 0.30 ರಷ್ಟು ಏರಿಕೆಯಾಗಿ 21,782.50 ಕ್ಕೆ ತಲುಪಿತು.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಟೈಟಾನ್, ಬಜಾಜ್ ಫೈನಾನ್ಸ್, ನೆಸ್ಲೆ, ಏಷ್ಯನ್ ಪೇಂಟ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ವಿಪ್ರೋ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

    ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ, ಟಾಟಾ ಸ್ಟೀಲ್, ಇನ್ಫೋಸಿಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಪವರ್ ಗ್ರಿಡ್ ಮತ್ತು ಟಾಟಾ ಮೋಟಾರ್ಸ್ ಷೇರುಗಳು ಹಿನ್ನಡೆ ಕಂಡವು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಟೋಕಿಯೊ ಮತ್ತು ಶಾಂಘೈ ಲಾಭ ಕಂಡರೆ, ಹಾಂಗ್ ಕಾಂಗ್ ನಷ್ಟ ಅನುಭವಿಸಿತು. ಐರೋಪ್ಯ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು ನಡೆಯಿತು. ಅಮೆರಿಕದ ಮಾರುಕಟ್ಟೆಗಳು ಗುರುವಾರ ಲಾಭದಲ್ಲಿ ಮುಂದುವರಿದವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 4,933.78 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಬಡ್ಡಿ ದರ ಯಥಾಸ್ಥಿತಿ ಮುಂದುವರಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ನಿರ್ಧಾರದ ನಂತರ ಗುರುವಾರ ಬಿಎಸ್‌ಇ ಸೂಚ್ಯಂಕವು 723.57 ಅಂಕಗಳಷ್ಟು ಕುಸಿದು 71,428.43 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 212.55 ಅಂಕ ಕುಸಿದು 21,717.95 ಕ್ಕೆ ತಲುಪಿತ್ತು.

    3 ವರ್ಷಗಳಲ್ಲಿ 5000% ಲಾಭ ನೀಡಿದ ಷೇರು: ಹೂಡಿಕೆದಾರರಿಗೆ ಫೆ. 12ರಂದು ಒಂದಕ್ಕೆ ಎರಡು ಬೋನಸ್​ ಸ್ಟಾಕ್​ ಬಹುಮಾನ

    ಹೆಸರಾಂತ ಹೂಡಿಕೆದಾರ ರಾಧಾಕಿಶನ್ ದಮಾನಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿರುವ ಹಣ 1.71 ಲಕ್ಷ ಕೋಟಿ ರೂಪಾಯಿ: ಒಂದು ವರ್ಷದಲ್ಲಿ 4 ಷೇರುಗಳ ಬೆಲೆ ದುಪ್ಪಟ್ಟು

    ನಿಮ್ಮ ಮನೆಗೆ ಪೂರೈಸುವ ಎಲ್​ಪಿಜಿ ಸಿಲಿಂಡರ್​ನಲ್ಲಿ ಇನ್ನು ಮೋಸ ಅಸಾಧ್ಯ: ಶೀಘ್ರದಲ್ಲಿಯೇ ಜಾರಿಗೆ ಬರಲಿರುವ ಕ್ಯೂಆರ್​ ಕೋಡ್​ ವ್ಯವಸ್ಥೆ ಹೀಗೆ ಕಾರ್ಯನಿರ್ವಹಿಸುತ್ತದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts