More

    3 ವರ್ಷಗಳಲ್ಲಿ 5000% ಲಾಭ ನೀಡಿದ ಷೇರು: ಹೂಡಿಕೆದಾರರಿಗೆ ಫೆ. 12ರಂದು ಒಂದಕ್ಕೆ ಎರಡು ಬೋನಸ್​ ಸ್ಟಾಕ್​ ಬಹುಮಾನ

    ಮುಂಬೈ: ಸ್ಮಾಲ್‌ಕ್ಯಾಪ್ ಕಂಪನಿ ಇಂಟೆಲಿವೇಟ್ ಕ್ಯಾಪಿಟಲ್ ವೆಂಚರ್ಸ್‌ನ (Intellivate Capital Ventures) ಷೇರುಗಳ ಬೆಲೆ ಕಳೆದ 3 ವರ್ಷಗಳಲ್ಲಿ 5000% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಈಗ ಕಂಪನಿಯು ಈಗ ತನ್ನ ಹೂಡಿಕೆದಾರರಿಗೆ 2:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಲು ಹೊರಟಿದೆ. ಬೋನಸ್ ಷೇರುನೀಡುವ ದಾಖಲೆ ದಿನಾಂಕ ಫೆಬ್ರವರಿ 12 ಆಗಿದೆ.

    ಇಂಟೆಲಿವೇಟ್ ಕ್ಯಾಪಿಟಲ್ ವೆಂಚರ್ಸ್ ತನ್ನ ಹೂಡಿಕೆದಾರರಿಗೆ ಪ್ರತಿ ಷೇರಿಗೆ 2 ಬೋನಸ್ ಷೇರುಗಳನ್ನು ನೀಡುತ್ತದೆ.

    ಇಂಟೆಲಿವೇಟ್ ಕ್ಯಾಪಿಟಲ್ ವೆಂಚರ್ಸ್ ಷೇರುಗಳ ಬೆಲೆ ಕಳೆದ 3 ವರ್ಷಗಳಲ್ಲಿ ತ್ವರಿತ ಏರಿಕೆ ಕಂಡಿದೆ. ಕಳೆದ 3 ವರ್ಷಗಳಲ್ಲಿ ಈ ಕಂಪನಿ ಷೇರುಗಳ ಬೆಲೆ ಶೇಕಡಾ 5025 ರಷ್ಟು ಏರಿಕೆಯಾಗಿದೆ. ಇಂಟೆಲಿವೇಟ್ ಕ್ಯಾಪಿಟಲ್ ವೆಂಚರ್ಸ್‌ನ ಷೇರುಗಳ ಬೆಲೆ 18 ಫೆಬ್ರವರಿ 2021 ರಂದು 3.20 ರೂಪಾಯಿ ಇತ್ತು. ಈಗ 9 ಫೆಬ್ರವರಿ 2024 ರಂದು 164 ರೂಪಾಯಿ ಮಟ್ಟದಲ್ಲಿವೆ.

    ಇಂಟೆಲಿವೇಟ್ ಕ್ಯಾಪಿಟಲ್ ವೆಂಚರ್ಸ್‌ನ ಷೇರುಗಳ 52 ವಾರಗಳ ಗರಿಷ್ಠ ಬೆಲೆ 168.90 ರೂಪಾಯಿ ಇದ್ದರೆ, ಕನಿಷ್ಠ ಬೆಲೆ 12.82 ರೂಪಾಯಿ ಇದೆ.

    ಈ ಕಂಪನಿಯ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ ಭಾರಿ ಏರಿಕೆ ಕಂಡಿದೆ. 13 ಫೆಬ್ರವರಿ 2023 ರಂದು ಕಂಪನಿಯ ಷೇರುಗಳ ಬೆಲೆ 12.82 ರೂ ಇತ್ತು. ಈಗ ರೂ 164 ತಲುಪಿದೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ 1180% ರಷ್ಟು ಹೆಚ್ಚಾಗಿದೆ. ಕಳೆದ 6 ತಿಂಗಳುಗಳಲ್ಲಿ ಷೇರುಗಳ ಬೆಲೆ 251% ರಷ್ಟು ಏರಿಕೆ ಕಂಡಿದೆ. ಕಳೆದ ಒಂದು ತಿಂಗಳಲ್ಲಿ ಶೇ. 33ರಷ್ಟು ಏರಿಕೆಯಾಗಿದೆ.

    ಇಂಟೆಲಿವೇಟ್ ಕ್ಯಾಪಿಟಲ್ ವೆಂಚರ್ಸ್ ಲಿಮಿಟೆಡ್ ಹಣಕಾಸು ಸೇವೆಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ (SME) ಕೇಂದ್ರೀಕೃತ ಕಾರ್ಪೊರೇಟ್ ಹಣಕಾಸು ಸಲಹಾ ಸಂಸ್ಥೆಯಾಗಿದೆ. ಕಂಪನಿಯು ನಿಧಿಯ ಕ್ರೋಢೀಕರಣ, ಕಾರ್ಪೊರೇಟ್ ಸಲಹೆ, ಕಾರ್ಯತಂತ್ರದ ಮೈತ್ರಿಗಳು ಮತ್ತು ಹೂಡಿಕೆಗಳಂತಹ ಸೇವೆಗಳನ್ನು ಒದಗಿಸುತ್ತದೆ.

    ಹೆಸರಾಂತ ಹೂಡಿಕೆದಾರ ರಾಧಾಕಿಶನ್ ದಮಾನಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿರುವ ಹಣ 1.71 ಲಕ್ಷ ಕೋಟಿ ರೂಪಾಯಿ: ಒಂದು ವರ್ಷದಲ್ಲಿ 4 ಷೇರುಗಳ ಬೆಲೆ ದುಪ್ಪಟ್ಟು

    ನಿಮ್ಮ ಮನೆಗೆ ಪೂರೈಸುವ ಎಲ್​ಪಿಜಿ ಸಿಲಿಂಡರ್​ನಲ್ಲಿ ಇನ್ನು ಮೋಸ ಅಸಾಧ್ಯ: ಶೀಘ್ರದಲ್ಲಿಯೇ ಜಾರಿಗೆ ಬರಲಿರುವ ಕ್ಯೂಆರ್​ ಕೋಡ್​ ವ್ಯವಸ್ಥೆ ಹೀಗೆ ಕಾರ್ಯನಿರ್ವಹಿಸುತ್ತದೆ…

    80741 % ಬಂಪರ್​ ಲಾಭ ನೀಡಿದ ರಕ್ಷಣಾ ಕಂಪನಿಯ ಷೇರು: ಸದ್ಯ ಬೆಲೆ ಕುಸಿದಿದ್ದರೂ 220 ರೂಪಾಯಿಗೆ ತಲುಪುತ್ತದೆ ಎನ್ನುತ್ತದೆ ಶೇರಖಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts