More

    ಹೆಸರಾಂತ ಹೂಡಿಕೆದಾರ ರಾಧಾಕಿಶನ್ ದಮಾನಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿರುವ ಹಣ 1.71 ಲಕ್ಷ ಕೋಟಿ ರೂಪಾಯಿ: ಒಂದು ವರ್ಷದಲ್ಲಿ 4 ಷೇರುಗಳ ಬೆಲೆ ದುಪ್ಪಟ್ಟು

    ನವದೆಹಲಿ: ಹೆಸರಾಂತ ಹಾಗೂ ಅನುಭವಿ ಷೇರು ಮಾರುಕಟ್ಟೆ ಹೂಡಿಕೆದಾರ ರಾಧಾಕಿಶನ್ ದಮಾನಿ ಅವರ ಪೋರ್ಟ್‌ಫೋಲಿಯೊದಲ್ಲಿ ಸೇರಿಸಲಾದ ನಾಲ್ಕು ಷೇರುಗಳು 2024 ರ ಹಣಕಾಸು ವರ್ಷದಲ್ಲಿ 100 ಪ್ರತಿಶತಕ್ಕಿಂತ ಹೆಚ್ಚಿನ ಆದಾಯವನ್ನು ನೀಡುವ ಮೂಲಕ ಅವರನ್ನು ಶ್ರೀಮಂತರನ್ನಾಗಿ ಮಾಡಿವೆ.

    ಭಾರತದ ಹಿರಿಯ ಹೂಡಿಕೆದಾರ ರಾಧಾಕಿಶನ್ ದಮಾನಿ ಅವರ ಹೂಡಿಕೆ ಬಂಡವಾಳದ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ರಾಧಾ ಕಿಶನ್ ದಮಾನಿ ಅವರ ಹಿಡುವಳಿ ಪ್ರಕಾರ, ಅವರ ಪೋರ್ಟ್‌ಫೋಲಿಯೊದಲ್ಲಿ 14 ಷೇರುಗಳಿವೆ. ಪ್ರಸ್ತುತ ರಾಧಾಕಿಶನ್ ದಮಾನಿ ಅವರ ಪೋರ್ಟ್‌ಫೋಲಿಯೊದ ಹಿಡುವಳಿ ಮೌಲ್ಯ 1.71 ಲಕ್ಷ ಕೋಟಿ ರೂಪಾಯಿ. ಅಂದರೆ, ವಿವಿಧ ಷೇರುಗಳಲ್ಲಿ ಅವರು ಸದ್ಯ ತೊಡಗಿಸಿರುವ ಮೊತ್ತ 1.71 ಲಕ್ಷ ಕೋಟಿ ರೂಪಾಯಿ.

    ಕುತೂಹಲಕಾರಿ ಅಂಶವೆಂದರೆ ಅವೆನ್ಯೂ ಸೂಪರ್‌ಮಾರ್ಟ್ ಷೇರು ರಾಧಾ ಕಿಶನ್ ದಮಾನಿ ಅವರ ಪೋರ್ಟ್‌ಫೋಲಿಯೊದಲ್ಲಿ 96 ಪ್ರತಿಶತ ಪಾಲನ್ನು ಹೊಂದಿದೆ. ಈ ಸ್ಟಾಕ್ 2024 ರ ಹಣಕಾಸು ವರ್ಷದಲ್ಲಿ ಹೂಡಿಕೆದಾರರಿಗೆ ಕೇವಲ 10 ಪ್ರತಿಶತದಷ್ಟು ಲಾಭವನ್ನು ನೀಡಿದೆ.

    ರಾಧಾ ಕಿಶನ್ ದಮಾನಿ ಅವರ ಪೋರ್ಟ್‌ಫೋಲಿಯೊದಲ್ಲಿರುವ 14 ಷೇರುಗಳ ಪೈಕಿ, 12 ಷೇರುಗಳು ಎರಡಂಕಿಯ ಆದಾಯವನ್ನು ನೀಡಿವೆ. ಇವುಗಳಲ್ಲಿ, ನಾಲ್ಕು ಸ್ಟಾಕ್‌ಗಳು ಒಂದು ವರ್ಷದ ಅವಧಿಯಲ್ಲಿ 100 ಪ್ರತಿಶತಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿವೆ.

    ರಾಧಾ ಕಿಶನ್ ದಮಾನಿ ಅವರ ಪೋರ್ಟ್‌ಫೋಲಿಯೊದಲ್ಲಿ ಒಳಗೊಂಡಿರುವ ಟ್ರೆಂಟ್ ಲಿಮಿಟೆಡ್, ಕಳೆದ 1 ವರ್ಷದಲ್ಲಿ ಹೂಡಿಕೆದಾರರಿಗೆ 179 ಪ್ರತಿಶತದಷ್ಟು ಲಾಭವನ್ನು ನೀಡಿದೆ. ಟ್ರೆಂಟ್ ಲಿಮಿಟೆಡ್‌ನಲ್ಲಿ ರಾಧಾ ಕಿಶನ್ ದಮಾನಿ ಅವರ ಪಾಲು ಶೇಕಡಾ 1.50 ರಷ್ಟಿದ್ದು, ಇದರ ಹಿಡುವಳಿ ಮೌಲ್ಯ 2083 ಕೋಟಿ ರೂಪಾಯಿ ಇದೆ.

    ಬಿಎಫ್​ ಯುಟಿಲಿಟೀಸ್‌ ಷೇರುಗಳು ಕಳೆದ ವರ್ಷದಲ್ಲಿ ಹೂಡಿಕೆದಾರರಿಗೆ 154 ಪ್ರತಿಶತದಷ್ಟು ಲಾಭವನ್ನು ನೀಡಿವೆ. ರಾಧಾ ಕಿಶನ್ ದಮಾನಿ ಅವರು ಬಿಎಫ್ ಯುಟಿಲಿಟೀಸ್‌ನಲ್ಲಿ ಶೇಕಡಾ ಒಂದು ಪಾಲನ್ನು ಹೊಂದಿದ್ದು, ಇದರ ಹಿಡುವಳಿ ಮೌಲ್ಯ 29 ಕೋಟಿ ರೂಪಾಯಿ.

    ಸುಂದ್ರಮ್ ಫೈನಾನ್ಸ್ ಹೋಲ್ಡಿಂಗ್‌ನಲ್ಲಿ ರಾಧಾ ಕಿಶನ್ ದಮಾನಿ ಅವರ ಪಾಲು ಶೇಕಡಾ 1.09 ರಷ್ಟಿದ್ದು, ಈ ಷೇರು 1 ವರ್ಷದ ಅವಧಿಯಲ್ಲಿ ಹೂಡಿಕೆದಾರರಿಗೆ ಶೇಕಡಾ 131 ರಷ್ಟು ಬಂಪರ್ ರಿಟರ್ನ್ ನೀಡಿದೆ. ರಾಧಾ ಕಿಶನ್ ದಮಾನಿ ಅವರ ಪೋರ್ಟ್‌ಫೋಲಿಯೊದ ಹಿಡುವಳಿ ಮೌಲ್ಯ 76 ಕೋಟಿ ರೂ. ಇದೆ.

    ರಾಧಾ ಕಿಶನ್ ದಮಾನಿ ಅವರು ಅಡ್ವಾಣಿ ಹೋಟೆಲ್ಸ್ ಮತ್ತು ರೆಸಾರ್ಟ್‌ಗಳಲ್ಲಿ 4.2 ಶೇಕಡಾ ಪಾಲನ್ನು ತೆಗೆದುಕೊಂಡಿದ್ದಾರೆ, ಅವರ ಹಿಡುವಳಿ ಮೌಲ್ಯವು 31 ಕೋಟಿ ರೂ. ಈ ಷೇರು ಕಳೆದ ಒಂದು ವರ್ಷದಲ್ಲಿ ಶೇ. 123ರಷ್ಟು ಬಂಪರ್ ರಿಟರ್ನ್ಸ್ ನೀಡುವ ಮೂಲಕ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ.

    ನಿಮ್ಮ ಮನೆಗೆ ಪೂರೈಸುವ ಎಲ್​ಪಿಜಿ ಸಿಲಿಂಡರ್​ನಲ್ಲಿ ಇನ್ನು ಮೋಸ ಅಸಾಧ್ಯ: ಶೀಘ್ರದಲ್ಲಿಯೇ ಜಾರಿಗೆ ಬರಲಿರುವ ಕ್ಯೂಆರ್​ ಕೋಡ್​ ವ್ಯವಸ್ಥೆ ಹೀಗೆ ಕಾರ್ಯನಿರ್ವಹಿಸುತ್ತದೆ…

    80741 % ಬಂಪರ್​ ಲಾಭ ನೀಡಿದ ರಕ್ಷಣಾ ಕಂಪನಿಯ ಷೇರು: ಸದ್ಯ ಬೆಲೆ ಕುಸಿದಿದ್ದರೂ 220 ರೂಪಾಯಿಗೆ ತಲುಪುತ್ತದೆ ಎನ್ನುತ್ತದೆ ಶೇರಖಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts