More

    ಕೆಲ ದಿನಗಳಿಂದ ಕುಸಿತ ಕಂಡ ಪ್ರಮುಖ ಬ್ಯಾಂಕ್​ ಷೇರು: ನೀವು ಈಗ ಖರೀದಿಸಿದರೆ ಮುಂದೆ ಲಾಭ ಖಚಿತ ಎನ್ನುತ್ತಿದ್ದಾರೆ 30 ತಜ್ಞರು

    ಮುಂಬೈ: ನಿರಂತರವಾಗಿ ಕುಸಿಯುತ್ತಿರುವ ಈ ದೊಡ್ಡ ಬ್ಯಾಂಕಿಂಗ್ ಸ್ಟಾಕ್‌ನಲ್ಲಿ ಖರೀದಿ ವಾತಾವರಣ ಸೃಷ್ಟಿಯಾಗಿದೆ. ಈ ಷೇರು ಅಗ್ಗವಾಗಿದ್ದು, ಖರೀದಿಸಿ ಎಂದು 30 ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ.

    ಕಳೆದ ಕೆಲವು ದಿನಗಳಿಂದ ಬ್ಯಾಂಕಿಂಗ್ ವಲಯದ ಷೇರುಗಳಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳಲ್ಲಿ ಕೂಡ ಭಾರಿ ಕುಸಿತದ ಈ ಪ್ರವೃತ್ತಿ ನಡೆಯುತ್ತಿದೆ. ತ್ರೈಮಾಸಿಕ ಫಲಿತಾಂಶದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉನ್ನತ ಮಟ್ಟದಿಂದ 15 ಪ್ರತಿಶತಕ್ಕಿಂತ ಹೆಚ್ಚು ಕುಸಿತ ಕಂಡುಬಂದಿದೆ. ಇದಲ್ಲದೆ, ಮತ್ತೊಂದು ಬ್ಯಾಂಕಿಂಗ್ ಸ್ಟಾಕ್ ಆಕ್ಸಿಸ್ ಬ್ಯಾಂಕ್​ನಲ್ಲೂ ನಿರಂತರ ಕುಸಿತ ದಾಖಲಾಗಿದೆ.

    ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಷೇರುಗಳ ಬೆಲೆ ರೂ.1150 ರ ಮಟ್ಟದಿಂದ ಕುಸಿಯುತ್ತಿದೆ. ಈ ಷೇರುಗಳ ಬೆಲೆ ಜನವರಿ 24 ರಂದು 1021 ರೂಪಾಯಿ ಇತ್ತು. ಇದರ ನಂತರ ಸ್ಟಾಕ್ ಬಲವರ್ಧನೆಯ ರೂಪದಲ್ಲಿದೆ. ಗುರುವಾರದ ಮಾರುಕಟ್ಟೆಯಲ್ಲಿ ಈ ಷೇರಿನ ಮೇಲೆ ಉತ್ತಮ ಖರೀದಿ ಮನೋಭಾವ ಕಂಡುಬಂದಿದೆ, ಆದರೆ, ಆರ್‌ಬಿಐ ನೀತಿ ಪ್ರಕಟವಾದ ನಂತರ, ಇಡೀ ಬ್ಯಾಂಕಿಂಗ್ ವಲಯದೊಂದಿಗೆ ಈ ಷೇರು ಕೂಡ ಕುಸಿತ ಕಂಡಿದ್ದು, ಏರುಗತಿಯ ವೇಗಕ್ಕೆ ಬ್ರೇಕ್ ಬಿದ್ದಿದೆ.

    ಕಳೆದ ಕೆಲವು ದಿನಗಳಲ್ಲಿ ಎಸ್‌ಬಿಐ ಷೇರುಗಳನ್ನು ಹೊರತುಪಡಿಸಿ ಉಳಿದೆಲ್ಲ ದೊಡ್ಡ ಬ್ಯಾಂಕ್ ಷೇರುಗಳು ಕುಸಿತ ಕಂಡಿವೆ.

    ಜೆಫರೀಸ್‌ನ ಜಾಗತಿಕ ಮುಖ್ಯಸ್ಥ ಕ್ರಿಸ್ಟೋಫರ್ ವುಡ್ ಅವರು ತಮ್ಮ ಇಂಡಿಯಾ ಲಾಂಗ್-ಓನ್ಲಿ ಮತ್ತು ಗ್ಲೋಬಲ್ ಲಾಂಗ್-ಓನ್ಲಿ ಪೋರ್ಟ್‌ಫೋಲಿಯೊಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ, ಅಂದರೆ, ತಮ್ಮ ಖರೀದಿಯಲ್ಲಿ ಬದಲಾವಣೆ ಮಾಡಿದ್ದಾರೆ. ತಮ್ಮ ಪೋರ್ಟ್​ಫೋಲಿಯೊದಲ್ಲಿ ಆಕ್ಸಿಸ್ ಬ್ಯಾಂಕ್ ಷೇರುಗಳನ್ನು ಶೇಕಡಾ 1 ರಷ್ಟು ಹೆಚ್ಚಿಸಿದ್ದಾರೆ.

    ಟ್ರೆಂಡ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 30 ವಿಶ್ಲೇಷಕರು ಆಕ್ಸಿಸ್ ಬ್ಯಾಂಕ್‌ನ ಷೇರುಗಳನ್ನು ಖರೀದಿಸಲು ಶಿಫಾರಸು ಮಾಡುತ್ತಿದ್ದಾರೆ. ಈ ರೇಟಿಂಗ್ ಟ್ರೆಂಡ್‌ಲೈನ್‌ನ 39 ವಿಶ್ಲೇಷಕರಿಂದ ಬಂದಿದೆ, ಅದರಲ್ಲಿ 30 ವಿಶ್ಲೇಷಕರು ಆಕ್ಸಿಸ್ ಬ್ಯಾಂಕ್ ಷೇರುಗಳನ್ನು ಖರೀದಿಸಬೇಕು ಎಂದು ಹೇಳಿದ್ದಾರೆ. ಇದಕ್ಕೆ ಅವರು ಸ್ಟ್ರಾಂಗ್ ಬೈ ರೇಟಿಂಗ್ ನೀಡಿದ್ದಾರೆ. ಉಳಿದ 9 ವಿಶ್ಲೇಷಕರ ಪೈಕಿ 6 ವಿಶ್ಲೇಷಕರು ಖರೀದಿ ರೇಟಿಂಗ್ ನೀಡುತ್ತಿದ್ದರೆ, 3 ವಿಶ್ಲೇಷಕರು ಆಕ್ಸಿಸ್ ಬ್ಯಾಂಕ್ ಷೇರುಗಳನ್ನು ಹಿಡಿದಿಟ್ಟುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.

    ಈ ಷೇರು ಕಳೆದೊಂದು ತಿಂಗಳಲ್ಲಿ ಶೇಕಡಾ 5.38ರಷ್ಟು ಕುಸಿತ ಕಂಡಿದೆ. ಶುಕ್ರವಾರದ ಮಾರುಕಟ್ಟೆಯಲ್ಲಿ ಈ ಷೇರು ಮತ್ತೆ ಲಾಭ ತೋರಿಸಿದೆ. ಶುಕ್ರವಾರ ಈ ಷೇರು ಬೆಲೆ ಶೇಕಡಾ 1.5ರಷ್ಟು ಹೆಚ್ಚಳವಾಗಿ 1,051.40 ರೂಪಾಯಿಗೆ ತಲುಪಿದೆ. ಈ ಷೇರಿಗೆ ಕೆಲ ವಿಶ್ಲೇಷಕರು 1140 ರೂಪಾಯಿಯ ಗುರಿಯನ್ನು ನೀಡಿದ್ದಾರೆ.

    ಐಸಿಐಸಿಐ, ಎಸ್​ಬಿಐ, ರಿಲಯನ್ಸ್ ಷೇರು ಖರೀದಿ ಜೋರು: ವಾರಾಂತ್ಯದಲ್ಲಿ ಗುಟುರು ಹಾಕಿದ ಗೂಳಿ

    3 ವರ್ಷಗಳಲ್ಲಿ 5000% ಲಾಭ ನೀಡಿದ ಷೇರು: ಹೂಡಿಕೆದಾರರಿಗೆ ಫೆ. 12ರಂದು ಒಂದಕ್ಕೆ ಎರಡು ಬೋನಸ್​ ಸ್ಟಾಕ್​ ಬಹುಮಾನ

    ಹೆಸರಾಂತ ಹೂಡಿಕೆದಾರ ರಾಧಾಕಿಶನ್ ದಮಾನಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿರುವ ಹಣ 1.71 ಲಕ್ಷ ಕೋಟಿ ರೂಪಾಯಿ: ಒಂದು ವರ್ಷದಲ್ಲಿ 4 ಷೇರುಗಳ ಬೆಲೆ ದುಪ್ಪಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts