More

    ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ IPL ಟ್ರೋಫಿ ಪ್ರದರ್ಶನ: ಎಲ್ಲೆಲ್ಲಿ? ಎಷ್ಟೊತ್ತಿಗೆ? ಇಲ್ಲಿದೆ ಮಾಹಿತಿ…

    ಬೆಂಗಳೂರು: ಕ್ರೀಡಾ ಅಭಿಮಾನಿಗಳ ಪಾಲಿಗೆ ಹಬ್ಬವಾಗಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಟೂರ್ನಿ ಆರಂಭಕ್ಕೆ ಇನ್ನು 5 ದಿನಗಳಷ್ಟೇ ಬಾಕಿ ಇದೆ. ಪ್ರಸಕ್ತ ಆವೃತ್ತಿಯ ಕಡೆಗೆ ಹೆಚ್ಚು ಜನರನ್ನು ಸೆಳೆಯಲು ಸ್ಟಾರ್​​ ಸ್ಪೋರ್ಟ್ಸ್,​ ಟಾಟಾ ಐಪಿಎಲ್​ ಟ್ರೋಫಿ ಟೂರ್​ ಅನ್ನು  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಂದು ಆಯೋಜಿಸಿದೆ.

    ಸ್ಟಾರ್​ಸ್ಪೋರ್ಟ್ಸ್​ ಸಾರಥ್ಯ
    Star Sports (1)ಐಪಿಎಲ್​ 16ನೇ ಆವೃತ್ತಿಯ ಅಧಿಕೃತ ಟೆಲಿವಿಷನ್​ ಪ್ರಸಾರ ಹಕ್ಕನ್ನು ಸ್ಟಾರ್​​ಸ್ಪೋರ್ಟ್ಸ್​ ವಾಹಿನಿ ಪಡೆದುಕೊಂಡಿದೆ. ಇಂಗ್ಲಿಷ್ ಹಾಗೂ ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ಮರಾಠಿ, ಮಲಯಾಳಂ, ಗುಜರಾತಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಐಪಿಎಲ್​ 16ನೇ ಆವೃತ್ತಿಯನ್ನು ಸ್ಟಾರ್​ಸ್ಪೋರ್ಟ್ಸ್​ ಪ್ರಸ್ತುತಪಡಿಸುತ್ತಿದೆ. ಕರೊನಾ ಮಹಾಮಾರಿಯಿಂದ ಕಳೆಗುಂದಿದ್ದ ಐಪಿಎಲ್​ ಟೂರ್ನಿಗೆ ಹೆಚ್ಚು ಉತ್ಸಾಹವನ್ನು ತುಂಬಲು ಈ ಬಾರಿ ಸ್ಟಾರ್​​ಸ್ಪೋರ್ಟ್ಸ್​ ಟಾಟಾ ಐಪಿಎಲ್​ ಟ್ರೋಫಿ ಟೂರ್ ಪ್ರಸ್ತುತಪಡಿಸಿದ್ದು, ಅದರ ಸಾರಥ್ಯವನ್ನು ವಹಿಸಿದೆ.​

    ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಐಪಿಎಲ್​ ಟ್ರೋಫಿಯನ್ನು ವಿವಿಧ ಪ್ರದೇಶಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದ್ದು, ಕ್ರೀಡಾಭಿಮಾನಿಗಳು ನೇರವಾಗಿ ಟ್ರೋಫಿಯನ್ನು ಕಣ್ತುಂಬಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಗರದ ಆಯ್ದ ಭಾಗಗಳಲ್ಲಿ ಐಪಿಎಲ್​ ಟ್ರೋಫಿಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಎಲ್ಲೆಲ್ಲಿ ಇರಿಸಲಾಗುತ್ತದೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ.

    ಇದನ್ನೂ ಓದಿ: ಅಮೆರಿಕದಲ್ಲಿ ಸುಂಟರಗಾಳಿಗೆ 25 ಮಂದಿ ಬಲಿ: ತುರ್ತು ನೆರವು ಘೋಷಿಸಿದ ಅಧ್ಯಕ್ಷ ಜೋ ಬೈಡೆನ್

    * ಬೆಳಗ್ಗೆ 5.30ರಿಂದ 11 ಗಂಟೆಯರೆಗೆ ಹೊಸಕೆರೆಹಳ್ಳಿಯ ನೈಸ್ ಟೋಲ್ ಗೇಟ್ ಬಳಿ ಟ್ರೋಫಿಯನ್ನು ಪ್ರದರ್ಶನಕ್ಕೆ ಇಡಲಾಗುವುದು.
    * ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಜಯನಗರದ ಮೈಯಾಸ್ ಬಳಿ ಪ್ರದರ್ಶಿಸಲಾಗುವುದು.​
    * ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕೋರಮಂಗಲದ ಫೋರಮ್​ ನೆಕ್ಸಸ್​ ಮಾಲ್ ಟ್ರೋಫಿ ಪ್ರದರ್ಶನ.​
    * ರಾತ್ರಿ 9 ರಿಂದ 11 ಗಂಟೆಯವರೆಗೆ ನಗರದ ವಿಶೇಷ ಸ್ಥಳದಲ್ಲಿ ಟ್ರೋಫಿಯನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.

    IPL Trophy tour 1

    ಮುಂಬೈನಲ್ಲಿ ಶುರುವಾದ ಟ್ರೋಫಿ ಟೂರ್​ ಬಳಿಕ ವಿಶಾಖಪಟ್ಟಣಂ ಮತ್ತು ಚೆನ್ನೈನಲ್ಲಿ ಯಶಸ್ವಿಯಾಗಿ ಮುಗಿಸಿ ಇದೀಗ ಬೆಂಗಳೂರಿಗೆ ಕಾಲಿಟ್ಟಿದೆ. ಇಂದು ಇಡೀ ದಿನ ನಗರದಲ್ಲಿ ಟ್ರೋಫಿ ಪ್ರದರ್ಶನವಾಗಲಿದ್ದು, ಕ್ರೀಡಾಭಿಮಾನಿಗಳ ಪಾಲಿಗೆ ಹಬ್ಬವಾಗಿದೆ. ಇನ್ನು ಐಪಿಎಲ್​ ಹಬ್ಬಕ್ಕೆ ಐದೇ ದಿನ ಬಾಕಿ ಇದ್ದು, ಈ ಬಾರಿಯು ಈ ಸಲ ಕಪ್​ ನಮ್ದೆ ಎಂಬ ಆರ್​ಸಿಬಿ ಅಭಿಮಾನಿಗಳ ಸದ್ದು ಜೋರಾಗಿದೆ. ಈಗಾಗಲೇ ಆರ್​ಸಿಬಿ ತಂಡ ಹೊಸ ಭರವಸೆಯೊಂದಿಗೆ ಅಭ್ಯಾಸ ಶುರುವಿಟ್ಟುಕೊಂಡಿದೆ.

    ಇದನ್ನೂ ಓದಿ: ನಂಗೇನು ನಾಚಿಕೆ ಇಲ್ಲ! ಮೋದಿ ಕುರಿತ ಹಳೇ ಟ್ವೀಟ್ ವೈರಲ್​, ಸಮರ್ಥನೆ ನೀಡಿದ ಖುಷ್ಬೂ ಸುಂದರ್

    ಎಂಜಾಯ್ ಮಾಡಿ ಓಡು ಗುರು ಎಂದ ಕೊಹ್ಲಿ
    ಟ್ರೋಫಿ ಪ್ರದರ್ಶನಕ್ಕೂ ಮುನ್ನ ಇಂದು ಬೆಳಗ್ಗೆ ಹೊಸಕೆರೆಹಳ್ಳಿ ಟೋಲ್​ ಬಳಿ 18ಕೆ ಮ್ಯಾರಥಾನ್​ಗೆ ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಚಾಲನೆ ನೀಡಿದರು. 18, 10 ಮತ್ತು 5 ಕಿ.ಮೀ ಓಟದ ಮ್ಯಾರಥಾನ್​ ಆಗಿದೆ. ಚಾಲನೆ ನೀಡಿ ಕನ್ನಡದಲ್ಲೇ ಮಾತು ಆರಂಭಿಸಿದ ಕೊಹ್ಲಿ ಎಂಜಾಯ್ ಮಾಡಿ ಓಡು ಗುರು ಎಂದರು. ಈ ವೇಳೆ ನೆರೆದಿದ್ದ ಅಭಿಮಾನಿಗಳಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತು. ಮ್ಯಾರಥಾನ್​ಗೆ ಇಷ್ಟೊಂದು ಪ್ರಮಾಣದಲ್ಲಿ ಜನ ಸೇರಿರುವುದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ ಎಂದರು. ನೆಚ್ಚಿನ ಕ್ರಿಕೆಟಿಗನನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಮಂದಿ ಅಲ್ಲಿ ನೆರೆದಿದ್ದರು.

    IPL Trophy Tour 2

    ಇಂದು ಆರ್​ಸಿಬಿ ಅಭಿಮಾನಿಗಳಿಗೆ ಹಬ್ಬ
    ಐಪಿಎಲ್ ಆರಂಭಕ್ಕೆ ಇನ್ನೂ ಐದು ದಿನಗಳಿದ್ದರೂ, ಆರ್​ಸಿಬಿ ಅಭಿಮಾನಿಗಳಿಗೆ ಇಂದೇ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 4ರಿಂದ 10 ಗಂಟೆಯವರೆಗೆ ಅಭಿಮಾನಿಗಳ ಸಮ್ಮುಖದಲ್ಲಿ ‘ಆರ್​ಸಿಬಿ ಅನ್​ಬಾಕ್ಸ್’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಜತೆಗೆ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಭಾಗವಹಿಸಲಿದ್ದಾರೆ. ಎಬಿಡಿ ಅವರ 17 ಮತ್ತು ಗೇಲ್​ರ 333 ನಂ. ಜೆರ್ಸಿಯನ್ನು ಆರ್​ಸಿಬಿ ತಂಡದಿಂದ ನಿವೃತ್ತಿಗೊಳಿಸಲಾಗುತ್ತಿದೆ. ಆರ್​ಸಿಬಿ ಮಹಿಳಾ ತಂಡದ ಸದಸ್ಯರೂ ಸಮಾರಂಭದಲ್ಲಿ ಭಾಗವಹಿಸಲಿದ್ದು, ಇದರ ಟಿಕೆಟ್​ಗಳು ಈಗಾಗಲೆ ಬಹುತೇಕ ಮಾರಾಟವಾಗಿವೆ. ಗಾಯಕ ಸೋನು ನಿಗಮ್ ಸಂಗೀತ ಕಾರ್ಯಕ್ರಮವೂ ಇರಲಿದೆ. ಆರ್​ಸಿಬಿ ಯುಟ್ಯೂಬ್ ಚಾನಲ್​ನಲ್ಲಿ ಸಮಾರಂಭ ನೇರಪ್ರಸಾರವನ್ನೂ ಕಾಣಲಿದೆ.

    ಅಪಘಾತದಲ್ಲಿ ಎಸ್​ಐ, ಪೇದೆ ಸಾವು ಪ್ರಕರಣ: ಪರಿಹಾರ ಕೊಡದ ಸರ್ಕಾರ, ಸಹೋದ್ಯೋಗಿಗಳಿಂದಲೇ ನೆರವು

    ನವ್ಯಾ ನಾಯರ್​ ಮುಂದೆಯೇ 10 ಮಹಿಳೆಯರ ಜತೆ ಮಲಗಿದ್ದೆ ಎಂದಿದ್ದ ಖ್ಯಾತ ನಟನ​ ದಾಂಪತ್ಯದಲ್ಲಿ ಬಿರುಗಾಳಿ!

    ತುಂಬಿದ ಮಾಲ್​ನಲ್ಲಿ ಯುವಕನಿಂದ ಅಶ್ಲೀಲ ವರ್ತನೆ: ಕೊನೆಗೂ ಸತ್ಯಾಂಶ ತಿಳಿಸಿದ ನಟಿ ಸಾನಿಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts