More

    ಸಿದ್ದರಾಮಯ್ಯ ಅವರಿಗೆ ನಮ್ಮ ಅಭಿಮಾನದ ಬೆಲೆಯೇ ಗೊತ್ತಿಲ್ಲ: ಅಮಾನತು ‘ಉಡುಗೊರೆ’ಗೆ ತನ್ವೀರ್‌ಸೇಠ್ ಕೆಂಡಾಮಂಡಲ

    ಬೆಂಗಳೂರು: ಮೈಸೂರು ಪಾಲಿಕೆ ಮೇಯರ್ ಆಯ್ಕೆ ವಿಷಯವಾಗಿ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಆಂತರಿಕ ತಿಕ್ಕಾಟ ತಣ್ಣಗಾದಂತೆ ಕಾಣಿಸುತ್ತಿಲ್ಲ. ಪಾಲಿಕೆ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ವೈಮನಸ್ಯ ಆರಂಭವಾಗಿತ್ತು. ಬಳಿಕ ಡಿಕೆಶಿ ಮೆತ್ತಗಾಗಿ ಸಿದ್ದರಾಮಯ್ಯ ಮನೆಗೆ ತೆರಳಿ ವಸ್ತುಸ್ಥಿತಿ ವಿವರಿಸಿ ಪರಿಸ್ಥಿತಿ ನಿಭಾಯಿಸಿದ್ದರು. ಆದರೆ, ತನ್ವೀರ್ ಸೇಠ್ ಮತ್ತವರ ಬೆಂಬಲಿಗರ ಮೇಲೆ ಪ್ರತಿಪಕ್ಷ ನಾಯಕರ ಕೋಪ ತಣ್ಣಗಾಗಿರಲಿಲ್ಲ. ಅವರ ಒತ್ತಡಕ್ಕೆ ಪಕ್ಷ ತನ್ವೀರ್ ಸೇಠ್ ಬೆಂಬಲಿಗರಿಗೆ ನೋಟಿಸ್ ಜಾರಿ ಮಾಡಿತು. ಜತೆಗೆ ಅವರನ್ನು ಅಮಾನತು ಮಾಡಿದೆ. ಹೀಗಾಗಿ ತನ್ವೀರ್ ಸೇಠ್ ಸಿಟ್ಟಾಗಿದ್ದು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ನಾವು ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸದೇ ಇದ್ದಿದ್ದರೆ ಮೇಯರ್ ಸ್ಥಾನ ಬಿಜೆಪಿ ಪಾಲಾಗುತ್ತಿತ್ತು. ಈಗ ಅಧಿಕಾರ ಉಳಿಸಿಕೊಳ್ಳಲಾಗಿದೆ. ಇದಕ್ಕೆ ಪ್ರತಿಲವಾಗಿ ನಮ್ಮ ಬೆಂಬಲಿಗರು ಅಮಾನತು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
    ಇಷ್ಟೇ ಅಲ್ಲದೇ, ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ವಿಚಾರದಲ್ಲಿ ಸಿದ್ದರಾಮಯ್ಯ ಆಪ್ತರು ಮೂಗು ತೂರಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದು, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹಸ್ತಕ್ಷೇಪ ಏಕೆ ಮಾಡಬೇಕು? ಅವರಿಗೇನು ಶಿಕ್ಷೆ ಕೊಡುತ್ತೀರಿ? ಎಂದು ಪಕ್ಷದ ನಾಯಕರನ್ನು ಪ್ರಶ್ನಿಸಿದ್ದಾರೆ.

    ನನಗೆ ರಾಜಕಾರಣ ಮುಖ್ಯ ಅಲ್ಲವೇ ಅಲ್ಲ, ಸ್ವಾಭಿಮಾನ ಮುಖ್ಯ. ಸಿದ್ದರಾಮಯ್ಯರನ್ನು ನಾವು ಅಭಿಮಾನದಿಂದ ನೋಡುತ್ತೇವೆ. ಆದರೆ, ಅವರಿಗೆ ನಮ್ಮ ಅಭಿಮಾನದ ಬೆಲೆಯೇ ಗೊತ್ತಿಲ್ಲ ಎಂದು ತಮ್ಮ ಆತ್ಮೀಯರ ಬಳಿ ಬೇಸರ ಹೊರಹಾಕಿದ್ದು, ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಲೂ ಹಿಂದೇಟು ಹಾಕಿದ್ದಾರೆ. ಪಾಲಿಕೆ ಬೆಳವಣಿಗೆ ಸಂದರ್ಭದಲ್ಲಿ ತನ್ವೀರ್ ಸೇಠ್ ಬೆಂಬಲಿಗರು ತಮ್ಮ ವಿರುದ್ಧ ಘೋಷಣೆ ಹಾಕಿದ್ದು ಸಿದ್ದರಾಮಯ್ಯಗೆ ಸಿಟ್ಟು ತರಿಸಿತ್ತು. ಜತೆಗೆ ಜೆಡಿಎಸ್ ಮೈತ್ರಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಲೇಬೇಕೆಂದು ಪಕ್ಷದ ರಾಜ್ಯ ಉಸ್ತುವಾರಿ ಮತ್ತು ಎಐಸಿಸಿ ಪ್ರತಿನಿಧಿ ಮುಂದೆಯೂ ಪಟ್ಟುಹಿಡಿದಿದ್ದರು.

    ಬಟ್ಟೆ ಹಾಕೋದು-ಬಿಚ್ಚುವುದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ: ಚೆನ್ನಾಗಿ ಕಾಣಿಸಬೇಕಂತ ಸಿದ್ದರಾಮಯ್ಯ ಕಲರ್ ಬಟ್ಟೆ ತಗೋಳೋಕೆ ಶುರುಮಾಡಿದ್ದಾರಂತೆ!

    ಪರಸ್ತ್ರೀಗೆ ಕಿಸ್​ ಕೊಟ್ಟಿದ್ದಕ್ಕೆ ಪತಿಗೆ ಪಂಚ್​ ಕೊಟ್ಟ ಪತ್ನಿ: ರಿತೀಶ್ ಕಿಸ್​, ಜೆನಿಲಿಯಾ ಜಲಸ್; ನನಗಿಂತ ಪ್ರೀತಿ ಝಿಂಟಾ ಹೆಚ್ಚಾದ್ಲಾ.. ಡಿಶೂಂ ಡಿಶೂಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts