More

    ಸಂಕ್ರಾಂತಿ​ ಹಬ್ಬಕ್ಕೆ ಗಿಫ್ಟ್​ ಘೋಷಿಸಿದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​… ಏನೆಲ್ಲಾ ಇದೆ?

    ಚೆನ್ನೈ: ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಪ್ರಯುಕ್ತ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್​ ರಾಜ್ಯದ ಜನರಿಗೆ ಭರ್ಜರಿ ಘೋಷಣೆಗಳನ್ನು ಮಾಡಿದ್ದಾರೆ.

    ಕೇಂದ್ರ, ರಾಜ್ಯ ಸರ್ಕಾರದ ಉದ್ಯೋಗಿಗಳು, ಆದಾಯ ತೆರಿಗೆ ಪಾವತಿದಾರರು ಹೊರತುಪಡಿಸಿ ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ ನ್ಯಾಯ ಬೆಲೆ ಅಂಗಡಿಗಳ ಮೂಲಕ ಈ ಸೌಲಭ್ಯ ಸಿಗಲಿದೆ ಎಂದು ಸರ್ಕಾರದ ವತಿಯಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.

    Pongal

    ಇದನ್ನೂ ಓದಿ: ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಚುಂಬಿಸಿದ ಆಮೀರ್​ ಖಾನ್; ವಿಡಿಯೋ ವೈರಲ್

    “ಕಲೈಘರ್​ ಮಗಳಿರ್​ ಉರಿಮೈ ತಿಟ್ಟಂ” ಯೋಜನೆಯಡಿ ಮಾಸಿಕವಾಗಿ ನೀಡುವ ಸಾವಿರ ರೂಪಾಯಿ ಹಣವನ್ನು ಐದು ದಿನಗಳ ಮುಂಚೆಯೇ ಅಂದರೆ ಜನವರಿ 10 ರಂದು ಪಲಾನುಭವಿಗಳ ಖಾತೆಗೆ ಸರ್ಕಾರ ನೇರವಾಗಿ ಪಾವತಿ ಮಾಡಲಿದೆ. ಇದರಿಂದ 1.15 ಕೋಟಿ ಮಹಿಳೆಯರಿಗೆ ಅನುಕೂಲವಾಗಲಿದೆ. ಪಡಿತರ ಕಿಟ್​ನಲ್ಲಿ ಕಬ್ಬು, ತಲಾ ಒಂದು ಕೆಜಿ ಅಕ್ಕಿ, ಸಕ್ಕರೆ, ಒಂದು ಗಿಫ್ಟ್ ಹ್ಯಾಂಪರ್​, ಒಂದು ಧೋತಿ ಮತ್ತು ಸೀರೆಯನ್ನು ಕೊಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಪೊಂಗಲ್​ ಹಬ್ಬದ ವಿಶೇಷತೆ ?

    ವರ್ಷದ ಮೊದಲ ದೊಡ್ಡ ಹಬ್ಬವಾದ ಪೊಂಗಲ್ ಅಥವಾ ಥೈ ಪೊಂಗಲ್ ತಮಿಳುನಾಡು ರಾಜ್ಯದಲ್ಲಿ ಪ್ರತಿವರ್ಷ ಜನವರಿ ಮಧ್ಯದಲ್ಲಿ ಆಚರಿಸಲಾಗುವ ನಾಲ್ಕು ದಿನಗಳ ಸುಗ್ಗಿಯ ಹಬ್ಬವಾಗಿದೆ ಮತ್ತು ಈ ಹಬ್ಬವು ಮಕರ ಸಂಕ್ರಾಂತಿಯೊಂದಿಗೆ ಸೇರಿಕೊಳ್ಳುತ್ತದೆ. ರೈತರು ಮತ್ತು ಇತರ ಜನರು ಒಟ್ಟಾಗಿ ಸಮೃದ್ಧವಾದ ಸುಗ್ಗಿಯನ್ನು ಆಚರಿಸುತ್ತಾರೆ ಮತ್ತು ಪೊಂಗಲ್ ಹಬ್ಬದ ಈ ನಾಲ್ಕು ದಿನಗಳ ವಿವಿಧ ಆಚರಣೆಗಳನ್ನು ಅನುಸರಿಸುವ ಮೂಲಕ ದೇವರಿಗೆ ಪ್ರಾರ್ಥನೆಯನ್ನು ಅರ್ಪಿಸುತ್ತಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts