More

    ಅಪಘಾತದಲ್ಲಿ ಮೃತಪಟ್ಟ ಹೆಬ್ಬಾವಿಗೆ ಅಂತ್ಯಸಂಸ್ಕಾರ: ಗ್ರಾಮಸ್ಥರ ಮಾತು ಕೇಳಿದ್ರೆ ಫಿದಾ ಗ್ಯಾರೆಂಟಿ!

    ಚೆನ್ನೈ: ರಸ್ತೆ ಅಪಘಾತದಲ್ಲಿ ಸಾವಿಗೀಡಾದ 12 ಅಡಿ ಉದ್ದ ಹೆಬ್ಬಾವಿಗೆ ಅಂತಿಮ ಸಂಸ್ಕಾರ ನೆರವೇರಿಸಿದ ವಿರಾಳಾತಿವಿರಳ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.

    ಶನಿವಾರ ಬೆಳಗ್ಗೆ ರಸ್ತೆ ದಾಟುವಾಗ ಹೆಬ್ಬಾವಿನ ಮೇಲೆ ಟ್ರಕ್​ವೊಂದು ಹರಿದ ಪರಿಣಾಮ ಹಾವು ಮೃತಪಟ್ಟಿದೆ. ಈ ಘಟನೆ ಕೃಷ್ಣಗಿರಿ ಜಿಲ್ಲೆಯ ಬಾರ್ಗೂರ್​ ಬಳಿಯಿರುವ ನಾದರ್​ ಕೊಟ್ಟಾಯ್​ನ ರಸ್ತೆಯಲ್ಲಿ ನಡೆದಿದೆ. ಹಾವು ಸಾವಿಗೀಡಾಗಿದ್ದನ್ನು ರಸ್ತೆಯಲ್ಲಿ ನಿಂತು ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರೆ, ಕೆಲವರು ಸುಮ್ಮನೆ ನೋಡುತ್ತಾ ತೆರಳಿದರು. ಆದರೆ, ಪಕ್ಕದ ಗ್ರಾಮದವರು ಹಾವು ಮೃತಪಟ್ಟಿರುವುದನ್ನು ಗಮನಿಸಿ ಅದಕ್ಕೆ ಅಂತಿಮ ಸಂಸ್ಕಾರ ನಡೆಸಿಕೊಟ್ಟರು.

    ಇದನ್ನೂ ಓದಿ: ನಾಳಿನ ಚಿಂತೆ ಬಿಟ್ಟು ಈ ಕ್ಷಣ ಅನುಭವಿಸೋಣ: ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಅಂಕಣ…

    ಸತ್ತ ಹಾವಿಗೆ ಬಿಳಿಯ ಬಟ್ಟೆ ಹೊದಿಸಿ, ಹೂವಿನ ಹಾರ ಹಾಕಿ ಮೆರವಣಿಗೆ ನಡೆಸಿದ ಗ್ರಾಮಸ್ಥರು ಮೃತ ವ್ಯಕ್ತಿಗಳಿಗೆ ಮಾಡುವಂತೆಯೇ ಎಲ್ಲ ವಿಧಿವಿಧಾನಗಳನ್ನು ಮಾಡಿ ಹಾವಿನ ಅಂತ್ಯಸಂಸ್ಕಾರ ನಡೆಸಿದರು. ಇದಕ್ಕೂ ಮುನ್ನ ಹಾವಿನ ಮೇಲೆ ರೋಸ್​ ವಾಟರ್​ ಸಹ ಸಿಂಪಡಿಸಲಾಯಿತು.

    ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಹ ವೈರಲ್​ ಆಗಿದೆ. ಇನ್ನು ಹೆಬ್ಬಾವಿಗೆ ಅಂತ್ಯಸಂಸ್ಕಾರ ನಡೆಸುವಂತಹ ಘಟನೆ ತುಂಬಾ ವಿರಳ. ಇದೇ ಮೊದಲ ಬಾರಿಗೆ ಗ್ರಾಮಸ್ಥರು ಇದನ್ನು ನೆರವೇರಿಸಿದ್ದು, ಮೂಕ ಪ್ರಾಣಿಗಳು ಸಹ ಒಂದು ಜೀವಿಯಾಗಿದ್ದು ಅದಕ್ಕೆ ಗೌರವ ಸಲ್ಲಿಸಬೇಕಾದ್ದು ಮಾನವೀಯತೆ ಎನ್ನುತ್ತಾರೆ ಕೃಷ್ಣನ್​ ಹೆಸರಿನ ಗ್ರಾಮಸ್ಥ. ಸದ್ಯ ಗ್ರಾಮಸ್ಥರ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಒಂದೂವರೆ ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ: ಇನ್ನೂ ನಿಗದಿಯಾಗದ ಪ್ರವೇಶ ಪರೀಕ್ಷೆ

    ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಎಸ್​ಐ ಲವ್ವಿಡವ್ವಿ: ಏನೇ ಮಾಡಿದ್ರೂ ಸಂಬಂಧ ಮಾತ್ರ ಬಿಡ್ತಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts