More

    ಮೊಸರಿನ ಪ್ಯಾಕೆಟ್​ಗಳಲ್ಲಿ ಹಿಂದಿಯ ‘ದಹಿ’ ಪದ ಬಳಕೆಗೆ FSSAI ಸೂಚನೆ: ಸಾಧ್ಯವಿಲ್ಲ ಎಂದ ತಮಿಳುನಾಡು

    ಚೆನ್ನೈ: ಹಿಂದಿಯೇತರ ದಕ್ಷಿಣ ರಾಜ್ಯಗಳು ಮೊಸರಿನ ಪ್ಯಾಕೆಟ್​ಗಳ ಮೇಲೆ ದಹಿ (ಮೊಸರು) ಎಂಬ ಹಿಂದಿ ಪದವನ್ನು ಪ್ರಮುಖ ಬಳಸಬೇಕು ಮತ್ತು ಸಮಾನವಾದ ತಮಿಳು ಭಾಷೆಯನ್ನು ಬ್ರಾಕೆಟ್​ನಲ್ಲಿ ಬಳಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​​ಎಐ) ನೀಡಿರುವ ಸೂಚನೆ ವಿರುದ್ಧ ತಮಿಳುನಾಡಿನಲ್ಲಿ ಆಕ್ರೋಶ ಭುಗಿಲೆದ್ದಿದೆ.

    ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ. ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆಯನ್ನು ನಿಲ್ಲಿಸಿ, ಜನರ ಭಾವನೆಗಳನ್ನು ಗೌರವಿಸಿ ಎಂದು ಎಫ್​ಎಸ್​ಎಸ್​ಎಐ ಅನ್ನು ಸ್ಟಾಲಿನ್​ ಕೇಳಿದ್ದಾರೆ.

    ಇದನ್ನೂ ಓದಿ: ಅರೆಬರೆ ರಸ್ತೆಗೆ ಮತ್ತೆ ಟೋಲ್ ಶುಲ್ಕ ಹೆಚ್ಚಿಸಿದ ಐಆರ್‌ಬಿ -ಏಪ್ರೀಲ್ 1 ರಿಂದ ಹೊಸ ದರ ಜಾರಿ

    ಅಲ್ಲದೆ, ಹಿಂದಿ ಹೇರಿಕೆಯ ನಿರ್ಲಜ್ಜ ಆಗ್ರಹವು ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸುವ ಮೂಲಕ ಮೊಸರು ಪ್ಯಾಕೆಟ್‌ಗೂ ಹಿಂದಿಯಲ್ಲಿ ಲೇಬಲ್ ಮಾಡಲು ನಿರ್ದೇಶಿಸುವ ಮಟ್ಟಕ್ಕೆ ಬಂದಿದೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುತ್ತಿರುವುದರಿಂದ ಅದಕ್ಕೆ ಕಾರಣರಾದವರನ್ನು ದಕ್ಷಿಣದಿಂದಲೇ ಶಾಶ್ವತವಾಗಿ ಗಡಿಪಾರು ಮಾಡಲಾಗುವುದು ಎಂದು ಸ್ಟಾಲಿನ್​ ಆಕ್ರೋಶ ಹೊರಹಾಕಿದ್ದಾರೆ.

    ತಮಿಳುನಾಡಿನ ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಎಸ್​.ಎಂ. ನಾಸರ್​ ಮಾತನಾಡಿ, ಎಫ್​ಎಸ್​ಎಸ್​ಎಐ ಮಾಡಿರುವ ಸೂಚನೆಯನ್ನು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸುವುದಿಲ್ಲ. ಮೊಸರಿನ ಪ್ಯಾಕೆಟ್​ಗಳಲ್ಲಿ ಥಯಿರ್​ (ಮೊಸರು) ಎಂದು ತಮಿಳು ಪದದಲ್ಲೇ ಲೇಬನ್​ ಅನ್ನು ಮುಂದುವರಿಸಲಾಗುತ್ತದೆ. ಇಂದು ಇಂಗ್ಲಿಷ್​ನ ಕರ್ಡ್​ ಪದಕ್ಕೆ ಸಮಾನವಾದ ತಮಿಳು ಪದವಾಗಿದೆ ಎಂದಿದ್ದಾರೆ. (ಏಜೆನ್ಸೀಸ್​)

    ರಾಜ್ಯದಲ್ಲಿ ಹೊಸ ಎಂ 3 ಮತಯಂತ್ರ: ಇದೇ ಮೊದಲ ಬಾರಿ ಬಳಕೆ; ಮುಖ್ಯ ಚುನಾವಣಾಧಿಕಾರಿ ಮಾಹಿತಿ

    ಮುನ್ನೆಲೆಗೆ ಔಷಧ ಸಿದ್ಧತೆಯ ಹಿನ್ನೆಲೆ

    ಐದು ಕಥೆಗಳಿಗೆ ಕಾಗೆಯೇ ಲಿಂಕ್​ … ‘ಪೆಂಟಗನ್​’ ಟ್ರೇಲರ್​ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts