More

    ತಮಿಳುನಾಡಿನಲ್ಲಿ ಕರೊನಾ ನಿಗ್ರಹಕ್ಕೆ ‘ಸಿದ್ಧ’ ಔಷಧ; ಪ್ರಾಚೀನ ಚಿಕಿತ್ಸಾ ಪದ್ಧತಿ ವಿಸ್ತರಿಸಲು ಸರ್ಕಾರ ನಿರ್ಧಾರ

    ಚೆನ್ನೈ: ಕರೊನಾ ನಿಗ್ರಹಕ್ಕೆ ಆಯುರ್ವೇದ ಔಷಧ ಸಿದ್ಧಪಡಿಸಿರುವುದಾಗಿ ಘೋಷಿಸಿರುವ ಪತಂಜಲಿ ಸಂಸ್ಥೆಯ ಕರೊನಿಲ್​ ಹಾಗೂ ಶ್ವಾಸರಿ ವಿವಾದಕ್ಕೆ ಗುರಿಯಾಗಿರುವ ಬೆನ್ನಲ್ಲೇ, ತಮಿಳುನಾಡು ಸರ್ಕಾರ ಸ್ವದೇಶಿ ಹಾಗೂ ಸ್ಥಳೀಯ ಚಿಕಿತ್ಸಾ ಪದ್ಧತಿಗೆ ಮಣೆ ಹಾಕಲು ಮುಂದಾಗಿದೆ.

    ತಮಿಳುನಾಡಿನಲ್ಲಿ ದೇಶೀಯ ‘ಸಿದ್ಧ’ ಪದ್ಧತಿ ಅನ್ವಯ ಕರೊನಾದ ಲಘು ಹಾಗೂ ಸಾಧಾರಣ ಸೋಂಕು ಉಳ್ಳವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದು ಶೇ.100 ಯಶಸ್ವಿಯಾಗಿರುವುದು ಕಂಡು ಬಂದಿದೆ. ಹೀಗಾಗಿ ಈ ಚಿಕಿತ್ಸೆಯನ್ನು ಇನ್ನೊಂದು ಆಸ್ಪತ್ರೆಗೆ ವಿಸ್ತರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.

    ಚೆನ್ನೈನಲ್ಲಿ 25 ಕರೊನಾ ಸೋಂಕಿತರಿಗೆ ‘ಸಿದ್ಧ’ ಔಷಧವನ್ನು ನೀಡಲಾಗಿತ್ತು. ಎಲ್ಲರೂ ಗುಣ ಹೊಂದಿದ್ದಾರೆ. ಹೀಗಾಗಿ ವ್ಯಾಸಪರಡಿಯ ಅಂಬೇಡ್ಕರ್​ ವೈದ್ಯಕೀಯ ಕಾಲೇಜಿನ ರೋಗಿಗಳಿಗೂ ಇದೇ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.

    ಇದನ್ನೂ ಓದಿ; ಪತಂಜಲಿ ಕರೊನಾ ನಿಗ್ರಹ ಔಷಧಕ್ಕೆ ಪ್ರತಿಕ್ರಿಯಿಸದ ಐಸಿಎಂಆರ್​, ಆಯುಷ್​ ಇಲಾಖೆ

    ಸಿದ್ಧ ವೈದ್ಯ ಪದ್ಧತಿ ದೇಶೀಯ ಹಾಗೂ ತಮಿಳರ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದೆ. ಸಿದ್ಧ ಚಿಕಿತ್ಸೆ ನಮಗೆ ಟ್ರಂಪ್​ ಕಾರ್ಡ್​ ಇದ್ದಂತೆ. ಇದರಿಂದ ಕರೊನಾವನ್ನು ಶೇ.100 ನಿಗ್ರಹಿಸಬಹುದು ಎಂದು ತಮಿಳುನಾಡು ಸಚಿವ ಪಾಂಡ್ಯ ರಾಜನ್​ ಹೇಳಿದ್ದಾರೆ.

    ಈ ಚಿಕಿತ್ಸೆಯಿಂದ ರೋಗಿಗಳ ಜೀವದ ಜತೆ ಚೆಲ್ಲಾಟವಾಡಲಾಗುತ್ತಿದೆ ಎಂಬ ವಾದವನ್ನು ಅವರು ತಳ್ಳಿ ಹಾಕಿದ್ದಾರೆ. ರೋಗಿ ಗಂಭೀರಾವಸ್ಥೆಗೆ ತಲುಪಿದಾಗ ಸಿದ್ಧ ಪ್ರಯೋಜನಕಾರಿಯಾಗದಿರಬಹುದು. ಆದರೆ, ಅಂಥವರ ಪ್ರಮಾಣ ಕೇವಲ ಶೇ.3 ಅಷ್ಟೇ ಎಂದು ಅವರು ಹೇಳಿದ್ದಾರೆ.

    ಕರೊನಾ ಲಕ್ಷಣಗಳಿರುವ ಹಾಗೂ ಲಘು ಸೋಂಕಿಗೆ ಒಳಗಾದವರಿಗೆ ಸಿದ್ಧ ಔಷಧವನ್ನು ಅವರು ಬಯಸಿದಲ್ಲಿ ಮಾತ್ರ ನೀಡಲಾಗುತ್ತಿದೆ. ಅಂಥ ರೋಗಿಗಳು ಚಿಕಿತ್ಸಾ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಮಿಳುನಾಡು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

    ಇದನ್ನೂ ಓದಿ; 20 ವರ್ಷ ಜೀವಂತವಾಗಿರುತ್ತೆ ಕರೊನಾ; ಹಸಿ ಮಾಂಸ, ಮೀನು ಮುಟ್ಟಬೇಡಿ; ಚೀನಾ ತಜ್ಞರ ಎಚ್ಚರಿಕೆ

    ಸಿದ್ಧ ಔಷಧ ಕ್ಲಿನಿಕಲ್​ ಪ್ರಯೋಗಕ್ಕೆ ಒಳಪಟ್ಟಿಲ್ಲ. ಹೀಗಾಗಿ ಇದು ಅಂತಾರಾಷ್ಟ್ರೀಯವಾಗಿ ಮಾನ್ಯತೆ ಗಳಿಸಿಲ್ಲ. ಈ ಚಿಕಿತ್ಸೆಯಲ್ಲಿ ಭಾರ ಲೋಹಗಳ ಬಳಕೆಯಾಗುವುದರಿಂದ ದೀರ್ಘ ಅವಧಿಯಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳಬಹುದೆಂಬ ಭಯವಿದೆ. ಇಲ್ಲದಿದ್ದರೆ ಬೇರಾವ ತೊಂದರೆ ಈ ಪದ್ಧತಿಯಲ್ಲಿಲ್ಲ ಎನ್ನುತ್ತಾರೆ ಸಿದ್ಧ ವೈದ್ಯ ಡಾ. ಅರ್ಥರ್​

    ತಮಿಳುನಾಡಿನಲ್ಲಿ ಆರಂಭದಲ್ಲಿ ‘ಕಬಸೂರ ಕುದಿನೀರ್​’ ಎಂಬ ಸಿದ್ಧ ಔಷಧವನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀಡಲಾಗುತ್ತಿತ್ತು. ಇದು 15 ಮೂಲಿಕೆಗಳ ಮಿಶ್ರಣವಾಗಿದೆ. ಕರೊನಾದಿಂದ ಪಾರಾಗಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೇ ಮಾರ್ಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ ಎನ್ನುವುದು ಸಚಿವ ಪಾಂಡ್ಯರಾಜನ್​ ಸಮರ್ಥನೆ.

    ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts