More

    ಪುರುಚ್ಚಿ ತಲೈವಿ ಜಯಲಲಿತಾ ಮನೆ ಸ್ಮಾರಕವಾಗಲ್ಲ; ಹಾಗಿದ್ದರೆ ಬಳಕೆಯಾಗೋದಾದರೂ ಯಾವುದಕ್ಕೆ?

    ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ, ಪುರುಚ್ಚಿ ತಲೈವಿ ಎಂದೇ ಕರೆಯಲಾಗುತ್ತಿದ್ದ ಜೆ. ಜಯಲಲಿತಾ ಮನೆ ಸ್ಮಾರಕವನ್ನಾಗಿಸಲ್ಲ ಎಂದು ತಮಿಳುನಾಡು ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

    ಎಐಎಡಿಎಂಕೆ ನೇತೃತ್ವದ ಸರ್ಕಾರ ಪೋಯಸ್​ ಗಾರ್ಡನ್​ನಲ್ಲಿರುವ ಮೂರು ಅಂತಸ್ತಿನ ವಿಶಾಲ ಮನೆ ವೇದಾ ನಿಲಯವನ್ನು ಜಯಲಲಿತಾ ನೆನಪಿನಲ್ಲಿ ಸ್ಮಾರಕವಾಗಿಸಲು ಯೋಜನೆ ರೂಪಿಸಿತ್ತು. ಇದಕ್ಕಾಗಿ ಪುರುಚ್ಚಿ ತಲೈವಿ ಡಾ. ಜೆ. ಜಯಲಲಿತಾ ಸ್ಮಾರಕ ಪ್ರತಿಷ್ಠಾನವನ್ನು ರಚಿಸಿತ್ತು.

    ಇದನ್ನೂ ಓದಿ; ತನಗಿರುವ ವಿಚಿತ್ರ ಗೀಳಿನಿಂದಲೇ ತಿಂಗಳಿಗೆ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾಳೆ ಈ ಯುವತಿ

    ಪುರುಚ್ಚಿ ತಲೈವಿ ಜಯಲಲಿತಾ ಮನೆ ಸ್ಮಾರಕವಾಗಲ್ಲ; ಹಾಗಿದ್ದರೆ ಬಳಕೆಯಾಗೋದಾದರೂ ಯಾವುದಕ್ಕೆ?

    ಆದರೆ, ಇದಕ್ಕಾಗಿ ಮನೆಯಲ್ಲಿದ್ದವರನ್ನು ತೆರವು ಮಾಡುವುದಿಲ್ಲ, ಯಾವುದೇ ವಸ್ತುಗಳ ಸ್ಥಳಾಂತರಕ್ಕೂ ಅವಕಾಶವಿಲ್ಲ ಎಂದು ಹೇಳಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ರಾಜ್ಯಪಾಲ ಭನ್ವಾರಿಲಾಲ್​ ಅನುಮೋದನೆ ಕೂಡ ನೀಡಿದ್ದರು.

    ಜಯಲಲಿತಾ 2016ರ ಡಿಸೆಂಬರ್​ನಲ್ಲಿ ಮೃತಪಟ್ಟಿದ್ದರು. ಆಗಿನಿಂದಲೂ ಮನೆ ಯಾರ ಅಧೀನಕ್ಕೆ ಸೇರಲಿದೆ ಎಂಬ ಬಗ್ಗೆ ಭಾರಿ ಕುತೂಹಲ ಮೂಡಿತ್ತು. ಆಸ್ತಿ ಬಗ್ಗೆ ಕಲಹಗಳು ಉಂಟಾಗಿದ್ದವು. ಜತೆಗೆ ಸ್ಮಾರಕ ಸ್ಥಾಪನೆಗೆ ಹೈಕೋರ್ಟ್​ ತಡೆ ನೀಡಿತ್ತು.

    ಇದನ್ನೂ ಓದಿ; ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!

    ಇದೀಗ, ಸ್ಮಾರಕ ನಿರ್ಮಾಣ ಯೋಜನೆ ಕೈಬಿಟ್ಟಿರುವ ತಮಿಳುನಾಡು ಸರ್ಕಾರ ವೇದಾ ನಿಲಯವನ್ನು ಸಿಎಂ ಅಧಿಕೃತ ನಿವಾಸವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಹೈಕೋರ್ಟ್​ಗೆ ಈ ಬಗ್ಗೆ ಮಾಹಿತಿಯನ್ನು ರವಾನಿಸಿದೆ.

    ದಲಿತರಿಗೆ ಮೀಸಲಾಗಿದ್ದ ಜಾಗದಲ್ಲಿ 9 ಅಂತಸ್ತಿನ ಕಟ್ಟಡ ನಿರ್ಮಿಸಿದ ಗಾಂಧಿ ಕುಟುಂಬದ ಸಂಸ್ಥೆ; ಇಡಿಯಿಂದ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts