More

    ತಮನ್ನಾ ಭಾಟಿಯಾಗೆ ಕರೊನಾ ಆತಂಕ; ಮನೆಯಲ್ಲಿಯೇ ಕ್ವಾರಂಟೈನ್​

    ಬಹುಭಾಷಾ ನಟಿ ತಮನ್ನಾ ಭಾಟಿಯಾಗೆ ಇದೀಗ ಕರೊನಾ ಆತಂಕ ಶುರುವಾಗಿದೆ. ಅಂದರೆ, ಅವರ ಕುಟುಂಬಕ್ಕೆ ಕರೊನಾ ಸೋಂಕು ತಗುಲಿದ್ದು, ಎಲ್ಲರೂ ಹೋಮ್​ ಕ್ವಾರಂಟೈನ್​ ಆಗಿದ್ದಾರೆ. ಈ ವಿಚಾರವನ್ನು ಸ್ವತಃ ತಮನ್ನಾ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಯಾರಲ್ಲೂ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: Photos: ಕೆಜಿಎಫ್ ಚಿತ್ರದ ಮೊದಲ ದಿನದ ಶೂಟಿಂಗ್​ ಫೋಟೋಗಳು ಇಲ್ಲಿವೆ…

    ‘ಅಪ್ಪ ಮತ್ತು ಅಮ್ಮ ಇಬ್ಬರಿಗೂ ಕರೊನಾ ಸೋಂಕು ಇರುವುದು ವರದಿಯಿಂದ ದೃಢಪಟ್ಟಿದೆ. ಅದೇ ರೀತಿ ನನ್ನನ್ನು ಸೇರಿ ಮನೆಯಲ್ಲಿರುವ ಇತರರ ಕೋವಿಡ್ ಪರೀಕ್ಷೆ ಮಾಡಿಸಿದ್ದು, ನೆಗೆಟಿವ್​ ಬಂದಿದೆ. ಸಂಬಂಧಪಟ್ಟವರಿಗೆ ಈ ವಿಷಯ ತಿಳಿಸಿದ್ದು, ಅವರ ಆದೇಶದಂತೆ ಹೋಮ್​ ಕ್ವಾರಂಟೈನ್​ ಆಗಿದ್ದೇವೆ. ದೇವರ ಆಶೀರ್ವಾದ ಮತ್ತು ನಿಮ್ಮಲ್ಲರ ಹಾರೈಕೆ ನಮ್ಮ ಮೇಲಿರಲಿ’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಸೂಸೈಡ್​ ಆರ್​ ಮರ್ಡರ್​: ಸುಶಾಂತ್​ ಪಾತ್ರಧಾರಿಗೆ ನೋಟಿಸ್​ …

    ಇನ್ನು ದಿನೇದಿನೆ ಕರೊನಾ ಹಾವಳಿ ಹೆಚ್ಚಾಗುತ್ತಿದೆಯಾದರೂ, ಅದರಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣವೂ ದುಪ್ಪಟ್ಟಾಗುತ್ತಿದೆ. ಇತ್ತೀಚೆಗಷ್ಟೇ ಬಾಲಿವುಡ್​ ಬಿಗ್​ ಬಿ ಕುಟುಂಬ ಕರೊನಾದಿಂದ ಆಸ್ಪತ್ರೆ ಪಾಲಾಗಿತ್ತು. ಇದೀಗ ಎಲ್ಲರೂ ಚೇತರಿಸಿಕೊಂಡು ಮನೆಯಲ್ಲಿದ್ದಾರೆ. (ಏಜೆನ್ಸೀಸ್​)

    ಒಂದು ವರ್ಷ ಮುಂದಕ್ಕೆ ಹೋಯ್ತು ರಣಬೀರ್​-ಆಲಿಯಾ ಮದುವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts