More

    ‘ಈ ಸಾರಿ ಮಿಸ್ ಆಗೋ ಚಾನ್ಸೇ ಇಲ್ಲ’: ಮಲಾಲಗೆ ತಾಲಿಬಾನಿ ಉಗ್ರರಿಂದ ಬೆದರಿಕೆ

    ಇಸ್ಲಾಮಾಬಾದ್: ಪಾಕಿಸ್ತಾನದ ಸಾಮಾಜಿಕ ಹೋರಾಟಗಾರ್ತಿ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸೂಫ್ ಜೈ ಗೆ ತಾಲಿಬಾನಿ ಉಗ್ರರಿಂದ ಮತ್ತೆ ಬೆದರಿಕೆ ಹಾಕಲಾಗಿದೆ. ತಾಲಿಬಾನ್ ಮಾಜಿ ವಕ್ತಾರ ಇಹಸುಲ್ಲಾನ ಇಸಾನ್ ಹೆಸರಿನಲ್ಲಿ ಟ್ವಿಟ್ಟರ್​ನಲ್ಲಿ ಮಲಾಲಾಗೆ ಬೆದರಿಕೆ ಹಾಕಲಾಗಿದೆ.

    ‘This Time There Will Be No Mistake’ (ಈ ಸಾರಿ ಹಿಂದಿನ ತಪ್ಪುಗಳು ಮರುಕಳಿಸುವುದಿಲ್ಲ) ಎಂದು ಟ್ವಿಟ್ ಮಾಡಲಾಗಿದೆ. ಈ ಟ್ವಿಟ್ ಟ್ವಿಟ್ಟರ್ ಕಂಪನಿ ಗಮನಕ್ಕೆ ಬಂದ ತಕ್ಷಣ ಅದನ್ನು ಡಿಲೀಟ್ ಮಾಡಿ, ಅಕೌಂಟ್ ಬ್ಲಾಕ್ ಮಾಡಲಾಗಿದೆ. ‘ವಾಪಸ್ ಮನೆಗೆ ಬಾ, ಈ ಸಾರಿ ಹಿಂದಿನ ತಪ್ಪುಗಳು ಮರುಕಳಿಸುವುದಿಲ್ಲ’ ಎಂದು ಟ್ವಿಟ್​ನಲ್ಲಿ ಬೆದರಿಕೆ ಹಾಕಲಾಗಿತ್ತು.

    ಈ ಬಗ್ಗೆ ಆಘಾತ ವ್ಯಕ್ತಪಡಿಸಿ ಟ್ವಿಟ್ ಮಾಡಿರುವ ಮಲಾಲಾ, ‘ಜೈಲಿನಿಂದ ತಪ್ಪಿಸಿಕೊಂಡು ಹೋಗಿ, ಈಗ ಮುಗ್ದ ಜನರಿಗೆ ಬೆದರಿಕೆ ಹಾಕುವುದು ಹೇಗೆ ಸಾದ್ಯವಾಯಿತು?’ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೇ ಟ್ವಿಟ್ ನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ಗೆ ಟ್ಯಾಗ್ ಮಾಡಲಾಗಿದೆ.

    2011 ರಲ್ಲಿ ಇದೇ ತಾಲಿಬಾನ್ ಉಗ್ರರು ಮಲಾಲ ಹತ್ಯೆಗೆ ಯತ್ನ ನಡೆಸಿದ್ದರು. ಮಲಾಲ ಮೇಲೆ ಗುಂಡಿನ ದಾಳಿ ನಡೆಸಿದ್ದ ಉಗ್ರರು, ಅವಳನ್ನು ಕೊಲ್ಲಲು ವಿಫಲರಾಗಿದ್ದರು. ತೀವ್ರ ಗಾಯಗೊಂಡಿದ್ದ ಮಲಾಳಿಗೆ ಶ್ರೇಷ್ಠ ಚಿಕಿತ್ಸೆ ನೀಡಿ ಬದುಕಿಸಲಾಗಿತ್ತು. ಮಲಾಲ ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಅವರ ಹಕ್ಕುಗಳ ಬಗ್ಗೆ ಹೋರಾಡುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳ ಹಿಂದೆ ಇಹಸುಲ್ಲಾನ ಇಸಾನ್ ನ್ನು ಪಾಕಿಸ್ತಾನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. 2020 ರಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಈತ, ಹಲವಾರು ಟ್ವಿಟ್ಟರ್ ಅಕೌಂಟ್​ಗಳನ್ನು ಹೊಂದಿ, ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸಿದ್ದಾನೆ. ಇದೀಗ ಮತ್ತೆ ಮಲಾಲಗೆ ಬೆದರಿಕೆ ಹಾಕಿರುವುದು ಆತಂಕ ಹುಟ್ಟಿ ಹಾಕಿದೆ.

    ಪ್ರಮಾಣ ವಚನ ಸ್ವೀಕರಿಸಲು ಹೆಲಿಕಾಪ್ಟರ್​ನಲ್ಲಿ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts