More

    ತಾಲಿಬಾನ್​ ಡೆಪ್ಯುಟಿ ಅಬ್ದುಲ್ ಘನಿ ಬರಾದರ್​ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷ?!

    ಕಾಬುಲ್​: ಕಾಬುಲ್​ಅನ್ನು ಆಕ್ರಮಿಸಿಕೊಂಡು ಅಫ್ಘಾನಿಸ್ತಾನದ ಅಧ್ಯಕ್ಷೀಯ ಅರಮನೆ, ಸಂಸತ್ತು ಮತ್ತು ಸರ್ಕಾರಿ ಕಚೇರಿಗಳನ್ನು ವಶಪಡಿಸಿಕೊಂಡ 10 ದಿನಗಳ ನಂತರ, ತಾಲಿಬಾನಿಗಳು, ಇದೀಗ ತಮ್ಮ ಸರ್ಕಾರ ರಚನೆಯತ್ತ ಗಮನ ಹರಿಸಿದ್ದಾರೆ. ತಾಲಿಬಾನ್​ ಡೆಪ್ಯುಟಿ ಲೀಡರ್​ ಹಾಗೂ ಸ್ಥಾಪಕರಲ್ಲೊಬ್ಬನಾದ ಮುಲ್ಲಾ ಅಬ್ದುಲ್ ಘನಿ ಬರಾದರ್​ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷನಾಗಲಿದ್ದಾನೆ ಎಂದು ವರದಿಗಳು ತಿಳಿಸಿವೆ.

    ಈ ಬಗ್ಗೆ ತಾಲಿಬಾನ್​ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲದಿದ್ದರೂ, ತಾಲಿಬಾನ್​ ತನ್ನ ಹಿರಿಯ ನಾಯಕರನ್ನು ವಿವಿಧ ಸಚಿವ ಸ್ಥಾನಗಳಿಗೆ ಹೆಸರಿಸಿದೆ ಎನ್ನಲಾಗಿದೆ. ಈ ಹಿಂದೆ ಕ್ಯೂಬಾದ ಗೌಂಟನಾಮೊ ಬೇನಲ್ಲಿನ ಅಮೆರಿಕಾ ಜೈಲಿನಲ್ಲಿದ್ದ ಮುಲ್ಲಾ ಅಬ್ದುಲ್​ ಖಯ್ಯುಮ್​ ಜಕೀರ್​ ಹೊಸ ಆಡಳಿತದ ರಕ್ಷಣಾ ಸಚಿವನಾಗಲಿದ್ದಾನೆ. ತಾಲಿಬಾನ್​ನ ಆರ್ಥಿಕ ವ್ಯವಹಾರಗಳ ಮುಖ್ಯಸ್ಥ ಗುಲ್​ ಆಘಾ ಹೊಸ ಹಣಕಾಸು ಸಚಿವನಾಗಲಿದ್ದಾನೆ ಎನ್ನಲಾಗಿದೆ.

    ಇದನ್ನೂ ಓದಿ: 8 ತೊಲೆ ಬಂಗಾರವನ್ನು ಮರಳಿಸಿ ಮಹಿಳೆ ಪಾಲಿಗೆ ಬಂಗಾರದ ಮನುಷ್ಯನಾದ ಆಟೋ ಚಾಲಕ..!

    ಮುಂಚಿನ ಅಶ್ರಫ್​ ಘನಿ ಸರ್ಕಾರದ ವಕ್ತಾರರನ್ನು ಕೊಂದುಹಾಕಿದ್ದ ತಾಲಿಬಾನ್ ಈಗಾಗಲೇ ಜಬೀಹುಲ್ಲಾ ಮುಜಾಹಿದ್​ಅನ್ನು ಅಧಿಕೃತ ವಕ್ತಾರನಾಗಿ ನೇಮಿಸಿದೆ. ದೇಶದ ಸೆಂಟ್ರಲ್ ಬ್ಯಾಂಕ್​ನ ಮುಖ್ಯಸ್ಥನ ಸ್ಥಾನಕ್ಕೆ ಹಾಜಿ ಮೊಹಮ್ಮದ್​ ಇದ್ರಿಸ್​​ ನೇಮಕವಾಗಿದೆ. ವಿವಿಧ ಪ್ರಾಂತ್ಯಗಳ ಗೊವರ್ನರ್​ಗಳಾಗಿ ತನ್ನ ಅನುಭವಿ ಸದಸ್ಯರನ್ನು ನೇಮಕ ಮಾಡಲು ತಾಲಿಬಾನ್​ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

    ಪಂಚಮಸಾಲಿ ಮೀಸಲಾತಿಗೆ ಸರ್ಕಾರಕ್ಕೆ ಗಡುವು ನೀಡಿದ ಶ್ರೀಗಳು

    ಡ್ರಗ್ಸ್​​ ಸೇವನೆ ಖಚಿತವಾದ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts